ದೆಹಲಿಯ ಅತಿ ಹಿರಿಯ, 111 ವರ್ಷದ ಬಚನ್ ಸಿಂಗ್ ರಿಂದ ಮತದಾನ
ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಗೆ 6 ನೇ ಹಂತದ ಮತದಾನ ನಡೆಯುತ್ತಿದ್ದು, ರಾಷ್ಟ್ರರಾಜಧಾನಿಯಲ್ಲಿ ಅತಿ ಹಿರಿಯ ವ್ಯಕ್ತಿ 111 ವರ್ಷದ ಬಚನ್ ಸಿಂಗ್ ಮತದಾನ ಮಾಡಿದ್ದಾರೆ.
ಬಚನ್ ಸಿಂಗ್ ಮತದಾರರ ಪಟ್ಟಿಯಲ್ಲಿರುವ ಅತಿ ಹಿರಿಯ ವ್ಯಕ್ತಿಯಾಗಿದ್ದು, ಮತದಾನ ಮಾಡುವಂತೆ ಚುನಾವಣಾ ಆಯೋಗ ಮತದಾನ ಮಾಡುವಂತೆ ಅವರ ಮನೆಗೆ ಬಂದು ಮನವಿ ಮಾಡಿತ್ತು. ಅಷ್ಟೇ ಅಲ್ಲದೇ ಅವರನ್ನು ಮತಗಟ್ಟೆಗೆ ಕರೆದೊಯ್ದು ವಾಪಸ್ ಮನೆಗೆ ತಲುಪಿಸುವುದಕ್ಕೂ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು.
ಮತದಾನ ಮಾಡಿರುವ ಶತಾಯುಷಿಗೆ ಪ್ರಮಾಣಪತ್ರವನ್ನು ನೀಡಲಾಗಿದ್ದು, ಬೊಕೆ ಹಾಗೂ ಮಗ್ ನೀಡಿ ಗೌರವಿಸಲಾಗಿದೆ.
ಪ್ರತಿ ಚುನಾವಣೆಯಲ್ಲೂ ಬಚನ್ ಸಿಂಗ್ ತಪ್ಪದೇ ಮತದಾನ ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ ಅವರು ಸೈಕಲ್ ನಲ್ಲಿ ಪತ್ನಿ ಜೊತೆ ತೆರಳಿ ಮತದಾನ ಮಾಡಿ ಬರುತ್ತಿದ್ದರು. 2-3 ವರ್ಷಗಳಿಂದಷ್ಟೇ ಈ ಅಭ್ಯಾಸ ತಪ್ಪಿದೆ ಎಂದು ಬಚನ್ ಸಿಂಗ್ ಮನೆಯ ಸದಸ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics