ದೇಶ

ಮಹಾಘಟಬಂಧನ್ ಗೆ ಮರ್ಮಾಘಾತ: ಮೋದಿ ಸುನಾಮಿಗೆ ಪ್ರತಿಪಕ್ಷಗಳು ಧೂಳಿಪಟ: ಬಿಜೆಪಿಗೆ ಬಹುಮತ!

Srinivas Rao BV
ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮೋಡಿ ಮರುಕಳಿಸಿದ್ದು, ಮಹಾಘಟಬಂಧನ್ ಗೆ ಮರ್ಮಾಘಾತ ಉಂಟಾಗಿದೆ.
ಮಧ್ಯಾಹ್ನ 12:30 ರ ವೇಳೆಗೆ ಮತ ಎಣಿಕೆ ಕಾರ್ಯ ನಿರ್ಣಾಯಕ ಹಂತ ತಲುಪಿದ್ದು, ಚುನಾವಣಾ ಫಲಿತಾಂಶದ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದೆ. ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಎನ್ ಡಿಎ ಮಧ್ಯಾಹ್ನ 12:30 ರ ವೇಳೆಗೆ 345 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ ಬಿಜೆಪಿ ಒಂದೇ ಪಕ್ಷ 292 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಕಳೆದ ಬಾರಿಯಂತೆ ಸ್ವತಂತ್ರವಾಗಿ, ಯಾವುದೇ ಬೆಂಬಲ ಇಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವತ್ತ ಹೆಜ್ಜೆ ಹಾಕಿದೆ. 
ಮೋದಿ ವಿರುದ್ಧ ಅಬ್ಬರಿಸಿದ ಕಾಂಗ್ರೆಸ್ ನೇತೃತ್ವದ ಮಹಾಘಬಂಧನ್ ಗೆ ಚುನಾವಣಾ ಫಲಿತಾಂಶದ ಟ್ರೆಂಡ್ ಅಕ್ಷರಶಹ ಮರ್ಮಾಘಾತ ಉಂಟುಮಾಡಿದ್ದು, ಕಾಂಗ್ರೆಸ್ ಪಕ್ಷ ಕೇವಲ 50 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. 
ರಾಜ್ಯದಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತೀವ್ರ ಮುಖಭಂಗ ಉಂಟಾಗಿದ್ದು, ಕೇವಲ 3 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. 
SCROLL FOR NEXT