ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕರ್ನಾಟಕ

ಅಂಬರೀಶ್ ಮಂಡ್ಯದ ಮಗ, ಸುಮಲತಾ ಮಂಡ್ಯ ಸೊಸೆ: ಪ್ರಚಾರದಲ್ಲಿ ಯಶ್

ಅಂಬರೀಶ್ ಮಂಡ್ಯದ ಮಗ, ಸುಮಲತಾ ಅವರು ಮಂಡ್ಯ ಸೊಸೆ, ಭಾರತದಲ್ಲಿ ಮಂಡ್ಯ ಎಂದು ಬಂದರೆ ಅಲ್ಲಿ ಅಂಬರೀಶ್ ಹೆಸರು ಬಂದೇ ಬರುತ್ತದೆ. ...

ಸುಮಲತಾ ಪರವಾಗಿ ನಟ ಯಶ್ ಪ್ರಚಾರ
Shilpa D
Updated On : 2 Apr 2019, 4:25 am
ಮಂಡ್ಯ: ಅಂಬರೀಶ್ ಮಂಡ್ಯದ ಮಗ, ಸುಮಲತಾ ಅವರು ಮಂಡ್ಯ ಸೊಸೆ,  ಭಾರತದಲ್ಲಿ ಮಂಡ್ಯ ಎಂದು ಬಂದರೆ ಅಲ್ಲಿ ಅಂಬರೀಶ್ ಹೆಸರು ಬಂದೇ ಬರುತ್ತದೆ. ಮಂಡ್ಯ ಜನತೆಯ ಮೇಲೆ ಅವರು ತುಂಬಾ ಪ್ರೀತಿ ಇಟ್ಟುಕೊಂಡಿದ್ದರು ಎಂದು ನಟ ಯಶ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ನಮ್ಮ ಜೀವನದಲ್ಲಿ ನಾವು ನಡೆದು ಬಂದ ಹಾದಿಯನ್ನು ಯಾವತ್ತು ಮರೆಯಬಾರದು ಎಂದು ಹೇಳಿದ್ದಾರೆ. 
 ಯಾರು ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿರುತ್ತಾರೆ. ಅಂತಹ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ನಿಜವಾದ ವ್ಯಕ್ತಿತ್ವವಾಗಿದೆ. ಅಂಬರೀಶ್ ಅಣ್ಣ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿ ಎಂದು ಹೇಳಿದರು.

Advertisement

Advertisement

ನಾನು ಚಿತ್ರರಂಗಕ್ಕೆ ಬಂದಾಗ,  ಯಾರೂ ನಮ್ಮನ್ನು ಗುರುತಿಸುತ್ತಿರಲಿಲ್ಲ, ಆದರೂ ಅಂಬರೀಶ್ ಅಣ್ಣ  ಗೌರವ ಕೊಟ್ಟು ನಮ್ಮ ಬೆನ್ನು ತಟ್ಟಿದ್ದಾರೆ. ನಮಗೆ ಮಾತ್ರವಲ್ಲ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅದನ್ನು ನೆನಪಿಸಿಕೊಂಡು ನಾನು ಇಂದು ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂದರು. ನಂಬರ್ 20 ಕಹಳೆ ಊದುತ್ತಿರುವ ರೈತನ ಗುರುತಿಗೆ ವೋಟ್ ಹಾಕಿ ಎಂದು ಕೈ ಮುಗಿದು ಮತದಾರರ ಬಳಿ ಯಶ್ ಮನವಿ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments