ಜಾರಕಿಹೋಳಿ ಸೋದರರನಡುವೆ ಮತ್ತೆ ಭಿನ್ನಮತ: ಬಿಜೆಪಿಯತ್ತ ರಮೇಶ್ ಒಲವು
ಬೆಳಗಾವಿ: ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೋಳಿ ಹಾಗೂ ಅವರ ಕುಟುಂಬದಲ್ಲಿನ ರಾಜಕೀಯ ಬಿರುಕು ಇನ್ನಷ್ಟು ದೊಡ್ಡದಾಗಿ ಕಾಣಿಸುವ ಲಕ್ಷಣಗಳಿದೆ. ಶನಿವಾರ ರಮೇಶ್ ಜಾರಕಿಹೋಳಿ ತಮ್ಮ ನಿವಾಸದಲ್ಲಿ ಜಿಲ್ಲಾ ಪಂಚಾಯಿತಿ , ತಾಲ್ಲೂಕು ಪಂಚಾಯತ್, ಮತ್ತು ಟಿಎಂಸಿ ಸದಸ್ಯರ ಸಭೆ ನಡೆಸಿದ್ದು ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದ್ದಾರೆ. ಇದಾಗಿ ಕೆಲವೇ ಸಮಯಕ್ಕೆ ಸತೀಶ್ ಜಾರಕಿಹೋಳಿಯವರ ಕಿರಿಯ ಸೋದರ ಲಖನ್ ಜಾರಕಿಹೋಳಿ ರಮೇಶ್ ಬದಲಿಗೆ ಗೋಕಾಕದಲ್ಲಿ ಕಾಂಗ್ರೆಸ್ ಪಕ್ಷದ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದರು.
ವಿವಿಧ ಸ್ಥಳೀಯ ಸಂಸ್ಥೆಗಳ ಸದಸ್ಯರು ಶನಿವಾರ ನಡೆದ ಸಭೆಗೆ ಹಾಜರಾಗಿ ರಮೇಶ್ ಅವರನ್ನು ಭೇಟಿಯಾಗಿದ್ದಾರೆ.ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಅವರು ಎಲ್ಲರಿಗೂ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಕೆಲ ಮೂಲಗಳ ಪ್ರಕಾರ ನಿನ್ನೆ (ಶನಿವಾರ) ನಡೆದ ಕಾಂಗ್ರೆಸ್ ಸಮಾವೇಶಕ್ಕೆ ರಮೇಶ್ ಜಾರಕಿಹೋಳಿಗೆ ಆಹ್ವಾನವೇ ಬಂದಿರಲಿಲ್ಲ.
ಇದು ಒಂದೇ ವಾರದಲ್ಲಿ ರಮೇಶ್ ನ್ತಮ್ಮ ಬೆಂಬಲಿಗರೊಡನೆ ನಡೆಸಿದ ಎರಡನೇ ಸಭೆಯಾಗಿದ್ದು ರಮೇಶ್ ಅವರನ್ನು ಭೇಟಿಯಾದ ಹಲವು ಸ್ಥಳೀಯ ಸದಸ್ಯರು ಮತ್ತು ನಾಯಕರು ಬಿಜೆಪಿಯನ್ನು ಬೆಂಬಲಿಸುವ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆಯೇ ರಮೇಶ್ ಕಾಂಗ್ರೆಸ್ ನಲ್ಲೇ ಉಳಿಯಬೇಕೆಂದು ಬಯಸಿದ್ದಾರೆ ಎಂದು ಹೇಳಲಾಗಿದೆ.ಇನ್ನೊಂದೆಡೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೋಕಾಕ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೋಳಿ ಸ್ಪರ್ಧೆಗೆ ಸಿದ್ದವಾಗುತ್ತಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಗೋಕಾಕಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸತೀಶ್ ಅವರ ಜತೆ ಮಾತುಕತೆ ನಡೆಸಿದ್ದಾರೆ. ಆವೇಳೆ ರಮೇಶ್ ಬದಲಿಗೆ ಲಖನ್ ಅವರನ್ನು ಗೋಕಾಕದ ಕಾಂಗ್ರೆಸ್ ಮುಖಂಡನಾಗಿ ಬದಲಿಸಲು ಒಪ್ಪಿಗೆ ಸೂಚಿಸಿದ್ದಾರೆ.. ರಮೇಶ್ ಅದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಸಹ ಲಖನ್ ಗೊಕಾಕಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಸತೀಶ್ ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ, ಲಖನ್ ರಮೇಶ್ ಜೊತೆ ನಿಕಟ ಸಂಬಂಧ ಹೊಂದಿದ್ದಾಗ, ಸತೀಶ್ ಅವರಿಂದ ಬೇರಾಗಿದ್ದರು.ಗೋಕಾಕದಲ್ಲಿ ಇತ್ತೀಚಿನ ರಾಜಕೀಯ ವಿದ್ಯಮಾನಾಳುಇ ಸತೀಶ್ ಹಾಗೂ ಲಖನ್ ಅವರನ್ನು ಸಮೀಪಕ್ಕೆ ತಂದಿದೆ. ಎಂದು ಮೂಲಗಳು ಹೇಳಿದೆ.
ಪಕ್ಷದಿಂದ ರಮೇಶ್ ಅವರನ್ನು ಅಮಾನತು ಮಾಡುವ ಕ್ರ್ಮದ ಬಗ್ಗೆ ಕಾಂಗ್ರೆಸ್ ಏನೂ ಹೇಳದೆ ಹೋದರೂ ಈ ಭಾಗದಲ್ಲಿನ ಲೋಕಸಭೆ ಚುನಾವಣೆ ಸಮಯ ಪಕ್ಷದ ಪರ ಪ್ರಚಾರ ನಡೆಸಲು ಕಾಂಗ್ರೆಸ್ ನಾಯಕರು ಲಖನ್ ಅವರ ಮೊರೆ ಹೋಗಿದ್ದಾರೆ.ಅದಕ್ಕಾಗಿಯೇ ಲಖನ್ ಕಳೆದ ಕೆಲವು ವಾರಗಳಿಂದ ಗೊಕಾಕ್ ನಲ್ಲಿ ನಡೆಯುತ್ತಿರುವ ಎಲ್ಲಾ ರ್ಯಾಲಿಗಳು ಮತ್ತು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಗೆ ಸಕ್ರಿಯವಾಗಿ ಬೆಂಬಲ ನೀಡುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos