ಕರ್ನಾಟಕ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಂದ ಜಂಟಿ ಪ್ರಣಾಳಿಕೆ?

Raghavendra Adiga
ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ರಾಜ್ಯ ಸರ್ಕಾರದ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ಪ್ರಣಾಳಿಕೆ ಬಿಡುಗಡೆಗೊಳಿಸಲಿದೆಯೆ? ಇಂತಹಾ ಒಂದು ಚಿಂತನೆ ಎರಡೂ ಪಕ್ಷದ ಮುಖಂಡರಲ್ಲಿ ದೆ ಎಂದು ಮೂಲಗಳು ಹೇಳಿದೆ. ಈ ಹಿಂದೆ ಸಾಮಾನ್ಯ ಕನಿಷ್ಟ ಕಾರ್ಯಕ್ರಮವನ್ನು ಎರಡೂ ಪಕ್ಷದವರು ಒಟ್ಟಾಗಿ ಪ್ರಕಟಿಸಬೇಕೆಂದು ಅಂದುಕೊಂಡಿದ್ದಂತೆ ಈಗ ಚುನಾವಣಾ ಪ್ರಣಾಲಿಕೆ ಸಹ ಜಂಟಿಯಾಗಿ ಪ್ರಕಟಿಸುವ ಇರಾದೆ ಇದೆ ಎನ್ನಲಾಗಿದೆ. 
"ಕಾಂಗ್ರೆಸ್ ಮತ್ತು ಜೆಡಿ (ಎಸ್) ಹಿರಿಯ ಮುಖಂಡರು ಹಾಜರಾದ ಸಭೆಯಲ್ಲಿ ಇದನ್ನು ಚರ್ಚಿಸಲಾಗಿದೆ.ನಾಯಕರು ಜಂಟಿ  ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ ಎನ್ನ್ಲಾಗಿದೆ, ಆದರೆ ಈ ಬಗ್ಗೆ ಯಾವುದೇ ಖಚಿತತೆ ಇಲ್ಲ. ಇದೊಂದು ಪ್ರಾರಂಭದಲ್ಲಿನ ಊಹೆ ಮಾತ್ರ.ಏಕೆಂದರೆ ಈಗಾಗಲೇ ಮೈತ್ರಿ ಪಕ್ಷಗಳ ಪ್ರಚಾರ ಕಾಯದ ವೇಳೆ ನಾನಾ ಕಡೆ ನಾನಾ ವಿಧದ ಭಿನ್ನತೆಗಳು ಗೋಚರಿಸುತ್ತಿದೆ"ಮೂಲಗಳು ಹೇಳಿವೆ.
ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತಾನು ಪ್ರತ್ಯೇಕ ಪ್ರಣಾಳಿಕೆ ಹೊಂದಲು ಬಯಸಿದೆ, ಆದರೆ ಜೆಡಿಎಸ್ ನಾಯಕರು ನಾವು ಜಂಟಿಯಾಗಿ ಹೋಗಲು ಉದ್ದೇಶಿಸಿದ್ದೇವೆ ಎನ್ನುತ್ತಿದ್ದಾರೆ. ಆದರೆ ಈ ಹಿಂದೆ ಸರ್ಕಾರ ರಚನೆಯಾದಾಗ ಕೆಲವೇ ವಾರಗಳಲ್ಲಿ ಜಂಟಿಯಾಗಿಯೇ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಘೋಷಣೆ ಮಾಡುವುದಾಗಿ ಎರಡೂ ಪಕ್ಷದ ಮುಖಂಡರು ಹೇಳಿದ್ದರು. ಆದರೆ ಸರ್ಕಾರ ರಚನೆಯಾಗಿ ಹತ್ತು ತಿಂಗಳಾದರೂ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಪಟ್ಟಿ ಬಹಿರಂಗವಾಗಿಲ್ಲ ಎನ್ನುವುದು ವಿಪರ್ಯಾಸ. ಈಗ ಚುನಾವಣಾ ಪ್ರಣಾಳಿಕೆಯಾದರೂ ಜಂಟಿಯಾಗಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಆದರೆ ಯಾವುದು ಆಗಲಿದೆ ಯಾವುದಿಲ್ಲ ಎನ್ನುವುದನ್ನು ಭವಿಷ್ಯದಲ್ಲಿ ಕಾದು ನೋಡಬೇಕಿದೆ.
SCROLL FOR NEXT