ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಭೇಟಿ ಮಾಡಿದ ಕೆಸಿಆರ್ 
ದೇಶ

ಕಾಂಗ್ರೆಸ್‌ ಬೆಂಬಲ ಪಡೆಯಲು ಫೆಡರಲ್‌ ಫ್ರಂಟ್‌ ಸಿದ್ಧ, ಆದ್ರೆ ರಾಹುಲ್ ಗೆ ಡ್ರೈವರ್‌ ಸೀಟ್‌ ಕೊಡಲ್ಲ: ಟಿಆರ್ ಎಸ್

ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಸರ್ಕಾರ ರಚಿಸುವ ಅವಕಾಶ ಒದಗಿಬಂದರೆ ಪ್ರಾದೇಶಿಕ ಪಕ್ಷಗಳ ಪ್ರಸ್ತಾವಿತ ಫೆಡರಲ್ ಫ್ರಂಟ್ ಕಾಂಗ್ರೆಸ್ ಬೆಂಬಲ....

ಹೈದರಾಬಾದ್‌: ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಸರ್ಕಾರ ರಚಿಸುವ ಅವಕಾಶ ಒದಗಿಬಂದರೆ ಪ್ರಾದೇಶಿಕ ಪಕ್ಷಗಳ ಪ್ರಸ್ತಾವಿತ ಫೆಡರಲ್ ಫ್ರಂಟ್ ಕಾಂಗ್ರೆಸ್ ಬೆಂಬಲ ಪಡೆಯಲು ಸಿದ್ಧವಿದೆ. ಆದರೆ ಅದು ಚಾಲಕನ ಸ್ಥಾನವನ್ನು ಕೇಳಬಾರದು ಎಂದು ಟಿಆರ್‌ಎಸ್‌ ಮಂಗಳವಾರ ಹೇಳಿದೆ.
ಟಿಆರ್ ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಅವರು ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳ ಫೆಡರಲ್ ಫ್ರಂಟ್ ರಚನೆಗಾಗಿ ಕಳೆದ ಒಂದು ವರ್ಷದಿಂದ ಯತ್ನಿಸುತ್ತಿದ್ದಾರೆ. ಈಗಲೂ ತಮ್ಮ ಪ್ರಯತ್ನ ಮುಂದುವರೆಸಿರುವ ಕೆಎಸ್ ಆರ್ ಅವರು ಹಲವು ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ.
ಈ ಮಧ್ಯೆ, ಕೇಂದ್ರದಲ್ಲಿ ಫೆಡರಲ್‌ ಫ್ರಂಟ್‌ ಸರ್ಕಾರ ರಚಿಸುವ ಅವಕಾಶ ಒದಗಿದಲ್ಲಿ, ನಮ್ಮ ಪಕ್ಷ ರಾಹುಲ್‌ ಗಾಂಧಿ ಅವರ ಬೆಂಬಲ ಪಡೆಯಲು ಮುಕ್ತವಾಗಿದೆ ಎಂದು ಟಿಆರ್‌ಎಸ್‌ ವಕ್ತಾರ ಅಬೀದ್‌ ರಸೂಲ್‌ ಖಾನ್‌ ಅವರು ಹೇಳಿದ್ದಾರೆ.
ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದಿದ್ದರೆ ಕಾಂಗ್ರೆಸ್ ಬೆಂಬಲದೊಂದಿಗೆ ಫೆಡರಲ್ ಫ್ರಂಟ್ ಸರ್ಕಾರ ರಚಿಸಲು ಸಿದ್ಧವಿದೆ. ಆದರೆ ಫೆಡರಲ್‌ ಫ್ರಂಟ್‌ ಡ್ರೈವರ್‌ ಸೀಟಿನಲ್ಲಿದ್ದುಕೊಂಡು ಸರ್ಕಾರ ನಡೆಸಬೇಕು ಎಂಬ ದೃಢ ಅಭಿಪ್ರಾಯದ ಕೆಸಿಆರ್‌ ಅವರದ್ದಾಗಿದೆ ಎಂದು ಖಾನ್‌ ತಿಳಿಸಿದ್ದಾರೆ.
ಇದೇ ವೇಳೆ, ಫೆಡರಲ್ ಫ್ರಂಟ್ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಖಾನ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT