ದೇಶ

ಲೋಕಸಮರ: ಕಡೆ ಹಂತದ ಮತದಾನ ಪ್ರಾರಂಭಮ್ ರಾಜ್ಯದ ಚಿಂಚೋಳಿ, ಕುಂದಗೋಳದಲ್ಲೂ ಉಪಚುನಾವಣೆ

Raghavendra Adiga
ನವದೆಹಲಿ: 38 ದಿನಗಳ ಹಿಂದೆ ಪ್ರಾರಂಭವಾಗಿರುವ ಲೋಕಸಭೆ ಚುನಾವಣೆ ಕಡೆಯ ಹಂತದ ಮತದಾನ ಇಂದು (ಭಾನುವಾರ) ಪ್ರಾರಂಭವಾಗಿದೆ. ಎಂಟು ರಾಜ್ಯಗಳ 59  ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು ವಾರಣಾಸಿಯಲ್ಲಿ ನರೇಂದ್ರ ಮೋದಿ, ಪಟ್ನಾ ಸಾಹೇಬ್ ನಲ್ಲಿ ಶತ್ರುಘ್ನ ಸಿನ್ಹಾ ಸೇರಿದಂತೆ ಅನೇಕ ಮಹತ್ವದ ನಾಯಕರ ಭವಿಷ್ಯ ಇಂದು ಇವಿಎಂ ನಲ್ಲಿ ಭದ್ರವಾಗಲಿದೆ.
ಪಂಜಾಬ್ 13 ಉತ್ತರ ಪ್ರದೇಶದ 13 ಪಶ್ಚಿಮ ಬಂಗಾಳ 9, ಮಧ್ಯ ಪ್ರದೇಶ ಹಾಗೂ ಬಿಜಾರದ 8 ಹಿಮಾಚಲ ಪ್ರದೇಶದ ನಾಲ್ಕು, ಜಾರ್ಖಂಡ್ ಮುರು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಘರದ ಒಂದು ಕ್ಷೇತ್ರಕ್ಕೆ ಇಂದು ಮತದಾನವಿದೆ.
ವಾರಣಾಸಿಯಲ್ಲಿ ಪ್ರಧಾನಿ ಮೋದಿ ಹೊರತಾಗಿ  918 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.ಕಾನೂನು ಸಚಿವ ರವಿಶಂಕರ್ ಪ್ರಸಾದ್,  ಶತ್ರುಘ್ನ ಸಿನ್ಹಾ, ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಪುತ್ರಿ ಮಿಶಾ ಭಾರತಿ, ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಪ<ಜಾಬ್ ನ ಮಾಜಿ ಸಿಎಂ ಸುಖಬೀರ್ ಸಿಂಗ್ ಬಾದಲ್ ಮತ್ತು ಬಿಜೆಪಿ ನಾಯಕ ಕಿರಣ್ ಖೇರ್ ಮೊದಲಾದವರು.
ಚಿಂಚೋಳಿ, ಕುಂದಗೋಳದಲ್ಲಿ ಉಪಚುನಾವಣೆ
ರಾಜ್ಯದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭೆ ಕ್ಷೇತ್ರಗಳಿಗೆ ಸಹ ಇಂದು ಉಪಚುನಾವಣೆ ನಡೆಯುತ್ತಿದ್ದು ಉಮೇಶ್ ಜಾಧವ್ ಪುತ್ರ ಹಾಗೂ ಸಿ.ಎಸ್. ಶಿವಳ್ಳಿ ಪತ್ನಿ ಸೇರಿ ಪ್ರಮುಖ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
SCROLL FOR NEXT