ದೇಶ

ಲೋಕಾ ಸಮರ: ಅಂತಿಮ ಹಂತದ ಮತದಾನ, ಚು. ಆಯೋಗದಿಂದ ಬಂಗಾಳದಲ್ಲಿ ವ್ಯಾಪಕ ಭದ್ರತೆ

Srinivasamurthy VN
ಕೋಲ್ಕತಾ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಭಾನುವಾರ ನಡೆಯಲಿರುವ 7ನೇ ಹಾಗೂ ಅಂತಿಮ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನ ಪ್ರಕ್ರಿಯೆಗೆ ಅಭೂತಪೂರ್ವ ಭದ್ರತೆ ಒದಗಿಸಿದೆ.
ನಾಳೆ ನಡೆಯಲಿರುವ 7ನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಒಟ್ಟು 8 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಉತ್ತರ ಪ್ರದೇಶ ಮತ್ತು ಪಂಜಾಬ್ ನ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9,  ಬಿಹಾರ ಮತ್ತು ಮದ್ಯ ಪ್ರದೇಶದ ತಲಾ  ಕ್ಷೇತ್ರಗಳು, ಹಿಮಾಚಲ ಪ್ರದೇಶದ ನಾಲ್ಕು, ಜಾರ್ಖಂಡ್ ನ ಮೂರು ಮತ್ತ ಕೇಂದ್ರಾಡಳಿತ ಪ್ರದೇಶ ಚಂಡೀಘಡದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಇನ್ನು ಮತದಾನಕ್ಕೆ ಆಯೋಗ ಅಭೂತಪೂರ್ವ ಭದ್ರತೆ ನಿಯೋಜನೆ ಮಾಡಿದ್ದು, ಪಶ್ಚಿಮ ಬಂಗಾಳವೊಂದರಲ್ಲೇ ಭದ್ರತಾ ಪಡೆಗಳ ಬರೊಬ್ಬರಿ  710 ಕಂಪನಿಯನ್ನು ಭದ್ರತೆ ನಿಯೋಜಿಸಲಾಗಿದೆ. ಈ ಹಿಂದೆ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿ ವ್ಯಾಪಕ ಹಿಂಸಾಚಾರ ಸೃಷ್ಟಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಇಲ್ಲಿ ಶೇ.100 ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಂಗಾಳದ ಕೊಲ್ಕತ್ತಾ ಉತ್ತರ, ಕೊಲ್ಕತ್ತಾ ದಕ್ಷಿಣ, ದಮ್ ದಮ್, ಬಾರಾಸತ್, ಬಸಿರ್ಹತ್, ಜಾದವ್ ಪುರ, ಡೈಮಂಡ್ ಹಾರ್ಬರ್, ಜಯನಗರ (SC) ಮತ್ತು ಮಾಥುಪುರ ಕ್ಷೇತ್ರಗಳಿಗೆ ಭದ್ರತಾ ಪಡೆಗಳ ಬರೊಬ್ಬರಿ  710 ಕಂಪನಿಯನ್ನು ಭದ್ರತೆ ನಿಯೋಜಿಸಲಾಗಿದ್ದು, ಈ ಪೈಕಿ 512 ತುರ್ತು ಪ್ರಹಾರ ದಳಗಳೂ ಸೇರಿವೆ. ರಾಜದಾನಿ ಕೋಲ್ಕತಾ ಪೊಲೀಸರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ಭದ್ರತೆಗಾಗಿಯೇ 147 ಕಂಪನಿಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತೀ ಪೊಲೀಸ್ ಠಾಣೆಗೆ ತಲಾ 2 ಕಂಪನಿಗಳಂತೆ ಈ 147 ಕಂಪನಿ ಭದ್ರತಾ ಸಿಬ್ಬಂದಿಗಳನ್ನು ಹಂಚಿಕೆ ಮಾಡಲಾಗಿದೆ. 
SCROLL FOR NEXT