ಚಂದ್ರಬಾಬು ನಾಯ್ಡು-ಕುಮಾರಸ್ವಾಮಿ, ದೇವೇಗೌಡ
ಮಂಡ್ಯ: ಸುಮಲತಾ ಅಂಬರೀಶ್ ನಾಯ್ಡು, ಸುಮಲತಾ ಪರ ಪ್ರಚಾರ ಮಾಡುತ್ತಿರುವ ದರ್ಶನ್ ನಾಯ್ಡು ಅವರಿಗೆ ಮತ ನೀಡುವ ಮೂಲಕ ಮಂಡ್ಯವನ್ನು ನಾಯ್ಡುಮಯ ಮಾಡಬೇಡಿ ಎಂದು ಹೇಳಿದ್ದ ಜೆಡಿಎಸ್ ಇದೀಗ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುರನ್ನೇ ಕರೆ ತರುತ್ತಿರುವುದು ಇದೀಗ ಚರ್ಚೆಗೆ ತೀವ್ರ ಗ್ರಾಸವಾಗಿದೆ.
ಮಂಡ್ಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರ ನಾಮಪತ್ರ ಸಲ್ಲಿಸಿದ ಬಳಿಕ ತೀವ್ರವಾಗಿ ಕೆರಳಿದ ಜೆಡಿಎಸ್ ನ ಸಂಸದ ಎಲ್ಆರ್ ಶಿವರಾಮೇಗೌಡ ಅವರು ಸುಮಲತಾ ಅಂಬರೀಶ್ ನಾಯ್ಡು ಅವರಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ಮಂಡ್ಯವನ್ನು ನಾಯ್ಡುಮಯ ಮಾಡಬೇಡಿ ಎಂದು ಟೀಕಿಸಿದ್ದರು. ಅಲ್ಲದೆ ಇದೇ ವೇಳೆ ಸುಮಲತಾ ಪರ ಪ್ರಚಾರ ಮಾಡುತ್ತಿರುವ ದರ್ಶನ್ ಹಾಗೂ ರಾಕಲೈನ್ ವೆಂಕಟೇಶ್ ಸಹ ನಾಯ್ಡು ಜನಾಂಗದವರು. ಹೀಗಾಗಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಬೇಡಿ ಎಂದು ರ್ಯಾಲಿ ವೇಳೆ ಶಿವರಾಮೇಗೌಡ ಅವರು ನಾಲಿಗೆ ಹರಿಬಿಟ್ಟಿದ್ದರು.
ಈ ಮೂಲಕ ಸುಮಲತಾ ಅಂಬರೀಶ್ ಅವರು ಗೌಡ್ತಿ ಅಲ್ಲ ಅನ್ನುವ ಅರ್ಥದಲ್ಲಿ ಶಿವರಾಮೇಗೌಡರು ಟೀಕಿಸಿದ್ದರು. ಆದರೆ ಇದೀಗ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ನಾಯ್ಡು ಜನಾಂಗಕ್ಕೆ ಸೇರಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುರನ್ನು ಕರೆತರುವುದು ಎಷ್ಟು ಸರಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಜೆಡಿಎಸ್ ಮೇಲುಕೋಟೆಯಲ್ಲಿರುವ ಬಲಿಜ ಜನಾಂಗವನ್ನು ಹೊಲೈಸುವ ಸಲುವಾಗಿ ಚಂದ್ರಬಾಬು ನಾಯ್ಡು ಅವರನ್ನು ಮಂಡ್ಯಕ್ಕೆ ತರೆತರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics