ಮೈಸೂರಿನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮೋದಿಯೊಂದಿಗೆ ರಾಜ್ಯ ನಾಯಕರು
ಮೈಸೂರು: 2019ರ ಲೋಕಸಭೆ ಚುನಾವಣೆ ಘೋಷಣೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿ ಮೈಸೂರಿನ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನೆರೆದಿದ್ದ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರುವಂತೆ ಕಾಣುತ್ತಿದ್ದರು. ನೆರೆದಿದ್ದ ಸಾವರಾರು ಜನ ಮೈನ್ ಭಿ ಚೌಕಿದಾರ್ ಎಂಬ ಘೋಷಣೆ ಕೂಗುತ್ತಿದ್ದರು. ಸುಮಾರು 1 ಲಕ್ಷ ಜನ ಸೇರುತ್ತಾರೆಂದು ಅಂದಾಜು ಮಾಡಲಾಗಿತ್ತು,
ನೆರೆದಿದ್ದಾ ಸಾವಿರಾರು ಜನರು ಉತ್ಸಾಹದಿಂದ ಫಿರ್ ಎಕ್ ಬಾರ್ ಎಂಬ ಘೋಷಣೆ ಕೂಗುತ್ತಿದ್ದರು, ಅದರ ಜೊತೆಗೆ ಮೋದಿಯೂ ಕೂಡ ದನಿಗೂಡಿಸಿದರು. ನಿಮ್ಮ ಚೌಕಿದಾರ ಎನ್ನುವ ಪದದೊಂದಿಗೆ ಪ್ರಧಾನಿ ಮೋದಿ ಕನ್ನಡದಲ್ಲಿ ಮಾತು ಆರಂಭಿಸಿದರು.
ಮೋದಿ ಮೈಸೂರಿಗೆ ಆಗಮಿಸಿದ್ದು ಸಂಜೆ 5.15ಕ್ಕೆ ಮಧ್ಯಾಹ್ನದಿಂದಲೇ ಜನ ಅವರಿಗಾಗಿ ಕಾದು ಕುಳಿತಿದ್ದರು. ಇದೇ ವೇಳೆ ಮೋಡ ಗಟ್ಟಿದ ವಾತಾವರಣ ಇದ್ದರೂ ಮಳೆ ಬಂದರೂ ಚಿಂತೆಯಿಲ್ಲ ಎಂಬಂತೆ ನೆರೆದಿದ್ದ ಜನಸ್ತೋಮ ಅಲ್ಲಿಯೇ ಕಾಯುತ್ತಿದ್ದರು, ಮೋದಿ ಭಾಷಣವನ್ನು ಹತ್ತಿರದಿಂದ ನೋಡುವ ಅವಕಾಶಕ್ಕಾಗಿ ಮಳೆ ಬಂದರೂ ಚಿಂತೆಯಿಲ್ಲ ಎಂಬಂತೆ ಕುಳಿತಿದ್ದರು.
ಕೊಡಗಿನಿಂದ ಬಂದಿದ್ದ ಬಹುದೊಡ್ಡ ಬೆಂಬಲಿಗರ ಗುಂಪಿನಲ್ಲಿದ್ದ ಮಹಿಳೆಯರು ಹಾಗೂ ಪುರುಪರು ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ಪರ ಘೋಷಣೆ ಕೂಗುತ್ತಿದ್ದರು. ಯುವಕರು ಪಕ್ಷದ ಬಾವುಟವನ್ನು ಹಾರಾಡಿಸುತ್ತಿದ್ದರು, ಜೊತೆಗೆ ಮೋದಿ ಮೋದಿ ಎಂದು ಕೂಗುತ್ತಿದ್ದದ್ದು ಕಾಣಿಸುತ್ತಿತ್ತು, ಗಂಟೆಗಳಿಂದ ಕಾದು ಸುಸ್ತಾಗಿದ್ದ ಕೆಲವೊಂದು ಗುಂಪು ಮೈದಾನದಿಂದ ಹೋರನಡೆದಿದ್ದು ಕಂಡು ಬಂತು.
ಜನರನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು, ಕೇಸರಿ ಬಣ್ಣದ ಟೀ ಶರ್ಟ್ ಧರಿಸಿದ್ದ ಸಾವಿರಾರು ಮಂದಿ ಮೋದಿ ಪರ ಜೈಕಾರ ಹಾಕುತ್ತಿದ್ದರು, ಒಟ್ಟಾರೆ ಮೋದಿಯನ್ನು ನೋಡಲು ಕಾದು ಕುಳಿತವರು ಹಾಗೂ ಬೆಂಬಲಿಗರು ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.