ದೇಶ

ಇದು ಆರಂಭ ಅಷ್ಟೇ,ರಾಜಕೀಯ ಬಿಡಲ್ಲ- ಉರ್ಮಿಳಾ ಮಾತೋಂಡ್ಕರ್‌

Nagaraja AB

ಮಹಾರಾಷ್ಟ್ರ:  ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಪರಾಜಿತರಾಗಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಗೋಪಾಲ್ ಶೆಟ್ಟಿ ಎದುರು ಸೋಲಿಗೆ ಶರಣಾಗಿರುವ ಉರ್ಮಿಳಾ ಮಾತೋಂಡ್ಕರ್, ಇದು ಆರಂಭ ಅಷ್ಟೇ, ರಾಜಕೀಯ ಬಿಡಲ್ಲ ಎಂಬ ಮಾತುಗಳನ್ನಾಡಿದ್ದಾರೆ.

ಮಾತೋಂಡ್ಕರ್ ಅವರಿಗಿಂತ ಗೋಪಾಲ್ ಶೆಟ್ಟಿ 4 ಲಕ್ಷದ 52 ಸಾವಿರದ 226 ಮತಗಳ ಭಾರಿ  ಅಂತರದಿಂದ ಗೆಲುವು ಸಾಧಿಸಿದ್ದು, ನನ್ನಗೆ ಇದೊಂದು ಅದ್ಬುತ ಹೋರಾಟವಾಗಿತ್ತು. ಅತಿಯಾದ ಗೌರವದೊಂದಿಗೆ  ಉತ್ಸಾಹದಿಂದ ಚುನಾವಣಾ ಕಣದಲ್ಲಿ ಹೋರಾಟ ನಡೆಸಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ಅನುಭವ ಅದ್ಬುತವಾಗಿತ್ತು. ನನ್ನ ಪಯಣದ ಬಗ್ಗೆ ಹೆಮ್ಮೆ ಇದೆ. ಇದು ಆರಂಭವಷ್ಟೇ. ಇಲ್ಲಿಂದ ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ. ಅದಕ್ಕಾಗಿ ಸಿದ್ಧವಾಗಿ ಇರುವುದಾಗಿ ಉರ್ಮಿಳಾ ಮಾತೋಂಡ್ಕರ್ ತಿಳಿಸಿದರು.

ಗೋಪಾಲ್ ಶೆಟ್ಟಿ ಅವರನ್ನು ಅಭಿನಂದಿಸುವುದಾಗಿ ಹೇಳಿದ ಮಾತೋಂಡ್ಕರ್, ಇವಿಎಂ ದೋಷದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.

SCROLL FOR NEXT