ವಾರಣಾಸಿಯಲ್ಲಿ ನರೇಂದ್ರ ಮೋದಿ ಮುನ್ನಡೆ, ಅಮೇಥಿ, ರಾಯ್ ಬರೇಲಿಯಲ್ಲಿ ರಾಹುಲ್, ಸೋನಿಯಾಗೆ ಹಿನ್ನಡೆ
ಗುರುವಾರ ಬೆಳಗ್ಗೆ 8 ಗಂಟೆಗೆ ದೇಶಾದ್ಯಂತ ಆರಂಭವಾದ ಮತ ಎಣಿಕೆ ಕ್ಷಣಕ್ಷಣಕ್ಕೂ ಕುತೂಹಲ ...
ನವದೆಹಲಿ: ಗುರುವಾರ ಬೆಳಗ್ಗೆ 8 ಗಂಟೆಗೆ ದೇಶಾದ್ಯಂತ ಆರಂಭವಾದ ಮತ ಎಣಿಕೆ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಕೇಂದ್ರದಲ್ಲಿ ಏನಾಗುತ್ತದೆ, ರಾಜ್ಯದಲ್ಲಿ ಯಾವ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲದಲ್ಲಿ ಜನರಿದ್ದಾರೆ.
ಚುನಾವಣಾ ಆಯೋಗದ ಆರಂಭದ ಮಾಹಿತಿ ಪ್ರಕಾರ ಎನ್ ಡಿಎ 314, ಯುಪಿಎ 112 ಮತ್ತು ಇತರ ಪಕ್ಷಗಳು 105 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
ರಾಹುಲ್ ಗಾಂಧಿಗೆ ವಯನಾಡಲ್ಲಿ ಮುನ್ನಡೆ, ಅಮೇಠಿಯಲ್ಲಿ ಹಿನ್ನಡೆ ಕಂಡಿದ್ದಾರೆ. ರಾಯ್ ಬರೇಲಿಯಲ್ಲಿ ಕೂಡ ಸೋನಿಯಾ ಗಾಂಧಿ ಹಿನ್ನಡೆ ಕಾಣುತ್ತಿದ್ದಾರೆ. ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಲ್ಲಿ ಬಿಜೆಪಿಯ ಬಾಬುಲ್ ಸುಪ್ರಿಯೊ ಮುನ್ನಡೆ. ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅಳಿಯನಿಗೆ ಹಿನ್ನಡೆ. ಉತ್ತರ ಪ್ರದೇಶದ ಉನ್ನಾವೊ ಕ್ಷೇತ್ರದಲ್ಲಿ ಬಿಜೆಪಿಯ ಸಾಕ್ಷಿ ಮಹಾರಾಜ್ಗೆ 20,000 ಮತಗಳ ಮುನ್ನಡೆ.
ಕೇರಳದಲ್ಲಿ ಯುಡಿಎಫ್ ಮುನ್ನಡೆ. ತಮಿಳುನಾಡಿನ 29 ಕ್ಷೇತ್ರಗಳಲ್ಲಿ ಡಿಎಂಕೆ ಮುನ್ನಡೆ. ಆರಂಭಿಕ ಟ್ರೆಂಡ್ ಪ್ರಕಾರ, ತೆಲಂಗಾಣದಲ್ಲಿ ಟಿಆರ್ಎಸ್ ಹೆಚ್ಚು ಸ್ಥಾನಗಳನ್ನು ಗಳಿಸುವ ನಿರೀಕ್ಷೆ. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಬಹುಮತ ಸಾಧಿಸುವ ಸಾಧ್ಯತೆ ದಟ್ಟವಾಗಿದೆ. ಲೋಕಸಭಾ ಕ್ಷೇತ್ರಗಳಲ್ಲಿ ಜಗನ್ ನೇತೃತ್ವದ ಪಕ್ಷಕ್ಕೆ ಟಿಡಿಪಿ ಪ್ರಬಲ ಪೈಪೋಟಿ ನೀಡುತ್ತಿದೆ.
ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುನ್ನಡೆ. ಗಾಂಧಿನಗರದಲ್ಲಿ ಅಮಿತ್ ಶಾ 25,000 ಮತಗಳಿಂದ ಮುನ್ನಡೆ. ಅಮೇಠಿಯಲ್ಲಿ ಸ್ಮೃತಿ ಇರಾನಿ 2,000 ಮತಗಳ ಮುನ್ನಡೆ. ಪಶ್ಚಿಮ ದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿ 4,000ಕ್ಕೂ ಅಧಿಕ ಮತಗಳ ಮುನ್ನಡೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಮುನ್ನಡೆ.