ಚುನಾವಣೋತ್ತರ ಸಮೀಕ್ಷೆ, ಉತ್ತರ ಪ್ರದೇಶದಲ್ಲಿ ತಗ್ಗಿದ ಕೇಸರಿ ಅಲೆ
ಕೇಂದ್ರದಲ್ಲಿ ಅಧಿಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಅಲೆ ತಗ್ಗಿಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಉತ್ತರ ಪ್ರದೇಶ: ಕೇಂದ್ರದಲ್ಲಿ ಅಧಿಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಕೇಸರಿ ಅಲೆ ತಗ್ಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಎಬಿಪಿ ನ್ಯೂಸ್ ಪ್ರಕಾರ ಎನ್ ಡಿಎ 22, ಯುಪಿಎ 2 ಹಾಗೂ ಇತರರು 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎನ್ನಲಾಗಿದೆ.
ಟೈಮ್ಸ್ ನೌ ಪ್ರಕಾರ ಎನ್ ಡಿಎ 43, ಕಾಂಗ್ರೆಸ್ 2, ಇತರರು 25 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.
ರಿಪಬ್ಲಿಕ್ ಪ್ರಕಾರ ಎನ್ ಡಿಎ 38, ಯುಪಿಎ 2 ಹಾಗೂ ಇತರರು 40 ಕ್ಷೇತ್ರಗಳಲ್ಲಿ ಜಯಿಸುವ ಸಾಧ್ಯತೆ ಹೆಚ್ಚಾಗಿದೆ.
ಎನ್ ಡಿ ಟಿವಿ ಪ್ರಕಾರ ಬಿಜೆಪಿ 55, ಮಹಾಘಟಬಂಧನ 23 ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.