ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಪರವಾಗಿ ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ನಡೆಸುವುದಾಗಿ ರಿಯಲ್ ಸ್ಟಾರ್ ಉಪೇಂದ್ರ ತಿಳಿಸಿದ್ದಾರೆ
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳನ್ನು ಸುದ್ದಿಗೋಷ್ಠಿಗೆ ಪರಿಚಯಿಸಿ ಮಾತನಾಡಿದ ಉಪೇಂದ್ರ, ನಮ್ಮ ವಿಚಾರವೇ ಪ್ರಚಾರ, ನಾವು ಸೇವಕರಲ್ಲಾ, ಕಾರ್ಮಿಕರು ಮತ ನೀಡಿ ಗೆಲುವು ಸಾಧಿಸಿದರೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ" ಎಂದರು.
ಜನರನ್ನು ಯಾವ ರೀತಿ ಸಂಪರ್ಕಿಸಬೇಕು, ಯಾವ ರೀತಿ ಆಡಳಿತ ನಡೆಸಬೇಕು ಎಂಬ ಪರೀಕ್ಷೆ ನಡೆಸಲಾಗಿದ್ದು, ಆ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ನಾನಾ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪಕ್ಷ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ಕುಂದು ಕೊರತೆ, ನಿವಾರಿಸಿ ರಿಪೋರ್ಟ್ ಕಾರ್ಡ್ ನೀಡುವ ಕುರಿತು ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಅಣಕು ಪ್ರದರ್ಶನ ನೀಡಿದರು.
ಪ್ರಜಾಕೀಯ ಜನಸಾಮಾನ್ಯರ ಪಕ್ಷವಾಗಿದ್ದು, ಸಭೆ, ಸಮಾರಂಭಗಳ ಅವಶ್ಯಕತೆ ಇಲ್ಲ, ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೂಲಕವೇ ಪ್ರಚಾರ ನಡೆಸಲಾಗುವುದು. ನಮ್ಮಗೆ ಕೆಲಸ ಕೊಡಿ ಕೆಲಸ ಮಾಡುತ್ತೇವೆ ಎನ್ನುವುದೇ ಪ್ರಚಾರ ತಂತ್ರವಾಗಿದೆ ಎಂದು ಹೇಳಿದರು
ದುಡ್ಡು ಮಾಡುವುದೇ ಸಮಾಜ ಸೇವೆ ಅಂತಾ ಕೆಲವರು ಅಂದುಕೊಂಡಿದ್ದಾರೆ. ಆದರೆ, ನಾವು ಕಾರ್ಮಿಕ ಅಂದುಕೊಂಡು ಪ್ರತಿಯೊಬ್ಬರು ಸಮಾಜ ಸೇವೆ ಮಾಡುತ್ತೇವೆ. ಚುನಾವಣೆ ಆದ ಮೇಲೆ ಬೇರೆ ಪಕ್ಷಾಂತರ ಗೊಂಡರೆ ಅವರ ಮನೆ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ದುಡ್ಡು ವೆಚ್ಚ ಮಾಡಿ ರಾಜಕೀಯ ಮಾಡಬೇಕೆಂಬ ಉದ್ದೇಶ ನಮ್ಮದಲ್ಲ, ಪ್ರಸ್ತುತದಲ್ಲಿನ ರಾಜಕೀಯವನ್ನೇ ಬದಲಾವಣೆ ಮಾಡೇಕು ಎಂಬುದು ನಮ್ಮ ಉದ್ದೇಶವಾಗಿದೆ. ನೀವು ಕೆಲಸ ಕೊಟ್ಟು ಕೆಲಸ ತೆಗೆದುಕೊಳ್ಳಿ ಎಂಬುದೇ ನಮ್ಮ ಧ್ಯೇಯವಾಗಿದೆ ಎಂದರು.
ಚುನಾವಣಾ ಪ್ರಣಾಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪೇಂದ್ರ, ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ ನಿಂದ ಪ್ರಣಾಳಿಕೆ ನೋಂದಣಿ ಆಗುವುದಾದಲ್ಲೀ ಮಾತ್ರ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ. ಇಲ್ಲವಾದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಪಪಡಿಸಿದರು
ಪ್ರಣಾಳಿಕೆಯಲ್ಲಿ ನಮಗೆ ನಂಬಿಕೆ ಇಲ್ಲ. ಯಾವಾಗ ನ್ಯಾಯಾಲಯದ ಮುಂದೆ ಪ್ರಣಾಳಿಕೆ ಇಟ್ಟು ಅದನ್ನು ಈಡೇರಿಸದವರು ರಾಜೀನಾಮೆ ನೀಡುವ ವ್ಯವಸ್ಥೆ ಬಂದಲ್ಲಿ ಮಾತ್ರ ಪ್ರಣಾಳಿಕೆ ರೂಪಿಸುತ್ತೇನೆ. ಜನ ಸಾಮಾನ್ಯರ ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲ ನಮ್ಮದು ಎಂದು ಉಪೇಂದ್ರ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos