ದೇಶ

ಟಿವಿ ಆಫ್ ಮಾಡುವ ಸಮಯ ಬಂದಿದೆ: ಚುನಾವಣೋತ್ತರ ಸಮೀಕ್ಷೆ ಕುರಿತು ಒಮರ್ ಅಬ್ದುಲ್ಲಾ ಟ್ವೀಟ್

Srinivasamurthy VN
ಶ್ರೀನಗರ: ಅಂತಿಮ ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಈ ಸಮೀಕ್ಷೆಗಳ ಅಧಿಕೃತತೆಯನ್ನೇ ವಿಪಕ್ಷಗಳು ಮಾಡಿವೆ.
ಈ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೇರಿದಂತೆ ಬಹುತೇಕ ನಾಯಕರು ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿದ್ದು. ಈ ಪಟ್ಟಿಗೆ ಇದೀಗ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಕೂಡ ಸೇರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, ಎಲ್ಲ ಎಕ್ಸಿಟ್ ಪೋಲ್ ಗಳೂ ಸರಿಯಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲ ಸಮೀಕ್ಷೆಗಳಲ್ಲೂ ಒಂದೇ ತೆರನಾದ ಫಲಿತಾಂಶ ಬಂದಾಗ ಅನುಮಾನ ಮೂಡುತ್ತದೆ. ಆದರೂ ಇದೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಆಗ ಸಂಪೂರ್ಣ ಚಿತ್ರಣ ದೊರೆಯುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಟಿವಿಗಳನ್ನು ಆಫ್ ಮಾಡುವ ಸಮಯಬಂದಿದ್ದು, ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳನ್ನು ತಾತ್ಕಾಲಿಕವಾಗಿ ಲಾಗೌಟ್ ಮಾಡಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.
SCROLL FOR NEXT