ದೇಶ

ಲೋಕಸಭಾ ಚುನಾವಣೋತ್ತರ ಸಮೀಕ್ಷೆ-2019: ಎನ್ ಡಿಎಗೆ ಬಹುಮತ,ಮೋದಿ ಮತ್ತೊಮ್ಮೆ ಅಧಿಕಾರಕ್ಕೆ!

Srinivas Rao BV
ನವದೆಹಲಿ: ಲೋಕಸಭಾ ಚುನಾವಣೆ 2019 ರ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಸಿ-ವೋಟರ್ ಸಮೀಕ್ಷೆಯ ಪ್ರಕಾರ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ. 
ನ್ಯೂಸ್ ಎಕ್ಸ್, ಸಿ-ವೋಟರ್, ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಎನ್ ಡಿಎ 272 ರ ಮ್ಯಾಜಿಕ್ ನಂಬರ್ ನ್ನು ಸುಲಭವಾಗಿ ದಾಟಲಿದ್ದು ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. 
ನ್ಯೂಸ್ ಎಕ್ಸ್ ಸಮೀಕ್ಷೆಯ ಪ್ರಕಾರ ಎನ್ ಡಿಎ ಗೆ 298 ಸ್ಥಾನಗಳು ಲಭಿಸಲಿದ್ದು, ಯುಪಿಎ ಗೆ 118 ಸ್ಥಾನ ಇತರರಿಗೆ 126 ಸ್ಥಾನಗಳು ಲಭಿಸಲಿದೆ ಎಂದು ಹೇಳಿದೆ. 

ಇನ್ನು ಟೈಮ್ಸ್ ನೌ ಪ್ರಕಾರ ಎನ್ ಡಿಎ ಗೆ 306, ಯುಪಿಎ ಗೆ 132, ಇತರರು 104 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. 

ಉಳಿದ ಸಮೀಕ್ಷೆಯ ವಿವರ ಹೀಗಿದೆ:
ಸಂಸ್ಥೆಬಿಜೆಪಿ(ಎನ್​ಡಿಎ)ಕಾಂಗ್ರೆಸ್(ಯುಪಿಎ)ಇತರರು
ಚಾಣಕ್ಯ 34070133
ಸಿವೋಟರ್   287128  127
ಎಬಿಪಿ ನ್ಯೂಸ್-ಸಿಎಸ್ ಡಿಎಸ್   33655  148
ಟೈಮ್ಸ್ ನೌ-ಸಿಎನ್ ಎಕ್ಸ್  306132  104
ಇಂಡಿಯಾ ಟುಡೆ- ಆಕ್ಸಿಸ್ 

ನ್ಯೂಸ್18-ಪಿಎಸ್ಒಎಸ್ 33682124
ನ್ಯೂಸ್ ಎಕ್ಸ್- ನೇತಾ 298118  126
ರಿಪಬ್ಲಿಕ್ ಭಾರತ್- ಜನ್ ಕೀ ಭಾತ್ 305124  113
ಪೋಲ್ ಆಫ್ ಪೋಲ್ಸ್  ನಲ್ಲಿಯೂ ಸಹ ಎನ್ ಡಿಎ ಗೆ ಅಧಿಕಾರ ಸಿಗುವುದು ನಿಚ್ಚಳವಾಗಿದ್ದು, ಎನ್ ಡಿಎ ಗೆ 296 ಸ್ಥಾನ ದೊರೆತರೆ, ಯುಪಿಎ ಗೆ 126, ಇತರರು 120 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. 
SCROLL FOR NEXT