ಸಿ.ಎಸ್ ಪುಟ್ಟರಾಜು ಮತ್ತು ಅಂಬರೀಷ್
ಮಂಡ್ಯ: ಲೋಕಸಭೆ ಚುನಾವಣೆ ಸಮೀಪಿವಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ, ಸಿಎಂ ಕುಮಾರಸ್ವಾಮಿ ಆಪ್ತರ ಮನೆ ಮೇಲೆ ಆದಾಯ ತೆರಿಗೆ ದಾಳಿ ವಿಚಾರವಾಗಿ ಮುಖಂಡರುಗಳ ಕೆಸರೆರಚಾಟ ಹೆಚ್ಚಾಗಿದೆ.
ಮಂಜ್ಯ ಜಿಲ್ಲೆ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ಅವರ ಮನೆ ಮೇಲೆ ಐಟಿ ದಾಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾರಣ ಎಂದು ಪುಟ್ಟರಾಜು ಆರೋಪಿಸಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ ಸುಮಲತಾ ಅಂಬರೀಷ್, ಇದುವರೆಗೂ ನಾನು ಪುಟ್ಟರಾಜು ಅವರನ್ನು ಟಾರ್ಗೆಟ್ ಮಾಡಿ ಎಲ್ಲಿಯೂ ಮಾತನಾಡಿಲ್ಲ, ಅವರು ನನ್ನ ಬಗ್ಗೆ ಹೇಳಿಕೆ ನೀಡುವ ಮೊದಲು ಕಣ್ಣು ಮುಚ್ಚಿಕೊಂಡು ಒಮ್ಮೆ ಎಲ್ಲವನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದ್ದರು,
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಎಸ್ ಪುಟ್ಟರಾಜು, ಸುಮಲತಾ ಅಕ್ಕ ಅವರ ಬಗ್ಗೆ ನನಗೆ ಅಪಾರ ಗೌರವವಿದೆ, ಮಂಡ್ಯದಲ್ಲಿ ಅಂಬರೀಷ್ ಗೆ ರಾಜಕೀಯ ಪುನರ್ಜನ್ಮ ನೀಡಿದ್ದೇ ನಾನು, ಮತ್ತೊಮ್ಮೆ ಅಂಬಿ ಸಮಾಧಿ ಬಳಿ ತೆರಳಿ ಪೂದೆ ಸಲ್ಲಿಸುವ ಮುನ್ನ ಸುಮಲತಾ ಅವರು ಕಣ್ಣು ಮುಚ್ಚಿಕೊಂಡು ಒಮ್ಮೆ ನಮ್ಮ ಬಗ್ಗೆ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos