ಬೆಂಗಳೂರು: ರಾಹುಲ್ ಗಾಂಧಿ ದೇಶದ ಪ್ರಧಾನಿಯಾದರೆ , ಪಕ್ಕದಲ್ಲೆ ಇದ್ದು ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವೆ ಎಂದಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಲಕೇವಲ 7 ಸ್ಥಾನಗಳನ್ನು ಎದುರಿಸುತ್ತಿರುವವರು ಪ್ರಧಾನಮಂತ್ರಿ ಅಥವಾ ಅವರ ಸಲಹೆಗಾರರಾಗಿ ಇರುವ ಆಸೆ, ಆಕಾಂಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಅದು ಈಡೇರಲ್ಲ ಎಂದಿದ್ದಾರೆ.
ಮೂರು ವರ್ಷಗಳ ಹಿಂದೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಮಾತನ್ನಾಡಿದ್ದೆ. ಆದರೆ, ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ನನಗೆ ಜೀವನದಲ್ಲಿ ಇನ್ನಾವುದೇ ಮಹತ್ವಾಕಾಂಕ್ಷೆ ಉಳಿದಿಲ್ಲ. ಆದರೆ, ನಾನೆಂದು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಿಲ್ಲ, ರಾಹುಲ್ ಗಾಂಧಿ ಪ್ರಧಾನಿಯಾದರೆ, ಅವರ ಪಕ್ಕದಲ್ಲೇ ಇದ್ದು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದರು.
Former Karnataka CM & BJP leader, BS Yeddyurappa, on former PM HD Deve Gowda's statement 'If Rahul Gandhi becomes PM, I will sit by his side': He is fighting on 7 seats and has ambitions of being Prime Minister or advisor to Prime Minister?
pic.twitter.com/UnbPpnjUdXFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos