ನಿಗದಿತ ಬೂತ್ ಗೆ ಹೋಗುವ ಮುನ್ನ ಇವಿಎಂನ್ನು ಪರೀಕ್ಷಿಸಿದ ಚುನಾವಣಾಧಿಕಾರಿ
ಗಾಝಿಪುರ/ಝಾನ್ಸಿ: ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ನಿರ್ವಹಣೆ ಮತ್ತು ಸಂಗ್ರಹಣೆಯಲ್ಲಿ ಲೋಪದೋಷಗಳಾಗಿವೆ ಎಂಬ ಆರೋಪವನ್ನು ಭಾರತೀಯ ಚುನಾವಣಾ ಆಯೋಗ ನಿರಾಕರಿಸಿದೆ. ಆರೋಪ ನಿರಾಧಾರ ಎಂದು ಹೇಳಿದೆ.
ಗಾಜಿಪುರ ಸಂಸದೀಯ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಗಳ ಮೇಲೆ ಅಭ್ಯರ್ಥಿಗಳು ಕಣ್ಗಾವಲು ಇರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದನ್ನು ಮತದಾನ ಆಯುಕ್ತರ ಸಲಹೆಯಂತೆ ಬಗೆಹರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅನುಮತಿ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಗಾವಲು ಅಧಿಕಾರಿಗಳನ್ನು ಭದ್ರತಾ ಕೊಠಡಿಗಳಿಗೆ ನಿಯೋಜಿಸಬೇಕೆಂದು ಕೆಲವು ಅಭ್ಯರ್ಥಿಗಳು ಬೇಡಿಕೆಯಿಟ್ಟಿದ್ದನ್ನು ನಿರಾಕರಿಸಲಾಯಿತು ಇದರಿಂದ ಆಧಾರರಹಿತ ಆರೋಪಗಳು ಎದುರಾಯಿತು ಎಂದು ಗಾಜಿಪುರ ಜಿಲ್ಲಾಡಳಿತ ತಿಳಿಸಿದೆ.
ಇ.ವಿ.ಎಂಗಳು ಕಣ್ಗಾವಲಿನಲ್ಲಿರುವ ಮೊಹರು ಹಾಕಲ್ಪಟ್ಟ ಕೋಣೆಗಳಲ್ಲಿ ಅಭ್ಯರ್ಥಿಗಳನ್ನು ನಿಷೇಧಿಸಲಾಗಿದೆ ಎಂಬ ವರದಿಗಳು ನಿಜವಲ್ಲ. ಇವಿಎಂ ಕಣ್ಗಾವಲು ಕೊಠಡಿಗಳ ಹತ್ತಿರದ ವಾಂಟೇಜ್ ಪಾಯಿಂಟ್ ಗಳಲ್ಲಿ ತಮ್ಮ ಒಬ್ಬ ಪ್ರತಿನಿಧಿಯನ್ನು ನಿಯೋಜಿಸಲು ಅಭ್ಯರ್ಥಿಗಳಿಗೆ ನಾವು ಪಾಸ್ ಗಳನ್ನು ನೀಡುತ್ತೇವೆ. ಕೆಲವು ಅಭ್ಯರ್ಥಿಗಳು ಹೆಚ್ಚಿನ ಪ್ರತಿನಿಧಿಗಳು ಬೇಕೆಂದು ಕೇಳಿದರು. ಆದರೆ ಆ ಪ್ರದೇಶದ ಭದ್ರತೆ ದೃಷ್ಟಿಯನ್ನು ನೋಡಿಕೊಂಡು ಅನುಮತಿಯನ್ನು ನಿರಾಕರಿಸಲಾಯಿತು ಎಂದು ಗಾಜಿಪುರ ಜಿಲ್ಲಾಧಿಕಾರಿ ಕೆ ಬಾಲಾಜಿ ಹೇಳಿದ್ದಾರೆ.
ಅಭ್ಯರ್ಥಿಗಳ ಸಮ್ಮುಖದಲ್ಲಿ ಪ್ರೊಟಾಕಾಲ್ ನಂತೆ ಸರಿಯಾದ ಭದ್ರತೆ ನಡುವೆ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿಟ್ಟ ಬಗ್ಗೆ ಝಾನ್ಸಿ ಕ್ಷೇತ್ರದಲ್ಲಿ ಎದ್ದ ಪ್ರಶ್ನೆಯನ್ನು ಚುನಾವಣಾ ಆಯೋಗ ನಿರಾಕರಿಸಿದೆ.
ಕೆಲವು ಮತದಾನಕ್ಕೆ ತಡವಾಗಿ ಬಂದರು, ಆದರೂ ಎಲ್ಲಾ ಇವಿಎಂಗಳನ್ನು ಭದ್ರತಾ ಕೊಠಡಿಯಲ್ಲಿ ಬೆಳಗ್ಗೆ 7 ಗಂಟೆ ಹೊತ್ತಿಗೆ ತಂದಿಡಲಾಗಿದೆ. ಸಾಮಾನ್ಯ ವೀಕ್ಷಕರು ಮತ್ತು ಅಭ್ಯರ್ಥಿಗಳ ಸಮ್ಮುಖದಲ್ಲಿ ಸಿಸಿಟಿವಿ ಕಣ್ಗಾವಲಿನೊಂದಿಗೆ ಭದ್ರತಾ ಕೊಠಡಿಗಳನ್ನು ಸೀಲ್ ಮಾಡಲಾಗಿತ್ತು ಎಂದು ಝಾನ್ಸಿ ಜಿಲ್ಲಾ ಚುನಾವಣಾಧಿಕಾರಿ ಶಿವ ಸಹಯ್ ಅವಸ್ತಿ ತಿಳಿಸಿದ್ದಾರೆ.