ಕರ್ನಾಟಕ

ಸಾರ್ವಜನಿಕ ಸಭೆಯಲ್ಲಿ ಪ್ರಕಾಶ್ ರೈ ಮತಯಾಚನೆ ಆರೋಪ,ಸಾಕ್ಷ್ಯಧಾರಗಳಿಲ್ಲ- ಪೊಲೀಸರು

Nagaraja AB

ಬೆಂಗಳೂರು: ನಟ ಪ್ರಕಾಶ್ ರಾಜ್ ವಿರುದ್ಧ ಚುನಾವಣಾ ನೀತಿ ಸಂಹಿತೆ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಪೊಲೀಸರು ಇಂದು ಪ್ರಕಾಶ್ ರೈ ಪಾಲ್ಗೊಂಡಿದ್ದ ಸಾರ್ವಜನಿಕ ಸಭೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದರು.

ಸೆಂಟ್ರಲ್ ಕ್ಷೇತ್ರದ ಪಕ್ಷೇತರ  ಅಭ್ಯರ್ಥಿಯಾಗಿರುವ ಪ್ರಕಾಶ್ ರೈ, ಮಾರ್ಚ್ 12ರಂದು ಮಹಾತ್ಮ ಗಾಂಧಿ ರಸ್ತೆ ಬಳಿ ಸಾರ್ವಜನಿಕ ಸಭೆಯಲ್ಲಿ ಪ್ರಕಾಶ್ ರಾಜ್ ಮತಯಾಚಿಸಿದ್ದ ಆರೋಪ ಕೇಳಿಬಂದಿತ್ತು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಚುನಾವಣಾಧಿಕಾರಿ ಡಿ ಮೂರ್ತಿ, ಸಾರ್ವಜನಿಕ ಸಭೆ ಮುಗಿದ ಮೂರು ಗಂಟೆಗಳ ಬಳಿಗೆ ನನಗೆ ಮಾಹಿತಿ ನೀಡಲಾಯಿತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರು ಪ್ರಕಾಶ್ ರೈ ಹೇಳಿಕೆಯನ್ನು ವಿಡಿಯೋ ದಾಖಲೆ ಮಾಡಿಕೊಂಡಿದ್ದರು.
ವಿಡಿಯೋ ದೃಶ್ಯಾವಳಿಗಳನ್ನು  ಚುನಾವಣಾ ಆಯೋಗದ ಹಿರಿಯ  ಅಧಿಕಾರಿಗಳಿಗೆ ಕಳುಹಿಸಿದ ನಂತರ ಪೊಲೀಸ್ ಠಾಣೆಗೆ ತೆರಳಿ ಎಫ್  ಪ್ರಕರಣ ದಾಖಲಿಸಲಾಯಿತು. ನ್ಯಾಯಾಲಯದ ಆದೇಶದ ಪ್ರಕಾರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದರು.
SCROLL FOR NEXT