ಬೆಂಗಳೂರು: ಬೆಂಗಳೂರು ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರಿಗಿಂತ ನೀವು ನನ್ನ ಕಣ್ಣಲ್ಲಿ ಶ್ರೇಷ್ಟ ಭಾರತೀಯಳಾಗಿ ಕಂಡಿರಿ ಸಹೋದರಿ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ನಟ ಜಗ್ಗೇಶ್ ಈ ರೀತಿ ಅಸಮಾಧಾನ ಹೊರ ಹಾಕಲು ಏನು ಕಾರಣ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ನಿನ್ನೆ ನಡೆದ ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತ ಹಾಕದ ಸಿಲಿಕಾನ್ ಸಿಟಿ ಮಂದಿ ವಿರುದ್ಧ ಜಗ್ಗೇಶ್ ಕಿಡಿಕಾರಿದ್ದಾರೆ. ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ.
ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ
ಹೆರಿಗೆಗೆ ಇನ್ನೂ ಕೆಲವೇ ನಿಮಿಷಗಳು ಇರುವಾಗ ಮತಗಟ್ಟೆಗೆ ಬಂದು ಮತದಾನ ಮಾಡಿ ಬಳಿಕ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ಕೊಟ್ಟ ಮಹಿಳೆಯೊಬ್ಬರ ಬಗ್ಗೆ ಪತ್ರಿಕೆಯೊಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಅವರು, ಮತದಾನ ಮಾಡದ ನತದೃಷ್ಟರಿಗಿಂತ ಈ ಗರ್ಭಿಣಿ ಮಹಿಳೆ ಶ್ರೇಷ್ಠ ಭಾರತೀಯರು ಎಂದು ಹೇಳಿದ್ದಾರೆ.
"ಬೆಂಗಳೂರು ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರಿಗಿಂತ ನೀವು ನನ್ನ ಕಣ್ಣಲ್ಲಿ ಶ್ರೇಷ್ಠ ಭಾರತೀಯಳಾಗಿ ಕಂಡಿರಿ ಸಹೋದರಿ! ನಿಮ್ಮ ಆದರ್ಶ ಮಾನದಂಡವಾಗಲಿ. ತಂದೆ ತಾಯಿ, ಸಂಸ್ಕೃತಿ, ದೇಶ ಸರ್ವನಾಶವಾದರು ಸಹಿಸಿ ತಮ್ಮ ಸುಖ ಶ್ರೇಷ್ಠವೆಂದು ಮತಹಾಕದೇ ಮೋಜು-ಮಸ್ತಿಗಾಗಿಯೇ ಬದುಕುತ್ತಿರುವ ನತದೃಷ್ಟರಿಗೆ, ನೀವು ಬದುಕಿರುವ ಶವಗಳು ನಿಮಗೆ ಧಿಕ್ಕಾರವಿರಲಿ." ಎಂದು ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics