ಕರ್ನಾಟಕ

ತುಮಕೂರಿನಿಂದ ದೇವೇಗೌಡ ಸ್ಪರ್ಧೆ: ಧನ್ಯವಾದ ಹೇಳಿದ ಬಿಜೆಪಿ ಮುಖಂಡರು

Raghavendra Adiga
ತುಮಕೂರು: ಆಸಕ್ತಿದಾಯಕ ಬೆಳವಣಿಗೆಯೊಂದರಲ್ಲಿ  ತುಮಕೂರು ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರು ಮಾಜಿ ಪ್ರಧಾನಿ ಎಚ್,ಡಿ. ದೇವೇಗೌಡರಿಗೆ ಧನ್ಯವಾದ ಹೇಳಿದ್ದಾರೆ. ದೇವೇಗೌಡರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಕ್ಷೇತ್ರದಿಂಡ ಸ್ಪರ್ಧಿಸಿರುವುದು ಬಿಜೆಪಿಗೆ ಗೆಲುವು ದಕ್ಕಲು ಚಿಕ್ಕ ಸಹಾಯವನ್ನು ಮಾಡಲಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಬಿಜೆಪಿ ಶಾಸಕ ಜೆ. ಸಿ.ಮಾಧುಸ್ವಾಮಿ ತಾವೊಬ್ಬ ಲಿಂಗಾಯತ ಸಮುದಾಯದ ಮುಖಂಡರಾಗಿದ್ದು  ನಾವು ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಮತದಾರರನ್ನು ಒಟ್ಟುಗೂಡಿಸಿದಾಗ ಅವರ ಸಂಖ್ಯೆಯು ಬಿಜೆಪಿ ಪರವಾಗಿರುವವರಿಗಿಂತ ಹೆಚ್ಚಿದೆ, ಆದರೆ ನಾವು ನಮ್ಮ ಶ್ರೇಷ್ಠ ಪ್ರಯತ್ನದ ಮೂಲಕ ಗೆಲುವಿನ ಅಂತರ ಕಡಿಮೆಗೊಳಿಸಿಕೊಳ್ಲಲು ಇದು ಸಹಕಾರಿಯಾಗಿದೆ ಎಂದಿದ್ದಾರೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಮಾತ್ರವೇ ಜೆಡಿಎಸ್ ತನ್ನ ಸ್ಥಾನವನ್ನು ಕಳೆದುಕೊಂಡಿದೆ, ಇದಕ್ಕೆ ಕಾರಣ ಅಲ್ಲಿ ಕಾಂಗ್ರೆಸ್ ನ ಪ್ರಭಾವೀ ಅಭ್ಯರ್ಥಿ ಇದ್ದರು.ಚಿಕ್ಕನಾಯಕನಹಳ್ಳಿ ಜೆಡಿಎಸ್ ನ ಭದ್ರಕೋಟೆಯಾಗಿದ್ದೂ ಅಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು ಎಂದು ಅವರು ನೆನೆಪಿಸಿಕೊಂಡರು. ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ ಬಿಜೆಪಿ ತಮ್ಮ ಕ್ಷೇತ್ರದಲ್ಲಿ ಜಯಗಳಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಜಯರಾಮ್ ಈ ವಿಭಾಗದ ಪ್ರಭಾವಿ ಒಕಲಿಗ ಮುಖಂಡರಿದ್ದಾರೆ.
ಸುಮಾರು  15 ವರ್ಷಗಳ ಸುದೀರ್ಘ ಅವಧಿಯ ನಂತರ, ಬಿಜೆಪಿಯ ಜಯರಾಮ್ 2018 ರ ವಿಧಾನಸಭಾ ಚುನಾವಣೆಯಲ್ಲಿ ಸಣ್ಣ ಅಂತರದಿಂದ ಗೆದ್ದಿದ್ದಾರೆಸಾಂಪ್ರದಾಯಿಕವಾಗಿ, ತುರುವೇಕೆರೆ ಸಹ ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಅಲ್ಲಿ ಅಭಿಮಾನಿಗಳು ದೇವೇಗೌಡರ ಪ್ರತಿಮೆಯನ್ನು ಸಹ ಸ್ಥಾಪಿಸಿದ್ದಾರೆ.
ತುಮಕೂರು,ಬಿಜೆಪಿ ಅಭ್ಯರ್ಥಿಯಾಗಿರುವ  ಜಿ.ಎಸ್. ಬಸವರಾಜು ತುಮಕೂರು ನಗರ ವಿಧಾನಸಭೆ ಕ್ಷೇತ್ರದ ಕುರಿತು ಭರವಸೆಯನ್ನು ಇರಿಸಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿದೆ.ಇಲ್ಲಿ ಅವರ ಪುತ್ರ ಜಿಬಿ ಜ್ಯೋತಿಗಣೇಶ್ ಶಾಸಕರಾಗಿದ್ದಾರೆ. ಇನ್ನು ತಿಪಟೂರು ಕ್ಷೇತ್ರದಲ್ಲಿ ಸಹ ಬಿಜೆಪಿ ಮುಂದಿರಲಿದೆ ಎನ್ನಲಾಗಿದ್ದು ಅಲ್ಲಿ ಬ್ರಾಹ್ಮಣ ಸಮುದಾಯದ ಬಿ.ಸಿ.ನಾಗೇಶ್  ಶಾಸಕರಾಗಿದ್ದಾರೆ. ನಾಗೇಶ್  2018 ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಹಾಗೂ ಎಸ್ಸಿ / ಎಸ್ಟಿ ಜನಾಂಗದ ಬೆಂಬಲದಿಂದ ಇಲ್ಲಿ ಜಯ ಗಳಿಸಿದ್ದಾರೆ.
ಇನ್ನು ತುಮಕೂರು, ತಿಪಟೂರುಗಳ ಹೊರತಾಗಿ ಗುಬ್ಬಿ ಕ್ಷೇತ್ರ ಸಹ ಬಸವರಾಜು ಅವರ ಬೆನ್ನಿಗಿದೆ ಎನ್ನಲಾಗಿದ್ದು ಒಂದೊಮ್ಮೆ ಮೂರೂ ಕ್ಷೇತ್ರದಲ್ಲಿ ಬಿಜೆಪಿ ಪರ ಒಲವಿದ್ದದ್ದೇ ಆದಲ್ಲಿ ಬಸವರಾಜು ಗೆಲುವು ಸುಲಭವಾಗಲಿದೆ.ಗುಬ್ಬಿಯಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರ ಪ್ರಾಬಲ್ಯ ಸಮಾನವಾಗಿದ್ದು ಮಧುಗಿರಿ, ಕೊರಟಗೆರೆ ಕ್ಷೇತ್ರಗಳಲ್ಲಿ ಸಹ ಬಸವರಾಜು ಹಾಗೂ ದೇವೇಗೌಡರ ನಡುವೆ ನೇರ ಮುಖಾಮುಖಿ ನಡೆಯಲಿದೆ ಎಂದು ಮೂಲಗಳು ಹೇಳಿದೆ.
SCROLL FOR NEXT