ಸುಮಲತಾ ಅಂಬರೀಷ್ 
ಕರ್ನಾಟಕ

ನನ್ನ ಗೆಲುವು ಮಂಡ್ಯ ಜನರ ಹೆಮ್ಮೆ, ರೈತ ಸಂಘ ಹಾಗೂ ಬಿಜೆಪಿ ಬೆಂಬಲದಿಂದ ಆನೆ ಬಲ: ಸುಮಲತಾ

50 ವರ್ಷಗಳ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದು ಸಂಸದರಾಗಿರುವ ಇತಿಹಾಸವಿಲ್ಲ, ನಾನು ಇದರ ಬಗ್ಗೆ ಚಿಂತಿಸಿಲ್ಲ, ನನ್ನ ಸಾಮರ್ಥ್ಯಕ್ಕನುಗುಣವಾಗಿ...

ಬೆಂಗಳೂರು:  ಲೋಕಸಭೆ ಚುನಾವಣೆಗೆ ನಟಿ ಸುಮಲತಾ ಅಂಬರೀಷ್ ಅವರ ಎಂಟ್ರಿಯಿಂದಾಗಿ ಮಂಡ್ಯ ಕ್ಷೇತ್ರ ಇಡೀ ಇಂಡಿಯಾದ ಗಮನ ಸೆಳೆದಿದೆ, ಮಂಡ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಕೂಡ ಪ್ರಬಲ ಸ್ಪರ್ದಿಯಾಗಿದ್ದಾರೆ, ಇದೇ ವೇಳೆ ನಟಿ ಸುಮಲತಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರ: 50 ವರ್ಷಗಳ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದು ಸಂಸದರಾಗಿರುವ ಇತಿಹಾಸವಿಲ್ಲ, ಅದನ್ನು ನೀವು ಬ್ರೇಕ್ ಮಾಡುತ್ತೀರಾ?
ಈ ವಿಷಯ ಕೇಳಿ ನನಗೆ ಹೆಮ್ಮೆಯಾಗುತ್ತಿದೆ, ನಾನು ಇದರ ಬಗ್ಗೆ ಚಿಂತಿಸಿಲ್ಲ, ನನ್ನ ಸಾಮರ್ಥ್ಯಕ್ಕನುಗುಣವಾಗಿ ಎಷ್ಟು ಸಾಧ್ಯವೋ ಅದರ ಕಡೆ ಗಮನ ಹರಿಸುತ್ತಿದ್ದೇನೆ,
ಪ್ರ: ಚುನಾವಣಾ ಪ್ರಚಾರದಲ್ಲಿ ನಿಮ್ಮ ಸಾಮರ್ಥ್ಯ ಹಾಗೂ ನಿಮ್ಮ ನ್ಯೂನ್ಯತೆಗಳು ಏನು?
ಸಾರ್ವಜನಿಕರೊಂದಿಗಿನ ನನ್ನ ಒಡನಾಟ ನನ್ನ ಸಾಮರ್ಥ್ಯ, ನಾನು ಮಂಡ್ಯ ಜನರ ನಾಡಿಮಿಡಿತ ತಿಳಿದುಕೊಂಡಿದ್ದೇನೆ, ನಾನು ಪಕ್ಷೇತರವಾಗಿ ಸ್ಪರ್ಧಿಸಿರುವುದು ನನ್ನ ನ್ಯೂನ್ಯತೆ,ಪ್ರಚಾರ ಮಾಡಲು ನಮಗೆ ತುಂಬಾ ಕಡಿಮೆ ಸಮಯವಿದೆ, ನನಗೆ ಸಂಘಟನಾತ್ಮಕವಾಗಿ ಹಾಗೂ ಸಮರ್ಥವಾಗಿ ಕೆಲಸ ಪ್ರಚಾರ ಮಾಡುವುದು ಬೇಕು, ತಳ ಮಟ್ಟ ಅಂದರೆ ಬೂತ್ ಮಟ್ಟದಲ್ಲಿ ಮನೆ ಮನೆಗೂ ಹೋಗಿ ಪ್ರಚಾರ ಮಾಡುವುದು ದೊಡ್ಡ ಸವಾಲು, ನನಗೆ ರೈತ ಸಂಘ ಹಾಗೂ ಬಿಜೆಪಿ ಬೆಂಬಲ ಆನೆ ಬಲ ತಂದಿದೆ.
