ದೇಶ

'ಬಿಜೆಪಿ ನೇತೃತ್ವದ ಎನ್ ಡಿಎಗೆ 300 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು'

Srinivas Rao BV
ಬಿಜೆಪಿ ನೇತೃತ್ವದ ಎನ್ ಡಿಎಗೆ 300 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಮೇ.17 ರಂದು ಮಧ್ಯಪ್ರದೇಶದ ಖರ್ಗೋನ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 300ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ನೇತೃತ್ವದ ಎನ್ ಡಿಎ ಗೆಲ್ಲಲಿದೆ ಎಂದು ಹೇಳಿದ್ದಾರೆ. 
ತಮ್ಮನ್ನು ಮತ್ತೊಂದು ಅವಧಿಗೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಜನತೆ ನಿರ್ಧರಿಸಿದ್ದಾರೆ. ದಶಕಗಳ ನಂತರ ಎರಡನೇ ಅವಧಿಗೆ ಸ್ಪಷ್ಟ ಬಹುಮತವಿರುವ ಸರ್ಕಾರವನ್ನು ದೇಶದ ಜನತೆ ಆಯ್ಕೆ ಮಾಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಕಾಶ್ಮೀರದಿಂದ ಕಾನ್ಯಾಕುಮಾರಿ ವರೆಗೆ ಹಾಗೂ ಕಚ್ ನಿಂದ ಕಾಮರೂಪದವರೆಗೆ,  ಎಂದು ಈ ಬಾರಿ 300 ಕ್ಕೂ ಮೀರಿ (ಅಬ್ ಕೀ ಬಾರ್ 300 ಪಾರ್) ಇಡೀ ದೇಶವೇ ಹೇಳುತ್ತಿದೆ ಎಂದು ಮೋದಿ ತಿಳಿಸಿದ್ದಾರೆ. 
SCROLL FOR NEXT