ದೇಶ

ಜನರ ತೀರ್ಪು ಮಮತಾ ಬ್ಯಾನರ್ಜಿಯ ಅಧಿಕಾರದ ಮದವನ್ನು ಹೋಗಲಾಡಿಸಲಿದೆ- ಪ್ರಧಾನಿ ಮೋದಿ

Nagaraja AB

ಟಾಕಿ:  ಮಮತಾ ಬ್ಯಾನರ್ಜಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಎಲ್ಲವನ್ನೂ ಹಾಳು ಮಾಡುತ್ತಿದೆ.  ಜನರ ತೀರ್ಪು ಮತ್ತು ಧೈರ್ಯ ದಬ್ಬಾಳಿಕೆಯ ಆಡಳಿತವನ್ನು ಹೋಗಲಾಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ  ವೇಳೆಯಲ್ಲಿ ಟಿಎಂಸಿ ಗೂಂಡಾಗಳ ದಾಳಿಯನ್ನು ಇಡೀ ದೇಶ ಟಿವಿ ಮೂಲಕ ನೋಡಿದೆ.ಪಶ್ಚಿಮ  ಬಂಗಾಳದಲ್ಲಿನ ಚುನಾವಣಾ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ ಎಂದರು.

 ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಅಮಿತ್ ಶಾ ರೋಡ್ ವೇಳೆಯಲ್ಲಿ ಟಿಎಂಸಿ ದಾಳಿ ನಡೆಸಿದೆ.ಮಮತಾ ಬ್ಯಾನರ್ಜಿಗೂಂಡಾಗಳು ಗನ್ ಗಳು ಹಾಗೂ ಬಾಂಬ್ ಗಳನ್ನು ಹೊಂದುವ ಮೂಲಕ ದಾಳಿ ನಡೆಸಿದ್ದಾರೆ. ಆಕೆಯ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಎಲ್ಲವನ್ನೂ ಹಾಳು ಮಾಡಿದೆ ಎಂದು ಆರೋಪಿಸಿದರು.

ಮಮತಾ ಬ್ಯಾನರ್ಜಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದರಿಂದ ಇಲ್ಲಿಯ ಜನರು ಗೌರವಿಸುತ್ತಿದ್ದಾರೆ. ಆದರೆ, ಅಧಿಕಾರದ ಮದವನ್ನೇರಿಸಿಕೊಂಡಿರುವ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡ ಮೇಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು .

ಮಮತಾ ಬ್ಯಾನರ್ಜಿ ಚಿಟ್ ಫಂಡ್ ಹಗರಣದಲ್ಲಿ ಜನರ ಹಣವನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ವಿವರಣೆ ಕೇಳಬಯಸಿದವರಿಗೆ ಬೈದಿದ್ದಾರೆ.ಪ್ರಜಾಪ್ರಭುತ್ವ ಮುಖ್ಯಮಂತ್ರಿ ಹುದ್ದೆ ನೀಡಿದೆ. ಆದರೆ, ಅವರು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದ್ದಾರೆ. ಇಡೀ ದೇಶ ಅವರ ದುರಂಹಕಾರದ ಆಡಳಿತವನ್ನು ನೋಡುಿದೆ. ರಾಜ್ಯದ ಬಾದ್ರಾ ಲೊಕ್ ಸಂಸ್ಕೃತಿ ಹಾಳಾಗಲು ಮಮತಾ ಬ್ಯಾನರ್ಜಿ ಹೊಣೆ ಎಂದು ನರೇಂದ್ರ ಮೋದಿ ಆರೋಪಿಸಿದರು
SCROLL FOR NEXT