ಪ್ರ: ಗೆದ್ದ ನಂತರ ನೀವು ಎನ್ ಡಿಎ ಒಕ್ಕೂಟ ಸೇರುತ್ತೀರಾ?
ನನ್ನ ಬೆಂಬಲಕ್ಕೆ ಬಿಜೆಪಿ ನಿಂತಿದೆ, ಎಲ್ಲಾ ಪಕ್ಷಗಳಲ್ಲಿಯೂ ಅಂಬರೀಷ್ ಅವರ ಸ್ನೇಹಿತರಿದ್ದಾರೆ,  ಆಪ್ತ ಸ್ನೇಹಿತರಾದ ಶತೃಘ್ನ ಸಿನ್ಹಾ ಮತ್ತು ಕೃಷ್ಣಂ ರಾಜು ಬಿಜೆಪಿಯಲ್ಲಿದ್ದಾರೆ, ಆದರೆ ನಾನು ರಾಜಕಾರಣಿಯಲ್ಲ, ನಾನು ಕಾಂಗ್ರೆಸ್ ಅಥವಾ ಯಾರೋಬ್ಬರ ವಿರುದ್ಧವಾಗಿ ಮಾತನಾಡುವುದಿಲ್ಲ.
ಪ್ರ: ನಿಮ್ಮ ಪ್ರಚಾರದಲ್ಲಿ ಪಾಲ್ಗೋಳ್ಳುವವರು ಪ್ರಮುಖವಾಗಿ ಸಿನಿಮಾ ರಂಗದವರು, ಸಿಎಂ ಕುಮಾರಸ್ವಾಮಿ ಪುತ್ರ ಕೂಡ ನಟ, ಸಿನಿಮಾ ನಟರ ಪ್ರಚಾರ ನಿಮಗೆ ಹೇಗೆ ಸಹಾಯಮಾಡುತ್ತದೆ?
ಮಂಡ್ಯ ಲೋಕಸಭೆ ಕ್ಷೇತ್ರ ಸೇಫ್ ಎಂದು ಜೆಡಿಎಸ್ ಭಾವಿಸಿದೆ, ರೋಮನ್ ಸಾಮ್ರಾಜ್ಯ ಕೂಡ ನಾಶವಾಯಿತು, ಯಾವುದನ್ನೂ ಯಾರೂ ಟೇಕನ್ ಫಾರ್ ಗ್ರಾಂಟೆಡ್ ಎಂದುಕೊಳ್ಳಬಾರದು, ನಿಮ್ಮ ಗುರಿ ಸರಿಯಿದ್ದರೇ ಎಲ್ಲದಕ್ಕೂ ಒಂದು ದಾರಿ ಇರುತ್ತದೆ, ಇಲ್ಲಿ ನನ್ನ ಬಗ್ಗೆ ನಾನು ಮಾತನಾಡುತ್ತಿಲ್ಲ, ಜನರ ನಿರ್ಧಾರದ ಮೂಲಕ ನನ್ನನ್ನು ಕಾಣುತ್ತಿದ್ದೇನೆ.
ಪ್ರ: ಇದೇ ಕ್ಷೇತ್ರದಿಂದ ಹಿಂದೆ ಅಂಬರೀಷ್ ಕೂಡ ಸೋತಿದ್ದರು, ನಿಮ್ಮ ಗೆಲುವಿನ ಬಗ್ಗೆ ನಿಮ್ಮ ಆತ್ಮ ವಿಶ್ವಾಸ ಹೇಗೆ?
