ಕರ್ನಾಟಕ

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಂಡಾಯ ನಾಯಕರದ್ದೇ ತಲೆಬೇನೆ!

Shilpa D
ಬೆಳಗಾವಿ: ಟಿಕೆಟ್ ಹಂಚಿಕೆಯ ವಿಷಯವಾಗಿ ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಬಂಧ ಹದಗೆಟ್ಟಿರುವುದು ರಹಸ್ಯವಾಗಿ ಉಳಿದಿಲ್ಲ, ಇದೇ ರೀತಿಯ ಪರಿಸ್ಥಿತಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಎದುರಾಗಿದೆ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ. 
ಚಿಕ್ಕೋಡಿ, ರಾಯಚೂರು, ಬಿಜಾಪುರ ಮತ್ತು ಬೆಳಗಾವಿ ಅಭ್ಯರ್ಥಿಗಳ ಆಯ್ಯೆ ವಿಚಾರದಲ್ಲಿ ತೀವ್ರ ಅಸಮಾಧಾನ ಎದ್ದಿದೆ, ಮುಂಬರುಲ ಲೋಕಸಭೆ ಚುನಾವಣೆಯಲ್ಲಿ ಬಂಡಾಯಗಾರರು ಪಕ್ಷಕ್ಕೆ ಹಾನಿ ಮಾಡಬಹುದೆಂಬ ಆತಂಕ ಬಿಜೆಪಿಗೆ ಸಹಜವಾಗಿಯೇ ಮೂಡಿದೆ, ಮತದಾನಕ್ಕೆ ಇನ್ನೂ ಕೆಲವೇ ಕೆಲವು ದಿನಗಳೂ ಬಾಕಿ ಉಳಿದಿವೆ, ಹೀಗಿರುವಾಗಉತ್ತರ ಕರ್ನಾಟಕ ಭಾಗದ ನಾಯಕರನ್ನು ಇನ್ನೂ ಒಮ್ಮತ ಮೂಡಿಲ್ಲ,
ಬಿಜಾಪುರದ ಬಂಡಾಯ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.ಸ್ಥಳೀಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜಾಪುರ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಜೊತೆ  ಪ್ರಚಾರಕ್ಕೆ ತೆರಳುತ್ತಿಲ್ಲ, ಜಿಗಜಿಣಗಿ ನಾಮಪತ್ರ ಸಲ್ಲಿಸುವ ದಿನವೂ ಅವರು ಹಾಜರಿರಲಿಲ್ಲ,  ಯತ್ನಾಳ್ ತಮ್ಮ ಪರ ಇಲ್ಲದಿರುವು ಬಿಜೆಪಿಗೆ ಬರುವ ಮತಗಳು ಬೇರೆಯವರ  ಪಾಲಾಗುವ ಸಾಧ್ಯತೆಯಿದೆ,  ಜೆಡಿಎಸ್ ಅಭ್ಯರ್ಥಿ ಸುನೀತಾ ಚವಾಣ್ ಅವರಿಗೆ ಲಾಭವಾಗುತ್ತದೆ.
ಇನ್ನೂ ಚಿಕ್ಕೋಡಿ ಕ್ಷೇತ್ರಕ್ಕೆ ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡದೇ ಆರ್ ಎಸ್ಎಸ್ ಬೆಂಬಲಿತ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಪಕ್ಷ ಮಣೆ ಹಾಕಿರುವುದು, ಕತ್ತಿ ಸಹೋದರರ ಅಸಮಾಧಾನಕ್ಕೆ ಕಾರಣವಾಗಿದೆ, ಕಳೆದ ಮೂರು ದಶಕಗಳಿಂದ ಈ ಭಾಗ ಕತ್ತಿ ಸಹೋದರರ ಭದ್ರ ಕೋಟೆಯಾಗಿದೆ, ಕಳೆದ ಚುನಾವಣೆಯಲ್ಲಿ ಕತ್ತಿ ಕೇವಲ ಮೂರು ಸಾವಿರ ಮತಗಳಿಂದ ಸೋತಿದ್ದರು. ಆದರೆ ಕೊನೆ ಕ್ಷಣದಲ್ಲಿ ರಮೇಶ್ ಕತ್ತಿ ಅವರನ್ನು ತಡೆದು ಜೊಲ್ಲೆ ಅವರಿಗೆ ಟಿಕೆಟ್ ನೀಡಿರುವುದು ಕತ್ತಿ ಸಹೋದರರಿಗೆ ಅಸಮಾಧಾನಕ್ಕೆ ತಿವ್ರ ಕಾರರಣವಾಗಿದೆ,
ರಾಯಚೂರಿನಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ, ಶಾಸಕ ತಿಪ್ಪರಾಜು ಹವಾಲ್ದಾರ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿರುವ ಹೈಕಮಾಂಡ್ ವಿರುದ್ಧ ಅಸಹನೆ ವ್ಯಕ್ತ ಪಡಿಸಿದ್ದಾರೆ. ರಾಜಾ ಅಮರೇಶ್ ನಾಯಕ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ, ಇದರಿಂದ ಅಸಮಾಧಾನಗೊಂಡಿರುವ ಅಮರೇಶ್ ನಾಯಕ್ ತನಗೆ ಟಿಕೆಟ್ ತಪ್ಪಿಸಲು ಶಿವನಗೌಡ ನಾಯಕ್ ಕಾರಣ ಎಂದು ಆರೋಪಿಸಿದ್ದಾರೆ. 
SCROLL FOR NEXT