ಎಚ್.ಡಿ ಕುಮಾರಸ್ವಾಮಿ 
ಕರ್ನಾಟಕ

ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಪ್ರಚಾರ ಮಾಡಿದ್ದರೆ, 25 ಸೀಟು ಗೆಲ್ಲಬಹುದಿತ್ತು: ಕುಮಾರಸ್ವಾಮಿ

ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಕೇವಲ ಇನ್ನೂ ಒಂದು ವಾರ ಮಾತ್ರ ಬಾಕಿಯಿದೆ, ಈ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ...

ಬೆಂಗಳೂರು: ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಕೇವಲ ಇನ್ನೂ ಒಂದು ವಾರ ಮಾತ್ರ ಬಾಕಿಯಿದೆ, ಈ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಪಕ್ಷಗಳು 16-18 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಪ್ರ: ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಿಮ್ಮ ಲೆಕ್ಕಾಚಾರವೇನು?
ಕರ್ನಾಟಕದಲ್ಲಿ ನಾವು 16-018 ಸೀಟುಗಳನ್ನು ಗೆಲ್ಲುತ್ತೇವೆ, ಒಂದು ವೇಳೆ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳ ನಾಯಕರು ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಿಗೆ ಪ್ರಚಾರ ನಡೆಸಿದ್ದರೇ 25 ಸೀಟು ಗೆಲ್ಲಬಹುದಿತ್ತು.  ಆದರೆ ಅದು ಸಾಧ್ಯವಾಗಲಿಲ್ಲ, ಜೆಡಿಎಸ್ ಸ್ಪರ್ಧಿಸಿರುವ 7 ಕ್ಷೇತ್ರಗಳ ಪೈಕಿ 5 ರಲ್ಲಿ ಗೆಲುವು ಸಾಧಿಸುತ್ತದೆ. ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ಜೆಡಿಎಸ್ ಗೆಲುವು ಖಚಿತ.
ಪ್ರ: ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಉಪ ಚುನಾವಣೆ  ಬಗ್ಗೆ ನಿಮ್ಮ ಅಭಿಪ್ರಾಯ?
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ಮೇ 23 ರ ನಂತರ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ನಿಂದ ಬಿಜೆಪಿ ಕಡೆಗೆ ತಮ್ಮ ನಿಷ್ಠೆಯನ್ನು ಬದಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕರಿಗೆ ಅನ್ನಿಸಿದ್ದರೇ ಬಹಳ ಹಿಂದೆಯೇ ಈ ಬೆಳವಣಿಗೆಯಾಗುತ್ತಿತ್ತು.ಲೋಕಸಭೆ ಚುನಾವಣೆ ವರೆಗೂ ಯಾಕೆ ಕಾಯಬೇಕಿತ್ತು. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವ ಮೂಲಕ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ, ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಬಿಜೆಪಿ ಇದೇ ಬೆದರಿಕೆ ಒಡ್ಡುತ್ತಿದೆ.
ಪ್ರ: ಕಾಂಗ್ರೆಸ್ ನ ಕೆಲವು ನಾಯಕರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರಲ್ಲ?
ಈ ಸಂಬಂಧ ಈಗಾಗಲೇ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ,2023ರ ವರೆಗೆ ನಾನೇ ಸಿಎಂ ಆಗಿರುತ್ತೇನೆ,  ಅದಾದ ನಂತರ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಿಎಂ ಆದರೇ ತಪ್ಪೇನು? 
ಪ್ರ: ಸಿದ್ದರಾಮಯ್ಯ ವಿರುದ್ದ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹರಿಹಾಯುತ್ತಿದ್ದಾರಲ್ಲ?
ಎರಡು ಪಕ್ಷದ ಎಲ್ಲಾ ನಾಯಕರುಗಳು ಮೈತ್ರಿ ಧರಮ್ ಪಾಲಿಸಬೇಕಾದ ಅಗತ್ಯತೆ ಇದೆ,ವಿಶ್ವನಾಥ್ ಅವರ ಬಳಿ ಮಾತನಾಡಿ ವಿವಾದಾತ್ಮಕ ಹೇಳಿಕೆ ನೀಡದಂತೆ ಮನವಿ ಮಾಡಿದ್ದೇನೆ, ವಿಶ್ವನಾಥ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸದಂತೆ ಮನವಿ ಮಾಡಿದ್ದೇನೆ.
ಪ್ರ: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸಿಎಂ ರೆಸಾರ್ಟ್ ನಲ್ಲಿ ಕಾಲಕಳೆಯುತ್ತಿದ್ದಾರೆ ಎಂದು ಬಿಜೆಪಿ ಆಕೋಪವಿದೆಯಲ್ಲ?
ಅವರಿಗೆ ಮಾಡಲು ಬೇರೆ ಕೆಲಸವಿಲ್ಲ, ಹೀಗಾಗಿ ಅಂತಙ ಕಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ, ರೆಸಾರ್ಟ್ ನಲ್ಲಿ ನಾನು ಎಷ್ಟು ದಿನವಿದ್ದೇ?ನನಗೂ ವಿಶ್ರಾಂತಿ ಬೇಕು. ಹೀಗಾಗಿ ಒಂದು ದಿನ ಮಾತ್ರ ಇದ್ದೆ.
ಪ್ರ: ಮಾಧ್ಯಮಗಳ ಮೇಲೆ ನಿಮಗೆ ಅಸಮಾಧಾನ ಏಕೆ?
ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ, ಹಲವು ಕಾರಣಗಳಿಗಾಗಿ ಮಾಧ್ಯಮಗಳು ನನಗೆ ಮುಜುಗರ ಉಂಟು ಮಾಡಲು ಯತ್ನಿಸುತ್ತಿವೆ, ಹಿಗಾಗಿ ಅವರ ಜೊತೆ ಮಾತನಾಡದಿರಲು ನಾನು ನಿರ್ಧರಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು