ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ 
ಕರ್ನಾಟಕ

ಚುನಾವಣೆ ವೇಳೆ ನಮಗೆ ಹೆಲಿಕಾಪ್ಟರ್ ಸಿಗದಂತೆ ಬಿಜೆಪಿ ನಾಯಕರು ಪಿತೂರಿ ಮಾಡುತ್ತಿದ್ದಾರೆ-ಸಿಎಂ ಕುಮಾರಸ್ವಾಮಿ

ಲೋಕಸಭೆ ಚುನಾವಣೆ ವೇಳೆ ನಮಗೆ ಹೆಲಿಕಾಪ್ಟರ್​​ ಸಿಗದಂತೆ ಕೇಂದ್ರ ಸರ್ಕಾರದ ಬಿಜೆಪಿ ನಾಯಕರು ...

ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ ನಮಗೆ ಹೆಲಿಕಾಪ್ಟರ್​​ ಸಿಗದಂತೆ ಕೇಂದ್ರ ಸರ್ಕಾರದ ಬಿಜೆಪಿ ನಾಯಕರು ಪಿತೂರಿ ನಡೆಸಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.
ಹಾಸನದಲ್ಲಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವ್ಯವಸ್ಥಿತವಾಗಿ ನನಗೆ ಹೆಲಿಕಾಪ್ಟರ್​ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್​​​ ಸಿಕ್ಕಿದರೆ ನಾನು ಹೆಚ್ಚು ಜನರನ್ನು ಸಂಪರ್ಕಿಸಿ ಮತಯಾಚಿಸುತ್ತೇನೆ. ಇದನ್ನು ತಪ್ಪಿಸಲು ಕೇಂದ್ರ ನಾಯಕರು ನನಗೆ ಹೆಲಿಕಾಪ್ಟರ್ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಹೆಲಿಕಾಪ್ಟರ್​​ ಸಿಗದೆ ರಸ್ತೆ ಮಾರ್ಗದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇದು ಕೇಂದ್ರ ನಾಯಕರ ಪಿತೂರಿ ಎಂದು ಸಿಎಂ ಕೇಂದ್ರ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ಮಧ್ಯೆ ಚುನಾವಣಾ ಆಯೋಗ ಸಂಚರಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿರೋದರಿಂದ ಸ್ವತಃ ಸಿಎಂ ಕುಮಾರಸ್ವಾಮಿಯವರ ಕಾರು ಕೂಡ ತಪಾಸಣೆಗೊಳಗಾಯಿತು.
ಹಾಸನದ ಚನ್ನರಾಯಪಟ್ಟಣದ ಹಿರೀಸಾವೆ ಚೆಕ್​ಪೋಸ್ಟ್​ ಬಳಿ ಸಿಎಂ ಕುಮಾರಸ್ವಾಮಿ ಅವರ ಕಾರನ್ನು ತಡೆದ ಅಧಿಕಾರಿಗಳು ತಪಾಸಣೆ ನಡೆಸಿದರು. ಹಾಸನದಿಂದ ಶಿವಮೊಗ್ಗಕ್ಕೆ ಮಾರ್ಗವಾಗಿ ಸಿಎಂ ಕುಮಾರಸ್ವಾಮಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪ್ರಚಾರಕ್ಕೆ ತೆರಳಿದರು. ಈ ವೇಳೆ ಸಿಎಂ ತಪಾಸಣೆಗೆ ಸಹಕರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋದಿ ವಿರುದ್ಧ ಹರಿಹಾಯ್ದ ಸಿಎಂ, ಇಂದು ದೇಶ ಹಲವಾರು ರೀತಿಯಲ್ಲಿ ಹಿನ್ನಡೆಯನ್ನು ಕಂಡಿದೆ. ಆರ್ಥಿಕ ಪರಿಸ್ಥಿತಿ, ಉದ್ಯೋಗ ಸೃಷ್ಟಿ, ಬಡವರ ಸಮಸ್ಯೆಗಳು, ರೈತರು ಬಿಜೆಪಿ ಸರ್ಕಾರದಲ್ಲಿ ನೊಂದಿದ್ದಾರೆ. ಇವತ್ತಿನ ರಾಜಕೀಯ  ಪರಿಸ್ಥಿತಿ ನೋಡಿದರೆ ಅಂದು ಪ್ರಧಾನಿಯಾಗುವ ಅನಿವಾರ್ಯತೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಬಂದಂತೆ ಇಂದು ಕೂಡ ಮತ್ತೊಮ್ಮೆ ಅಂತಹದ್ದೇ ಪರಿಸ್ಥಿತಿ ಬರಬಹುದು, ದೇವೇಗೌಡರೇ ಪ್ರಧಾನಿಯಾಗುತ್ತಾರೆ ಎಂದು ನಾನು ಹೇಳುವುದಿಲ್ಲ, ಆದರೆ ದೇವೇಗೌಡರ ನಾಯಕತ್ವದಲ್ಲಿ ಅವರ ಮಾತಿಗೆ ಗೌರವ ಕೊಟ್ಟು ವಿರೋಧ ಪಕ್ಷಗಳು ಒಟ್ಟು ಸೇರಿ ಸರ್ಕಾರ ರಚಿಸುವ ವಾತಾವರಣ ದೇಶದಲ್ಲಿ ಬರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಕಳೆದ 10-15 ವರ್ಷಗಳಲ್ಲಿ ಕರ್ನಾಟಕದ ಜನತೆಯ ಹಲವಾರು ಸಮಸ್ಯೆಗಳು ಬಗೆಹರಿಯದೆ ಹಾಗೆಯೇ ಉಳಿದುಕೊಂಡಿವೆ.ಈ ಚುನಾವಣೆ ಕರ್ನಾಟಕದ ಜನತೆಗೆ ಒಂದು ಉತ್ತಮ ಅವಕಾಶ ನೀಡಿದೆ. ಇವತ್ತು ಬಿಜೆಪಿಯನ್ನು ಹೊರತುಪಡಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಹೆಚ್ಚಿನ ಸ್ಥಾನಗಳಲ್ಲಿ ಜನರು ಗೆಲ್ಲಿಸಿದರೆ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಹಲವಾರು ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಅದು ಹಲವಾರು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಅವಶ್ಯಕತೆಯೇನಿದೆ ಎಂದು ಪ್ರಶ್ನಿಸಿದರು.
ಇಂದು 13 ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿದೆ. ಅಷ್ಟೊಂದು ಜನಪರ ಕೆಲಸ ಮಾಡಿ ಜನರ ಮನಸ್ಸನ್ನು ಗೆದ್ದಿದ್ದರೆ ಸ್ವಂತ ಶಕ್ತಿಯಲ್ಲಿ ಗೆದ್ದು ಬಂದು ಸರ್ಕಾರ ರಚಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಸ್ವಾತಂತ್ರ್ಯ ಬಂದ ನಂತರ ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಯುದ್ಧವಾದ ನಂತರ ಯೋಧರಿಗೆ ರಕ್ಷಣೆ ನೀಡಿರಲಿಲ್ಲವೇ? ಯೋಧರಿಗೆ ನೆಮ್ಮದಿಯಿಂದ ಬದುಕುವ ವಾತಾರಣ ನಿರ್ಮಾಣ ಮಾಡಿರಲಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!