ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ. ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ ಮತ
ಬೆಂಗಳೂರು: ಐಟಿ ಇಲಾಖೆ ಅಧಿಕಾರಿಗಳ ದಾಳಿಯಿಂದ ನನಗೇನು ಭಯವಿಲ್ಲ, ನನಗೆ ಭಯವಿಲ್ಲದಿದ್ದರಿಂದಲೇ ನಾನು ಇಷ್ಟು ಮುಕ್ತವಾಗಿ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. ಅಧಿಕಾರದಲ್ಲಿರುವವರು ಯಾರಾದರೂ ಹೀಗೆ ಮಾಡುತ್ತಾರೆಯೇ, ದೇವೇಗೌಡರು ಹಳ್ಳಿಯಲ್ಲಿ ಹೋಗಿ ಊಟ ಮಾಡಿ ಬಂದ ಮನೆಗೆ ಹೋಗಿ ಐಟಿ ದಾಳಿ ಮಾಡುತ್ತಾರೆ, ಹಾಗಾದರೆ ಇದು ಎಂಥಹ ಸರ್ಕಾರ, ಯಾವ ರೀತಿಯ ಆಡಳಿತ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಪರ್ಸೆಂಟೇಜ್ ಲೆಕ್ಕ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರು ಪರ್ಸೆಂಟೇಜ್ ಹಿನ್ನಲೆಯಿಂದಲೇ ಬಂದವರು, ಅವರು ಅದನ್ನು ಬಿಟ್ಟು ಹೊರಬರುವುದೇ ಇಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಅವರು ಇಂದು ವಿಧಾನಸೌಧದ ಮುಂಭಾಗ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿಯವರು ಬಂದಿರುವುದೇ ಪರ್ಸೆಂಟೇಜ್ ಹಿನ್ನಲೆಯಿಂದ. ಪರ್ಸೆಂಟೇಜ್ ಹಿನ್ನಲೆಯ ಪ್ರಧಾನ ಮಂತ್ರಿಯಿಂದ ನಾನು ಯಾವುದೇ ನೀತಿ ಪಾಠ ಕಲಿಯಬೇಕಿಲ್ಲ, ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗೋಧ್ರಾ ನರಮೇಧದಲ್ಲಿ ನೂರಾರು ಅಮಾಯಕರು ಮೃತಪಟ್ಟಿದ್ದರು.ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅವರು, ನಾನು ಅಂತಹ ಕೆಲಸ ಮಾಡಿಲ್ಲ ಎಂದು ಮೋದಿಗೆ ತಿರುಗೇಟು ನೀಡಿದರು.