ಕರ್ನಾಟಕ

ನನ್ನ ಪರ ಮೋದಿ ಪ್ರಚಾರ ಮಾಡಬೇಕಿಲ್ಲ: ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು

Raghavendra Adiga
ತುಮಕೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುಮಕೂರಿಗೆ ಏಕೆ ಪ್ರಚಾರಕ್ಕೆ ಅಗಮಿಸಿಲ್ಲ, ಎಂದು ನೀವೇನಾದರೂ ಅಚ್ಚರಿ ವ್ಯಕ್ತಪಡಿಸಿದ್ದರೆ ಇದಕ್ಕೆ ಅವರು ಎಚ್.ಡಿ. ದೇವೇಗೌಡರ ಎದುರು ಪ್ರಚಾರ ನಡೆಸಲು ಬಯಸುವುದಿಲ್ಲ ಎಂಬುದು ಉತ್ತರವಾಗಿದೆ. ಮೇಲಾಗಿ ಅವರಿಗೆ ಕ್ಷೇತ್ರದಲ್ಲಿನ ತಮ್ಮದೇ ಅಭ್ಯರ್ಥಿ ಬಗೆಗೆ ಹೆಚ್ಚಿನ ಆಸಕ್ತಿ ಇಲ್ಲವೆಂದೂ ಕಾಣುತ್ತಿದೆ.ದೇಶದ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ತಮ್ಮ ಖ್ಷೇತ್ರಕ್ಕೆ ಮೋದಿ, ಶಾ ಆಗಮಿಸಿದ್ದರೆ ನಮ್ಮ ಗೆಲುವಿಗೆ ಇನ್ನಷ್ಟು ಬಲ ಬರಲಿದೆ ಎಂದು ಭಾವಿಸುತ್ತಾರೆ. ಆದರೆ ತುಮಕುರಿನ ಬಿಜೆಪಿ ಅಭ್ಯರ್ಥಿ ಜಿಎಸ್ ಬಸವರಾಜು ಮಾತ್ರ ಇಂತಹಾ ಭಾವನೆಗಳಿಂದ ದೂರವಿದ್ದಾರೆ ಎಂದು ಮೂಲಗಳು ಹೇಳಿದೆ.ಮಾಜಿ ಕಾಂಗ್ರೆಸಿಗ, ಬಸವರಾಜು 2014 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರನ್ನು ಪರಾಜಿತಗೊಳಿಸಿದ್ದರು. ಆ ಬಾರಿ ಮೋದಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.
ಮೂಲದ ಪ್ರಕಾರ, ಬಸವರಾಜು ಕಾಂಗ್ರೆಸ್ ನಾಯಕರಾಗಿದ್ದಾಗ  ಬೆಳೆಸಿಕೊಂಡಿದ್ದ ಇಮೇಜ್ ಕೆಲ ಸಮುದಾಯದ ಜನರಲ್ಲಿ ಇಂದಿಗೂ ಉಳಿದಿದೆ ಎಂದು ಅವರು ಭಾವಿಸಿದಂತಿದೆ, ಮೋದಿ, ಶಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ ಇದು ಅವರ ಸ್ವಂತ ಇಮೇಜ್ ಗೆ ದಕ್ಕೆಯಾಗಬಹುದು ಎನ್ನಲಾಗಿದೆ. "ಅವರು ತಮ್ಮ ಸ್ವಂತ ಶಕ್ತಿಯ ಮೇಲೆ ಪ್ರಚಾರ ಮಾಡುತ್ತಾರೆ. ಮೋದಿ ಅಲೆ ಕೇವಲ ಕೇಕ್ ಮೇಲೆ ಐಸ್ ಇಟ್ಟಂತೆ" ಎಂದು ಸ್ಥಳೀಯ ಬಿಜೆಪಿ ನಾಯಕ ಹೇಳಿದರು.
ಪತ್ರಿಕೆ ಈ ಕುರಿತು ಬಸವರಾಜು ಅವರನ್ನು ಕೇಳಿದಾಗ ಮೋದಿ ಅಥವಾ ಶ ತನ್ನ ಪರವಾಗಿ ರೋಡ್ ಶೋ ಅಥವಾ ಸಮಾವೇಶ ಇರಿಸಿಕೊಳ್ಲುವಂತೆ ನಾನು ಒತ್ತಾಯಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. "ಮುಸ್ಲಿಮರು ನಾನು ಕಾಂಗ್ರೆಸ್ಸಿಗನೆಂದೇ ಭಾವಿಸಿ ನನಗೆ ಮತ ಹಾಕಬಹುದು, ಆದರೆ ಅವರಿಗೆ ಈ ಚುನಾವಣೆಯಲ್ಲಿ ಹಸ್ತದ ಗುರುತು ಕಾಣ್ಸುವುದಿಲ್ಲ. ನಾನು ಮಾಜಿ ಕಾಂಗ್ರೆಸಿಗ ಕೆ ಲಕ್ಕಪ್ಪ ಪರ ನಾಲ್ಕು ಬಾರಿ ಪ್ರಚಾರ ನಡೆಸಿದ್ದೆ. ಈ ಲೋಕಸಭಾ ಚುನಾವಣೆನನ್ನ ಎಂಟನೇ ಚುನಾವಣೆಯಾಗಿದೆ.ನಾನು ನನ್ನ ಸ್ವಂತ ಬಗೆಯಲ್ಲಿ ಪ್ರಚಾರ  ನಡೆಸುತ್ತೇನೆ ಹಾಗು ಜಯ ಗಳಿಸುತ್ತೇನೆ" ಅವರು ಹೇಳಿದರು.
 ಬಸವರಾಜು ಮತಗಳನ್ನು ಯಾಚಿಸುವ ಬದಲು ಉಪಮಂತ್ರಿ ಜಿ. ಪರಮೇಶ್ವರ  ಅವರ ಮಾಜಿ ನಿಷ್ಠಾವಂತರಾಗಿದ್ದ ಕೆ. ನವಾಜ್  ಅವರು ಅಲ್ಪಸಂಖ್ಯಾತರ ಬಳಿ ಮತ ಕೇಳುತ್ತಿದ್ದಾರೆ.ಬಸರಾಜು ಅವರಿಗೆ ತಾವು ಅಲ್ಪಸಂಖ್ಯಾತರ ಮತವನ್ನು ಹೆಚ್ಚು ಪಡೆಯುತ್ತೇವೆ ಎಂಬ ಭರವಸೆ ಇದೆ."2018 ರಲ್ಲಿ ಸುಮಾರು 4,000ದಿಂಡ 5,000 ಮತಗಳು ಮುಸ್ಲಿಂ ಸಮುದಾಯದಿಂದ ಅವರ ಪುತ್ರ ಜ್ಯೋತಿಗಣೇಶ್ ಗೆ ಬಂದಿದೆ, ಈ ಬಾರಿ ಚುನಾವಣೆಯಲ್ಲಿ ಬಸವರಾಜು ಅವರು ಸುಮಾರು 10,000 ಅಲ್ಪಸಂಖ್ಯಾತ ಮುಸ್ಲಿಮರ ಮತ ಪಡೆಯಲಿದ್ದಾರೆ"ರಾಜಕೀಯ ವಿಶ್ಲೇಷಕ ಕೆ.ಎನ್. ಪುಟಲಿಂಗಯ್ಯ ಹೇಳಿದರು.
2018 ರಲ್ಲಿ ಅಮಿತ್ ಶಾ ಅವರು ವಿಧಾನಸಭಾ ಕ್ಷೇತ್ರವನ್ನು ಗೆದ್ದ ಬಸವರಾಜು ಅವರ ಪುತ್ರನ ಬೆಂಬಲಕ್ಕಾಗಿ ರೋಡ್ ಶೋ ನಡೆಸಿದ್ದರು. ಆದರೆ ಬಸವರಾಜು ಅವರ  ಬೆಂಬಲಿಗರು ಶಾ ಅವರ ರೋಡ್ ಶೋ ಗೊಂತಲೂ ಅವರ ರಾಜಕೀಯ ತಂತ್ರಗಳೇ ಗೆಲುವಿಗೆ ಕಾರಣ ಎಂದಿದ್ದಾರೆ. ಈ ವರ್ಷದ ಏಪ್ರಿಲ್ 12 ರಂದು ಶಾ ನಡೆಸಬೇಕಿದ್ದ ರ್ಯಾಲಿ ಕಾರಣಾಂತರದಿಂದ ರದ್ದಾಗಿದೆ. ಆದರೆ ತುಮಕುರು ಜನತೆ ಬಸವರಾಜು ಬಗ್ಗೆ ಒಅಲವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.
SCROLL FOR NEXT