ಶಿಸ್ತು ಕ್ರಮದ ಎಚ್ಚರಿಕೆಗೆ ಸೆಡ್ಡು:ಸಾಮೂಹಿಕ ರಾಜೀನಾಮೆಗೆ ಮಂಡ್ಯ ಕಾಂಗ್ರೆಸಿಗರ ನಿರ್ಧಾರ
ವರಿಷ್ಠರ ಶಿಸ್ತು ಕ್ರಮದ ಎಚ್ಚರಿಕೆಗೆ ಸೆಡ್ಡು ಹೊಡೆದಿರುವ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದು,ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪೂರ್ಣ ಪ್ರಮಾಣದ ಪ್ರಚಾರಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಮಂಡ್ಯ: ವರಿಷ್ಠರ ಶಿಸ್ತು ಕ್ರಮದ ಎಚ್ಚರಿಕೆಗೆ ಸೆಡ್ಡು ಹೊಡೆದಿರುವ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದು,ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪೂರ್ಣ ಪ್ರಮಾಣದ ಪ್ರಚಾರಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರದಲ್ಲಿ ತೊಡಗುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪಕ್ಷದ ವರಿಷ್ಠರು ನೀಡಿದ್ದ ಶಿಸ್ತು ಕ್ರಮದ ಎಚ್ಚರಿಕೆಗೆ ಸೆಡ್ಡು ಹೊಡೆದಿರುವ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಯ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದ್, ನಾಗಮಂಗಲ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ರಾಮು, ಮಳವಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣೇಗೌಡ ಮತ್ತಿತರರು ರಾಜೀನಾಮೆಗೆ ನಿರ್ಧರಿಸಿದ್ದಾರೆ.
ಕ್ಷೇತ್ರದಲ್ಲಿ ಸುಮಲತಾ ಬಲಿಷ್ಠ ನಾಯಕಿಯಾಗುತ್ತಾರೆಂದು ಆತಂಕಗೊಂಡು ಕೆಲವರು ಜೆಡಿಎಸ್ ಕಡೆ ಹೋಗಿದ್ದಾರೆ. ಹೀಗಾಗಿ ಶೇ. 80 ರಷ್ಟು ಪದಾಧಿಕಾರಿಗಳು ರಾಜೀನಾಮೆ ಕೊಡುತ್ತೇವೆ ಎಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪದಾಧಿಕಾರಿಗಳು ಘೋಷಿಸಿದ್ದಾರೆ.