ಕರ್ನಾಟಕ

ದಾವಣಗೆರೆ: ಶಾಮನೂರು ಸ್ಪರ್ಧೆಗೆ ನಕಾರ, ಎಸ್.ಎಸ್. ಮಲ್ಲಿಕಾರ್ಜುನ್ ಮೈತ್ರಿ ಅಭ್ಯರ್ಥಿ

Raghavendra Adiga
ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಎದ್ದಿದ್ದ ಗೊಂದಲ ತಿಳಿಯಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಸ್ಪರ್ಧೆಗೆ ನಿರಾಕರಿಸಿದ್ದು ಇದೀಗ ಅವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಪಕ್ಷದ ಬಿ ಫಾರಂ ದೊರಕಿದೆ.
ಎಐಸಿಸಿ ಪ್ರಕಟಿಸಿದ್ದ ರಾಜ್ಯ ಕಾಂಗ್ರೆಸ್ ಪಟ್ಟಿಯಲ್ಲಿ ದಾವಣಗೆರೆ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿತ್ತು. ಆದರೆ ತಾವು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಶಿವಶಂಕರಪ್ಪ ಹೇಳಿದ್ದು ಅವರು ಚುನಾವಣೆಗೆ ನಿಲ್ಲುವ ಸಂಬಂಧ ನಿರಾಸಕ್ತಿ ತೋರಿಸಿದ್ದರು. ಇದರಿಂದ ದಾವಣಗೆರೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರೆನ್ನುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು.
ಆದರೆ ಈಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಶಾಮನೂರು ಅವರ ಪುತ್ರ ಮಲ್ಲಿಕಾರ್ಜುನ ಅವರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದೆ.
ಇದಕ್ಕೆ ಹಿಂದೆ ಸಹ ಮಲ್ಲಿಕಾರ್ಜುನ್ ಚುನಾವಣೆಗೆ ನಿಂತಿದ್ದು  ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸತತ ಸೋಲನುಭವಿಸಿದ್ದರು. ಆದರೆ ಈ ಬಾರಿ ಪಕ್ಷದ ಒತ್ತಾಯದ ಮೇರೆಗೆ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
SCROLL FOR NEXT