ಮಂಡ್ಯ ಹಾಸನ, ತುಮಕೂರು, ಮೈಸೂರಿನಲ್ಲಿ ಬಿರುಕು
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳ ಮೈತ್ರಿ ಧರ್ಮದಂತೆ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊತ ಕೊತ ಕುದಿಯುತ್ತಿದ್ದಾರೆ, ಕೇವಲ ಮಂಡ್ಯ ಮಾತ್ರವಲ್ಲದೇ ಪಕ್ಕದ ಕ್ಷೇತ್ರಗಳಾದ ಮೈಸೂರು, ತುಮಕೂರು ಮತ್ತು ಹಾಸನದಲ್ಲೂ ಬಿರುಕು ಮೂಡಿದೆ.
ಮೈತ್ರಿಯಿಂದಾಗಿ ಹಾಸನದಲ್ಲಿ ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆ.
ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವ ತಳ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತಿದೆ, ಆದರೆ ಇದು ಅಲ್ಲಿನ ಸ್ಥಳೀಯ ಕಾರ್ಯಕರ್ತರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ, ತಮ್ಮ ಉದ್ದೇಶ ಈಡೇರಬೇಕೆಂದು ಮಾತ್ರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ,
ಹಾಸನ , ತುಮಕೂರು ಮಂಡ್ಯ ಮತ್ತು ಮೈಸೂರಿನಲ್ಲಿ ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್ ಕಡ್ಡಾಯವಾಗಿ ಬೆಂಬಲಿಸಬೇಕು ಎಂಬ ಆಜ್ಞೆ ಸಾಂಪ್ರಾದಾಯಿಕ ವಿರೋಧಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಭಾರೀ ಆಕ್ರೋಶ ಮೂಡಿಸಿದೆ. ಇದಿ ಮೈತ್ರಿ ಪಕ್ಷಗಳ ಬುಡವನ್ನು ಅಲ್ಲಾಡುತ್ತಿದೆ.
ಮೈಸೂರಿನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಜೆಡಿಎಸ್ ಬೆಂಬಲಿಸುತ್ತಿದೆ, ಜೆಡಿಎಸ್ ವರಿಷ್ಟ ಎಚ್.ಡಿ ದೇವೇಗೌಡ, ಸಿಎಂ ಕುಮಾರಸ್ವಾಮಿ, ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ಮುಖಂಡರು ನಿನ್ನೆ ಪೂರ್ತಿ ಸಭೆ ನಡೆಸಿ ಚರ್ಚಿಸಿದ್ದಾರೆ.
ಆದರೆ ಹಾಸನ, ತುಮಕೂರು ಮಂಡ್ಯದಲ್ಲಿ ಜೆಡಿಎಸ್ ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ, ಆದರೆ ಕಾಂಗ್ರೆಸ್ ಕಾರ್ಯಕರ್ತರ ನಡೆಯಿಂದಾಗಿ ಬೇಸರಗೊಂಡಿರುವ ದೇವೇಗೌಡರು ರಾಹುಲ್ ಗಾಂಧಿ ಜೊತೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮಂಡ್ಯ ಮತ್ತು ತುಮಕೂರು ಬಂಡಾಯ ಮೈತ್ರಿಗೆ ಬೆದರಿಕೆಯೊಡ್ಡಿದೆ, ಕಾಂಗ್ರೆಸ್ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಪರಿವರ್ತಿಸಬೇಕಾದ ಅನಿವಾರ್ಯತೆ ಇದೆ,ಆದರೆ ಅಲ್ಲಿ ಎರಡು ಸಮಸ್ಯೆಯಿದೆ, ಕಾರ್ಯಕರ್ತರು ಮತ್ತು ಮತದಾರರು, ಮೈತ್ರಿ ಅಭ್ಯರ್ಥಿ ಪರ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿಲ್ಲ, ಹೀಗಾಗಿ ಮತದಾರರು ತಮ್ಮ ಮೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ ಎಂದು ರಾಜಕೀಯ ವಿಶ್ಲೇಷಕ ನಾರಾಯಣ ಎಂಬುವರು ಹೇಳಿದ್ದಾರೆ.
ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಸುಮಾರು ಎರಡೂವರೆ ಲಕ್ಷ ಮತ ಗಳಿಸಿತ್ತು, ಆದರೆ ಈ ಬಾರಿ ಬಿಜೆಪಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics