ಬೆಂಗಳೂರು: ನಮ್ಮ ತಲೆ ಮೇಲೆ ಅಂಬರೀಷ್ ಅನ್ನೋ ಕೈಯ್ಯಿಲ್ಲ,ಅದಕ್ಕೆ ಈಗ ಎಲ್ಲರೂ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದರ್ಶನ್, ಡಿ.ಬಾಸ್ ಅನ್ನೋದು ಅಭಿಮಾನಿಗಳು ಕೊಟ್ಟ ಭಿಕ್ಷೆ ಎಂದು ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ, ಪ್ರಚಾರಕ್ಕೆ ಮಾತ್ರ ಹೋಗುತ್ತಿದ್ದೇನೆ, ಏಪ್ರಿಲ್ 2ನೇ ತಾರೀಖಿನಿಂದ ಮಂಡ್ಯ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ.
ನಾನು ಯಾವುದೇ ಟೀಕೆಗಳಿಗೆ ಉತ್ತರಿಸುವುದಿಲ್ಲ, ಎಲ್ಲವನ್ನೂ ಮೌನಮವಾಗಿಯೇ ಸ್ವೀಕರಿಸುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.