 ಮಂಡ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗಿದೆವ, ಅಂಬರಪೀಷ್ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು, ಅದುವೇ ಭಾರೀ ಮತಗಳ ಅಂತರದಿಂದ, ಆದರೆ ಅವರು ಸೋತಿದ್ದು, ಕೆಲವು ಮತಗಳ ಅಂತರದಿಂದ, ಅದರ ಅರ್ಥ ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದಲ್ಲ, 
ಹಿಂದಿನ ಚುನಾವಣೆಯಲ್ಲಿ ಅವರು ಅಧಿಕ ಮತಗಳಿಸಿದ್ದರು, ಆದರೆ ಕಳೆದ ಚುನಾವಣೆಯಲ್ಲಿ ತಾವು ಸ್ಪರ್ಧಿಸದಿರಲು ನಿರ್ಧರಿಸಿ ಭಿ ಪಾರಂ ವಾಪಸ್ ಕಳಿಸಿದ್ದರು.  ಜನ ಕೂಡ ಅವರ ನಿರ್ಧಾರವನ್ನು ಗೌರವಿಸಿದ್ದರು, ಮಂಡ್ಯ ಜನರ ಜೊತೆ ಭಾವನಾತ್ಮಕ ಸಂಬಂಧವಿದೆ,  ಅವರು ಒಂದು ಚುನಾವಣೆಯಲ್ಲಿ ಸೋತಿರಬಹುದು , ಆದರೆ ಜನರ ಪ್ರೀತಿಯಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ,
ಪ್ರ: ಎಷ್ಟು ಮತಗಳ ಅಂತರಿದಿಂದ ಗೆಲ್ಲುವ ನಿರೀಕ್ಷೆಯಿದೆ?
ನನಗೆ ನಂಬರ್ ಗಳಲ್ಲಿ ಆಸಕ್ತಿಯಿಲ್ಲ, ನಾನು ನಾಮಪತ್ರ ಸಲ್ಲಿಸುವಾಗ ಅಷ್ಟು ಮಟ್ಟದಲ್ಲಿ ಜನ ಬರುತ್ತಾರೆ ಎಂದು ನಾನು ಕಲ್ಪಿಸಿಕೊಂಡಿರಲಿಲ್ಲ, ನನ್ನ ಸಾಮರ್ಥ್ಯ ತೋರಿಸುವ  ಇರಾದೆ ಇಲ್ಲ, ಗೆಲ್ಲುವುದು ಮುಖ್ಯ, ಅಂತರ ನನಗೆ ಮುಖ್ಯವಲ್ಲ.
ಪ್ರ: ಅಂಬರೀಷ್ ಅಭಿಮಾನಿಗಳು ಹೇಳಿದ್ದರೆಂದು ನೀವು ಚುನಾವಣೆಯಲ್ಲಿ ಸ್ಪರ್ಧಿಸಿದ್ದೀರಿ? ಆದರೆ 16 ಲಕ್ಷ ಮತದಾರರ ಮೇಲೆ ಪ್ರಭಾವ ಬೀರಲು ಸಾಧ್ಯವೇ?
ಕೇವಲ ಕೆಲವು ಅಭಿಮಾನಿಗಳು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯದ ಮೇಲೆ ನಾನು ನಿರ್ಧಾರ ತೆಗೆದುಕೊಂಡಿಲ್ಲ, ಕಳೆದ ಮೂರು ವಾರಗಳಿಂದ ಮಂಡ್ಯದ್ಯಾಂತ ಪ್ರವಾಸ ಮಾಡಿದ್ದೇನೆ, ಜನರ ಜೊತೆ ಮಾತನಾಡಿದ್ದೇನೆ,  ಜನರಿಗೆ ಏನು ಬೇಕು  ಎಂಬುದನ್ನು ತಿಳಿದುಕೊಂಡಿದ್ದೇನೆ, ಒಂದು ವೇಳೆ ಚುನಾವಣೆಯಿಂದ ಹಿಂದೆ ಸರಿದರೇ ಯಾವತ್ತೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದರು, ಅವರ ಭಾವುಕತನ ಮತ್ತು ಉತ್ಸಾನ ನನಗೆ ಹೆಮ್ಮೆ ತರಿಸುತ್ತದೆ, ಇದೆಲ್ಲಾ ನನಗೆ ಗೌರವದ ವಿಷಯ.
ಪ್ರ: ನಿಮ್ಮ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರರು ಭಾಗವಹಿಸುತ್ತಿರುವುದು ಮಂಡ್ಯದಲ್ಲಿ ಒಳಜಗಳ ಸೃಷ್ಟಿಸಿದೆ, ನಿಮ್ಮ ಪ್ರಚಾರ ಮೈತ್ರಿ ಪಕ್ಷಕ್ಕೆ ಬೆದರಿಕೆ ಉಂಟು ಮಾಡಿದೆಯೇ?
ನನಗೆ ಗೊತ್ತಿಲ್ಲ, ನನ್ನ ನಿರ್ಧಾರದಿಂದ ಮೈತ್ರಿ ಪಕ್ಷಗಳಿಗೆ ಭಯ ಮೂಡಿಸಿದೆ ಎಂದು ಗೊತ್ತಿಲ್ಲ, ಕಾರ್ಯಕರ್ತರಿಗೆ ಬೆದರಿಕೆ ಬರುತ್ತಿವೆ
ಪ್ರ:ಮಂಡ್ಯ ಜನರಿಗೆ ನಿಮ್ಮ ಯೋಜನೆ ಏನು?
ಚುನಾವಣೆ ಕಣದಲ್ಲಿದ್ದಾಗ  ಹಲವು ಘಟನೆಗಳು ನಡೆಯುತ್ತವೆ ಎಂಬುದು ನನಗೆ ಈಗ ತಿಳಿಯಿತು, ಕೆಸರೆರಚಾಟ, ಅಸಹ್ಯಕರ ಮಟ್ಟಕ್ಕೆ ಇಳಿದು ರಾಜಕಾರಣ ಮಾಡಬಾರದು, ಅದರ ಅವಶ್ಯಕತೆಯೂ ಇಲ್ಲ, ಚುನಾವಣೆಯನ್ನು ಗೌರವಯುತವಾಗಿ ನಡೆಸಬೇಕು,  ಯಾವುದೇ ರೀತಿಯ ವಯಕ್ತಿಕ ನಿಂದನೆ ಮಾಡಬಾರದು, ಇದೇ ನನ್ನ ಮೊದಲ ಅಜೆಂಡಾ, ನಾನು ರಾಜಕಾರಣದಲ್ಲಿ ಅಂಬರೀಷ್ ಹಾದಿಯಲ್ಲೇ ನಡೆಯುತ್ತೇನೆ,  ಎಂಪಿ ಗಳ ಅನುದಾನದ ಬಗ್ಗೆ ನನಗೆ ತಿಳಿದಿದೆ, ಅದನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೇನೆ.
ಪ್ರ: ಒಂದು ವೇಳೆ ಗೆದ್ದರೇ ನೀವು ಬಿಜೆಪಿ ನೇತೃತ್ವದ ಎನ್ ಡಿಎ ಕೂಟ ಸೇರುತ್ತೀರಾ?
ನಾನು ಪಕ್ಷೇತರವಾಗಿ ಸ್ಪರ್ಧಿಸಬೇಕೆಂದು ಕೇವಲ ಒಂದೇ ರಾತ್ರಿಯಲ್ಲಿ ನಿರ್ಧಾರ ತೆಗೆದುಕೊಂಡಿಲ್ಲ, ಒಂದು ವೇಳೆ ಅಂತಹ ಸಂದರ್ಭ ಬಂದರೇ ನಾನು ಜನರ ಬಳಿ ಹೋಗಿ ಚರ್ಚಿಸಿ ಅವರ ನಿರ್ಧಾರದಂತೆ ನಾನು ನಡೆದುಕೊಳ್ಳುತ್ತೇನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