ಬಿ.ಕೆ ಹರಿಪ್ರಸಾದ್ 
ಕರ್ನಾಟಕ

ತೇಜಸ್ವಿನಿ ಹೆಚ್ಚು ಸೂಕ್ತ ಹಾಗೂ ಪ್ರಬಲ ಅಭ್ಯರ್ಥಿಯಾಗಿದ್ದರು: ಬಿ.ಕೆ ಹರಿಪ್ರಸಾದ್

1999ರಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿ.ಕೆ ಹರಿಪ್ರಸಾದ್ ಈ ಬಾರಿ ಬೆಂಗಳೂರು ...

ಬೆಂಗಳೂರು: 1999ರಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ  ಬಿ.ಕೆ ಹರಿಪ್ರಸಾದ್ ಈ ಬಾರಿ ಬೆಂಗಳೂರು ದಕ್ಷಿಣದಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ, ಈ ವೇಳೆ ತಮ್ಮ ಗೆಲುವಿಗೆ ಕಾರಣವಾಗುವ ಅಂಶಗಳೇನು ಎಂಬ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರ:  ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಿಮ್ಮ ಚುನಾವಣಾ ರಣತಂತ್ರಗಳೇನು?
ಪ್ರಚಾರ ಉತ್ತರ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ, ಅಲ್ಲಿನ ಜನರ ಸ್ಪಂದನೆ ಉತ್ತಮವಾಗಿದೆ, ನಾನು ನಾಮಪತ್ರ ಸಲ್ಲಿಸುವ ದಿನ ಅಪಾರ ಪ್ರಮಾಣದಲ್ಲಿ ಭಾಗವಹಿಸಿದ್ದರು. ಜನರ ಜೊತೆ ನಾನು  ಸಭೆ ನಡೆಸುತ್ತಿದ್ದಾರೆ.
ಪ್ರ: ಈ ಚುನಾವಣೆಯಲ್ಲಿ ಭಾಗವಹಿಸಲು ನಿಮ್ಮ ಅಜೆಂಡಾ ಏನು?
ಈ ಭಾರಿಯ ಚುನಾವಣೆಯಲ್ಲಿ ಪ್ರಮುಖ ವಿಷಯ ದೇಶದ ರಕ್ಷಣೆ, ಸಂವಿಧಾನ ರಕ್ಷಣೆಗಾಗಿ ನನ್ನ ಹೋರಾಟ, ನನ್ನ ಹೋರಾಟ ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಸಾಂವಿಧಾನಿಕ ಸಂಸ್ಥೆಗಳ ಅಸ್ಥಿತ್ವಕ್ಕಾಗಿ ನಾನು ಹೋರಾಡುತ್ತೇನೆ, 2009 ರಲ್ಲಿ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ,33 ರ ರಷ್ಟು ಮೀಸಲಾತಿ ಕಾಯಿದೆ ಜಾರಿಗೆ ತಂದರು, ಆ ಮೀಸಲಾತಿ ಅನುಪ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ, ಬೆಂಗಳೂರು ಒಂದು ಕಾಸ್ಮೋಪಾಲಿಟನ್ ನಗರ.
ಪ್ರ:ಜೆಡಿಎಸ್ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ ಎಂದು ಭಾವಿಸಿದ್ದೀರಾ?
ಬಸವನಗುಡಿ, ಪದ್ಮನಾಭನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಅಪಾರ ಬೆಂಬಲವಿದೆ, ಕಾಂಗ್ರೆಸ್ ದೇವೇಗೌಡರ ಜೊತೆ ಮೈತ್ರಿ ಮಾಡಿಕೊಂಡಿದ್ದು, ಅದರಿಂದ ನಮಗೆ ಹೆಚ್ಚಿನ ಲಾಭವಾಗಲಿದೆ.
ಪ್ರ: ನಿಮ್ಮ ವಿರೋಧಿ ಬಿಜೆಪಿ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ತೇಜಸ್ವಿ ಸೂರ್ಯ ಆಯ್ಕೆ  ಆಕಸ್ಮಿಕ, ಬಿಜೆಪಿಗೆ ಅನಂತ್ ಕುಮಾರ್ ಗೆ ಪರ್ಯಾಯ ನಾಯಕ ಬೇಕಾಗಿತ್ತು, ಯುವಕರಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಟಿಕೆಟ್ ನೀಡಿಲ್ಲ, ಬಿಜೆಪಿ ಪಟ್ಟಿಯಲ್ಲಿ 70-75 ವರ್ಷ ತುಂಬಿದ ಅಭ್ಯರ್ಥಿಗಳು ಇದ್ದಾರೆ ಒಬ್ಬರನ್ನು ನಿಯಂತ್ರಿಸಲು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಗಿದೆ, ತೇಜಸ್ವಿನಿ ಅನಂತ್ ಕುಮಾರ್ ಹೆಚ್ಚು ಪ್ರಬಲ ಹಾಗೂ ಸಮರ್ಥರಾಗಿದ್ದರು, ಅನಂತ್ ಕುಮಾರ್ ಕೆಲಸಗಳ ಮೇಲೆ ಬಿಜೆಪಿಗೆ ನಂಬಿಕೆ ಇರಲಿಲ್ಲ, ಹೀಗಾಗಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಿಲ್ಲ.
ಪ್ರ: ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಪರವಾಗಿ ಕೆಲಸ ಮಾಡುವ ಅಂಶಗಳಾವುವು?
ನರೇಂದ್ರ ಮೋದಿ ಅವರ ಉದ್ಯೋಗ ಭರವಸೆ ಯೋಜನೆ ವಿಫಲ ಅದು ನನಗೆ ಬಹುದೊಡ್ದ  ಪ್ರಯೋಜನ, ಯುವಕರಿಗೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು, ಬೆಂಗಳೂರು ಅವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ  ಇರುವ ನಗರ, ಇರುವ ಉದ್ಯೋಗ ಕಳೆದುಕೊಳ್ಳುತ್ತಿರುವಾಗ ಹೊಸ ಉದ್ಯೋಗ ಸೃಷ್ಟಿ ಎಲ್ಲಿಂದ ಸಾಧ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!