ಸಾಂದರ್ಭಿಕ ಚಿತ್ರ 
ಕರ್ನಾಟಕ

ಲಿಂಗಾಯತ ಮತಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧ

ಲಿಂಗಾಯತ ಪಂಚಮಸಾಲಿ ಗುಂಪಿನ ಮತಗಳನ್ನುಕ್ರೂಢೀಕರಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ, ಲಿಂಗಾಯತ ಸಮುದಾಯದ ಇತರ ಸಮುದಾಯದ ಮತಗಳ ಮೇಲೂ ಕಣ್ಣಿಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ಲಿಂಗಾಯತ ನಾಯಕರ ನಡುವೆ ವಾಗ್ಯುದ್ಧವೇ ನಡೆಯುತ್ತಿದೆ.

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಗುಂಪಿನ ಮತಗಳನ್ನುಕ್ರೂಢೀಕರಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ, ಲಿಂಗಾಯತ ಸಮುದಾಯದ  ಇತರ ಸಮುದಾಯದ ಮತಗಳ ಮೇಲೂ ಕಣ್ಣಿಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ಲಿಂಗಾಯತ ನಾಯಕರ ನಡುವೆ ವಾಗ್ಯುದ್ಧವೇ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ ಲಿಂಗಾಯತ ಸಮುದಾಯದ ಸಭೆಯಲ್ಲಿ ಜಗದೀಶ್ ಶೆಟ್ಟರ್, ಅರವಿಂದ ಬೆಲ್ಲಾದ ಮತ್ತಿತರ ಮುಖಂಡರನ್ನು ಪ್ರಹ್ಲಾದ್ ಜೋಷಿ ಸೇವಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ವಿನಯ್ ಕುಲಕರ್ಣಿ ವೈಯಕ್ತಿಕ ದಾಳಿ ನಡೆಸಿದ  ನಂತರ ಈ ವಿವಾದ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಹೇಳಿಕೆ ನೀಡುವ ಮುನ್ನ ಅಷ್ಟಾಗಿ  ಗಂಭೀರತೆ ಪಡೆದುಕೊಂಡಿರಲಿಲ್ಲ,

ವಿನಯ್ ಕುಲಕರ್ಣಿ ಜಾತಿ ಕಾರ್ಡ್ ನಲ್ಲಿ ಆಟ ಆಡುತ್ತಿರುವುದು ಖಂಡನಾರ್ಹವಾದದ್ದು ಎಂದು ಜಿಲ್ಲೆಯ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಯಾವಾಗಲೂ ಉತ್ತಮ ಮನ್ನಣೆ ದೊರಕಿಸಿದೆ.ಆದ್ದರಿಂದಲೇ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್  ಮುಖ್ಯಮಂತ್ರಿಯಾಗಲು ಸಾಧ್ಯವಾಗಿತ್ತು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಲಿಂಗಾಯತ- ವೀರಶೈವ ಸಮುದಾಯವನ್ನು ಹೊಡೆಯಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲಾದ್  ಆರೋಪಿಸಿದ್ದಾರೆ. ಲಿಂಗಾಯತ ಭಾವನೆಗಳಿಗೆ ಧಕ್ಕೆ ತಂದವರು ಈಗ  ಸಮುದಾಯವನ್ನು ಒಗ್ಗೂಡಿಸುವ ಮೂಲಕ ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ ವಿನಯ್ ಕುಲಕರ್ಣೀ ಅವರನ್ನು ಟಾರ್ಗೆಟ್ ಮಾಡುತ್ತಿರುವ ಬಿಜೆಪಿ ಲಿಂಗಾಯತ ಶಾಸಕರ ವಿರುದ್ಧ ಹಿರಿಯ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಲಿಂಗಾಯತ ಮತಗಳ ಮೇಲೆಯೇ ಹೆಚ್ಚಿನ ಕಣ್ಣಿಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ CM ಗದ್ದುಗೆ! ನಾಳೆ ನಿತೀಶ್ ರಾಜೀನಾಮೆ? ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

ಬೈಕ್ ಚಾಲನೆ ಮಾಡುತ್ತಾ Reels ರೆಕಾರ್ಡ್, ಭೀಕರ ಅಪಘಾತದಲ್ಲಿ ಯುವತಿ ಸಾವು, ಯುವಕ ಗಂಭೀರ! video

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

SCROLL FOR NEXT