ಮಂಡ್ಯದಲ್ಲಿ ಯಶ್ ಪ್ರಚಾರದ ಒಂದು ದೃಶ್ಯ 
ಕರ್ನಾಟಕ

ಕಾಂಗ್ರೆಸ್-ಜೆಡಿಎಸ್ ಸಂಘರ್ಷ: ಸಂಧಾನಕ್ಕಿದು ಸಮಯವಲ್ಲ ಎಂದ ಮಂಡ್ಯ ಕಾಂಗ್ರೆಸಿಗರು

ಮಂಡ್ಯ ಕಾಂಗ್ರೆಸ್ ನಾಯಕರನ್ನು ಮನವೊಲಿಸುವ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಪ್ರ ಪ್ರಚಾರ ನಡೆಸಲು ಪ್ರೇರೇಪಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತತ್ರಗಾರಿಕೆಗೆ ಮಂಡ್ಯ ಕಾಂಗ್ರೆಸ್ ನಾಯಕರು ಸೊಪ್ಪು ಹಾಕುತ್ತಿಲ್ಲ.

ಮೈಸೂರು: ಮಂಡ್ಯ ಕಾಂಗ್ರೆಸ್ ನಾಯಕರನ್ನು ಮನವೊಲಿಸುವ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಪರ ಪ್ರಚಾರ ನಡೆಸಲು ಪ್ರೇರೇಪಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಂತ್ರಗಾರಿಕೆಗೆ ಮಂಡ್ಯ ಕಾಂಗ್ರೆಸ್ ನಾಯಕರು ಸೊಪ್ಪು ಹಾಕುತ್ತಿಲ್ಲ. ಮುಂದಿನ ಎರಡು ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಭರಾಟೆ ಇನ್ನಷ್ಟು ದೊಡ್ಡ ತಿರುವು ತೆಗೆದುಕೊಳ್ಳಲಿದೆ ಎನ್ನಲಾಗಿದ್ದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಥವಾ ಜೆಡಿಎಸ್ ಅಭ್ಯರ್ಥಿಯ ಪರವಾಗಿ ನಾವು ಪ್ರಚಾರ ನಡೆಸುವುದಿಲ್ಲ ಎಂದು ಇದಾಗಲೇ ಜಿಲ್ಲೆಯ ಪ್ರಮುಖ ನಾಯಕರು ಸ್ಪಷ್ಟಪಡಿಸಿದ್ದಾರೆ. 
ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್  ನಿಖಿಲ್ ಕುಮಾರಸ್ವಾಮಿ ಅವರ ವಿಜಯವನ್ನು ಖಾತ್ರಿಪಡಿಸಿಕೊಳ್ಲಲು ಕೆಲಸ ಮಾಡಲು  ಮನವೊಲಿಸಿದರೂ, ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಸಂಬಂಧವನ್ನು ಸುಧಾರಿಸಲು ಮಾಡಿರುವ ಪ್ರಯತ್ನ ಬಹಳವೇ ತಡವಾಗಿದೆ ಎಂದು ಕಂಡುಬರುತ್ತಿದೆ.ಕಾರ್ಯಕರ್ತರಿಗೆ ಇದು ಯೋಚಿಸಲು ಸಾಧ್ಯವಾಗದ ಮಾತಾಗಿದೆ. ಜೆಡಿಎಸ್ ಪಕ್ಷವನ್ನು ದಶಕಗಳ ಕಾಲ ವಿರೋಧಿಸುತ್ತಾ ಬಂದಿದ್ದ ಕಾಂಗ್ರೆಸ್ ಇದೀಗ ಕೆಲವೇ ತಿಂಗಳಿನಲ್ಲಿ ಅವರೊಡನೆ ಸ್ನೇಹ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದರೂ,ಜಿಲ್ಲೆಯಲ್ಲಿ ಎರಡೂ ಪಕ್ಷಗಳ ನಡುವೆ ಘರ್ಷಣೆಗಳು ಕಂಡುಬರುವುದು ನಿಂತಿಲ್ಲ.
ಜೆಡಿಎಸ್ ನಾಯಕರು, ಶಾಸಕರು ಕಾಂಗ್ರೆಸ್ ಶಾಸಕರು ಅನುಮೋದಿಸಿದ್ದ ಟೆಂಡರ್ ಗಳನ್ನು ರದ್ದು ಂಆಡಿದ್ದಾಎ.ಅನುದಾನವನ್ನು ಬಳಸದೆ ಹಿಂತಿರುಗಿಸಿದ್ದಾರೆ. ನಾಗಮಂಗಲ, ಶೀರಂಗಪಟ್ಟಣ, ಮಳವಳ್ಳಿ  ಹಾಗೂ ಇತರೆ ಕ್ಷೇತ್ರಗಳಲ್ಲಿ ಇಂತಹಾ ಘರ್ಷಣೆಗಳು ತಲೆದೋರಿದೆ. ಮಂಡ್ಯ ಜಿಲ್ಲೆಯ ಎನ್.ಚಲುವರಾಯಸ್ವಾಮಿ ಮತ್ತು ಇತರರು ಸೇರಿದಂತೆ ಪ್ರಮುಖ ನಾಯಕರು  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಪರಮೇಶ್ವರ ವರಲ್ಲಿ ಈ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.  ಇನ್ನೊಂದೆಡೆ ಹಾಸನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಹ ಇದೇ ಸಂಘರ್ಷವಿದ್ದು ಅವರು ಸಹ ಸಿದ್ದರಾಮಯ್ಯನವರಲ್ಲಿ ದೂರಿತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಈ ಸಮಸ್ಯೆಗ ಪರಿಹಾರ ಹುಡುಕಿಕೊಳ್ಳುವಲ್ಲಿ ಕಾಂಗ್ರೆಸ್ ಪಾಳಯ ವಿಫಲವಾಗಿದೆ.ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಸಾಮರಸ್ಯವನ್ನು ಸುಧಾರಿಸುವಲ್ಲಿ ಯಶಸು ಕಾಣದೆ ಹೋಗಿದೆ.ಳೀಯ ಸಹಕಾರ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಈ ಹಿಂದೆ ಎರಡೂ ಪಕ್ಷಗಳು ಪರಸ್ಪರ ವಿರುದ್ಧವಾಗಿ ಹೋರಾಟ ನಡೆಸಿದೆ. ಆದರೆ ಈಗ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ನೊಡನೆ ಸಂಧಾನ ಮಾಡಿಕೊಳ್ಳುವುದು ಆ ಪಕ್ಷದ ದುರ್ಬಲತೆಗೆ ಕಾರಣವಾಗಲಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT