ಮಮತಾ ಬ್ಯಾನರ್ಜಿ ಫೋಟೋ ತಿರುಚಿದ್ದ ಬಿಜೆಪಿ ನಾಯಕಿ ಬಂಧನವನ್ನು ಸಮರ್ಥಿಸಿಕೊಂಡ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮ
ಮಮತಾ ಬ್ಯಾನರ್ಜಿ ಫೋಟೊ ತಿರುಚಿ ಬಂಧನಕ್ಕೊಳಗಾದ ಬಿಜೆಪಿ ನಾಯಕಿಯನ್ನು ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮ ಸಮರ್ಥಿಸಿಕೊಂಡಿದ್ದಾರೆ.
ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಉಡುಪು ವೈರಲ್ ಆಗಿತ್ತು. ಈ ಫೋಟೋಗೆ ಬಿಜೆಪಿ ನಾಯಕಿ ಪ್ರಿಯಾಂಕ ಶರ್ಮಾ ಎಂಬುವವರು ಮಮತಾ ಬ್ಯಾನರ್ಜಿ ಅವರ ಫೋಟೊವನ್ನು ತಿರುಚಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಬಿಜೆಪಿ ನಾಯಕಿಯನ್ನು ಸಮರ್ಥಿಸಿಕೊಂಡಿರುವ ಬಿಸ್ವ ಶರ್ಮ ಈ ರೀತಿಯ ಬಂಧನವಾಗಬಾರದು, ಈ ರೀತಿ ಬಂಧಿಸುತ್ತಿದ್ದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಈ ದೇಶದಲ್ಲಿ ಜಾಗವೇ ಇಲ್ಲದಂತಾಗುತ್ತದೆ. ಬಂಧನವನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಎಂದು ಹಿಮಂತ್ ಬಿಸ್ವ ಶರ್ಮ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos