ಮಂಡ್ಯ: ಏಪ್ರಿಲ್ 18ಕ್ಕೆ ಸುಮಲತಾ ಅವರ ಟೂರಿಂಗ್ ಟಾಕೀಸ್ ಸಿನಿಮಾ ಶೂಟಿಂಗ್ ಪ್ಯಾಕಪ್ ಆಗಲಿದೆ, ಆಮೇಲೆ ಯಾವ ಸುಮಕ್ಕನೂ ಇಲ್ಲ, ಪಮಕ್ಕನೂ ಇಲ್ಲ, ಅವರನ್ನು ಹುಡುಕಿಕೊಂಡು ಗಾಂಧಿನಗರಕ್ಕೆ ಹೋಗಬೇಕು, ಶೂಟಿಂಗ್ ಮುಗಿಸಿದ ಎಲ್ಲಾ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ, ಇದು ಕೂಡ ಹಾಗೆಯೇ ಎಂದು ಸಂಸದ ಎಲ್, ಆರ್ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಅವನ್ಯಾರೋ ರಾಕ್ ಲೈನ್ ಅಂತೆ, ಅವನು ದರ್ಶನ್ ಇವತ್ತು ಪ್ರಚಾರಕ್ಕೆ ಬಂದಿದ್ದನಲ್ಲ, ಅವನು ಕೂಡ ನಾಯ್ಡು, ಹೀಗಾಗಿ ಅವರು ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಇನ್ನೂ ಅಂಬರೀಷ್ ವಸತಿ ಸಚಿವರಾಗಿದ್ದಾಗ ಎಷ್ಟು ಮಂದಿ ಬಡವರಿಗೆ ಮನೆ ಕೊಡಿಸಿದ್ದಾರೆ ಎಂದು ಪ್ರಶ್ನಿಸಿದ ಶಿವರಾಮೇಗೌಡ ಅಂಬರೀಷ್ ಇದ್ದಾಗ ಸುಮಲತಾ ಮನೆಯಲ್ಲಿ ಗೌರಮ್ಮನ ತರ ಇದ್ದರು, ಅಂಬರೀಷ್ ಅವರು ನಿಧನರಾದಾಗ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರಲಾಯಿತು, ಆಗ ಮಂಡ್ಯಕೆ ಹರಿದು ಬಂದ ಜನಸಾಗರವನ್ನು ನೋಡಿದ ಸುಮಲತಾ ಇವರೆಲ್ಲಾ ನನಗೆ ಮತ ಹಾಕುತ್ತಾರೆ ಎಂದು ಭಾವಿಸಿದ್ದಾರೆ ಎಂದು ಶಿವರಾಮೇಗೌಡ ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics