ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ದ ಸಮರಕ್ಕೆ ಸಜ್ಜಾಗಿವೆ, ಆದರೆ ರಾಜ್ಯದ ಹಲವು ಸಣ್ಣಪುಟ್ಟ ಪಕ್ಷಗಳು ಲೋಕಸಭೆ ಚುನಾವಣೆಯಿಂದ ದೂರವೇ ಉಳಿದಿವೆ.
ಆಮ್ ಆದ್ಮಿ ಪಕ್ಷ, ಸರ್ವೋದಯ ಕರ್ನಾಟಕ, ಸ್ವರಾಜ್ ಇಂಡಿಯಾ, ಕಮ್ಯೂನಿಸ್ಟ್ ಪಕ್ಷ, ಕನ್ನಡ ಚಳುವಳಿ ವಾಟಾಳ್ ಪಕ್ಷ, ಮತ್ತಿತರರ ಪಕ್ಷಗಳು ದೂರವೇ ಉಳಿದಿವೆ, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಈ ವೇಳೆ ಮಧ್ಯಮವರ್ಗ, ಹಾಗೂ ನಗರದ ವಿದ್ಯಾವಂತ ಮತದಾರರನ್ನು ಸೆಳೆದಿತ್ತು, ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಪಕ್ಷ ವಿಭಜನೆಯಿಂದಾಗಿ ಎಎಪಿ ಈ ಬಾರಿಯ ಚುನಾವಣೆಯಲ್ಲಿ ರಿಸ್ಕ್ ತೆಗೆದುಕೊಳ್ಳದೇ ಇರಲು ನಿರ್ಧರಿಸಿದೆ.
ಪಕ್ಷವನ್ನು ಸಂಘಟಿಸಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದಿತ್ತು, ಆದರೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಎಎಪಿ ಪದಮಮ್ಮ ತಿಳಿಸಿದ್ದಾರೆ.
ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ, ದಲಿತ ಬರಹಗಾರ ದೇವನೂರು ಮಹಾದೇವ ಮತ್ತಿತತರರು ಸ್ಥಾಪಿಸಿದ ಸರ್ವೋದಯ ಕರ್ನಾಟಕ ಯೋಗೇಂದ್ರ ಯಾದವ್ ಅವರ ಸ್ವರಾಜ್ ಇಂಡಿಯಾ ಪಕ್ಷದಲ್ಲಿ ವಿಲೀನವಾಗಿದೆ, ಈ ಎಲ್ಲಾ ಪಕ್ಷಗಳು ಈ ಬಾರಿಯ ಚುನಾವಣೆಯಿಂದ ದೂರ ಇರಲು ನಿರ್ಧರಿಸಿದ್ದಾರೆ.
2018 ರ ಮಂಡ್ಯ ವಿಧಾನಸಭೆ ಚುನಾವಣೆ ವೇಳೆ ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಸೋಲನುಭವಿಸಿತು, ಮಂಡ್ಯದಲ್ಲಿ ಉತ್ತಮ ಬೆಂಬಲವಿದ್ದರೂ ಮಂಡ್ಯದಲ್ಲಿ ಸೋಲುಂಟಾಯಿತು, ಹೀಗಾಗಿ ಈ ಬಾರಿ ಚುನಾವಣೆಗೆ ನಿಲ್ಲದೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ. ಸುಮಲತಾ ಸಂಸತ್ತಿನಲ್ಲಿ ಮಂಡ್ಯ ಜನ ದನಿಯಾಗಲಿದ್ದಾರೆ ಎಂದು ಹೇಳಿದೆ.
ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ನಾಗೇಂದ್ರ ಮೊದಲಿಗೆ ಮಂಡ್ಯದಿಂದ ಸ್ಪರ್ಧಿಸಲು ನಿರ್ಧರಿಸಿದ್ದರು, ಆದರೆ ನಂತರ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ.
ಸಮಾಜವಾದಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಹಾಗೂ ಜನತಾ ದಳ(ಯು) ಮತ್ತು ವೋಕ ಜನಶಕ್ತಿ ಪಾರ್ಟಿಗಳ ಸಂಘಟನೆ ಬಲಹೀನಗೊಂಡಿರುವ ಹಿನ್ನಲೆಯಲ್ಲಿ ಚುನಾವಣೆಯಿಂದ ದೂರವುಳಿದಿವೆ.
ಆದರೆ ಹಿರಿಯ ನಟ ಉಪೇಂದ್ರ ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ, ಪ್ರಜಾಪ್ರಭುತ್ವದಲ್ಲಿ ಹಲವು ಪಕ್ಷಗಳು ಹುಟ್ಟಿ ಸತ್ತಿವೆ ಎಂದು ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ತಿಳಿಸಿದ್ದಾರೆ.