ಎಚ್ ಡಿ ಕುಮಾರಸ್ವಾಮಿ 
ಕರ್ನಾಟಕ

ಮೋದಿ ಮಹಾನ್ ಸುಳ್ಳುಗಾರ, ಬಣ್ಣದ ಮಾತಿಗೆ ಮರುಳಾಗಬೇಡಿ: ಸಿಎಂ ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಸುಳ್ಳುಗಾರ. ಅವರ ಬಣ್ಣದ ಮಾತಿಗೆ ಮರುಳಾಗಬೇಡಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ...

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಸುಳ್ಳುಗಾರ. ಅವರ ಬಣ್ಣದ ಮಾತಿಗೆ ಮರುಳಾಗಬೇಡಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಕರೆ ನೀಡಿದ್ದಾರೆ.
ಇಂದು ನೆಲಮಂಗಲದಲ್ಲಿ ನಡೆದ ಬೃಹತ್ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಮೋದಿ ಕಳೆದ ಐದು ವರ್ಷಗಳಿಂದ ಏನೂ ಮಾಡಿಲ್ಲ. ಅವರು ಒಬ್ಬ ಮಾಹನ್ ಸುಳ್ಳುಗಾರ. ಹಲವಾರು ಭರವಸೆ ನೀಡಿ, ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ. ಯಾವುದೇ ಭರವಸೆ ಈಡೇರಿಸಿಲ್ಲ ಎಂದರು.
ಪಕ್ಕದ ತಮಿಳುನಾಡಿನಿಂದ ರೈತರು ದೆಹಲಿಗೆ ತೆರಳಿ, ಅರೆ ಬೆತ್ತಲೆ ಮೆರವಣಿಗೆ ಮಾಡಿದಾಗ ಕಷ್ಟ ಕೇಳಲಿಲ್ಲ. ಆದರೆ ಕಿಸಾನ್ ಸಮ್ಮಾನ್ ಯೋಜನೆ ಅಂತ ಜಾರಿಗೆ ತಂದು ವರ್ಷಕ್ಕೆ ಆರು ಸಾವಿರ ರುಪಾಯಿ ನೀಡುವ ಕಾರ್ಯಕ್ರಮ ಜಾರಿಗೆ ತಂದರು. ಈ ಯೋಜನೆಗೆ ಕರ್ನಾಟಕದಿಂದ 10 ಲಕ್ಷ  ರೈತರ ಪಟ್ಟಿ ಕಳುಹಿಸಲಾಗಿತ್ತು. ಆದರೆ ಹದಿನೇಳು ಕುಟುಂಬಕ್ಕೆ ಮಾತ್ರ ಕಿಸಾನ್ ಸಮ್ಮಾನ್ ಯೋಜನೆ ಹಣ ಸಿಕ್ಕಿದೆ ಎಂದರು.
ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಮೋದಿ ಸುಳ್ಳು ಹೇಳಿದರು. ಆದರೆ ಹದಿನೈದು ಲಕ್ಷ ಕುಟುಂಬಗಳ ಸಾಲ ಮನ್ನಾ ಆಗಿದೆ ಎಂದು ಕುಮಾರಸ್ವಾಮಿ ಮೋದಿಗೆ ತಿರುಗೇಟು ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

ಲೋಕಸಭಾ ಸ್ಥಾನಗಳ ಹೆಚ್ಚಳ ಪ್ರಸ್ತಾವನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ, ‘ದಿಕ್ಕು ತಪ್ಪಿಸುವ ಅಸ್ತ್ರ’; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

SCROLL FOR NEXT