ಅನಂತ್ ಕುಮಾರ್ ಹೆಗಡೆ, ತೇಜಸ್ವಿ ಸೂರ್ಯ 
ಕರ್ನಾಟಕ

ಕರ್ನಾಟಕದಲ್ಲಿ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಅನಂತ್ ಕುಮಾರ್ ಹೆಗಡೆ, ತೇಜಸ್ವಿ ಸೂರ್ಯ!

ಕಟ್ಟಾ ಹಿಂದುತ್ವವಾದ ಮತ್ತು ವಿವಾದಿತ ಬೆಂಕಿ ಚೆಂಡಿನಂತಹ ಹೇಳಿಕೆಗಳಿಂದ ಸದಾ ...

ಕಾರವಾರ/ಬೆಂಗಳೂರು: ಕಟ್ಟಾ ಹಿಂದುತ್ವವಾದ ಮತ್ತು ಬೆಂಕಿ ಚೆಂಡಿನಂತಹ ವಿವಾದಿತ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ಈ ಬಾರಿಯ ಸಂಸತ್ತು ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ವಿರುದ್ಧ ಅನಂತ್ ಕುಮಾರ್ ಹೆಗಡೆ 4 ಲಕ್ಷದ 79 ಸಾವಿರದ 649 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರಿಗೆ 7 ಲಕ್ಷದ 86 ಸಾವಿರದ 042 ಮತಗಳು ಬಂದಿದ್ದು ಆಸ್ನೋಟಿಕರ್ ಪಡೆದಿದ್ದು 3 ಲಕ್ಷದ 06 ಸಾವಿರದ 393 ಮತಗಳು. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆ ಆಯ್ಕೆಯಾಗುತ್ತಿರುವುದು ಆರನೇ ಬಾರಿ.
ಮೊದಲ ಮತ ಎಣಿಕೆ ಸುತ್ತಿನಲ್ಲಿಯೇ, ಅನಂತ್ ಕುಮಾರ್ ಹೆಗಡೆ ಮುಂಚೂಣಿಯಲ್ಲಿದ್ದರು. ಕಳೆದ ತಿಂಗಳು ಮತದಾನಕ್ಕೆ ಮುನ್ನ ಅನಂತ್ ಕುಮಾರ್ ಹೆಗಡೆ ಮತ್ತು ಇತರ ಬಿಜೆಪಿ ನಾಯಕರೇ ಅವರ ಬಗ್ಗೆ ಎರಡು ಲಕ್ಷದ ಮತಗಳ ಅಂತರದಲ್ಲಿ ಗೆಲ್ಲಬಹುದು ಎಂದುಕೊಂಡಿದ್ದವರಿಗೆ  ನಿನ್ನೆಯ ಫಲಿತಾಂಶ ಹೊರಬಿದ್ದ ನಂತರ ನಿಜಕ್ಕೂ ಅಚ್ಚರಿಯಾಗಿತ್ತು.
ಅನಂತ್ ಕುಮಾರ್ ಹೆಗಡೆ ಗೆಲ್ಲುವ ವಿಶ್ವಾಸವಿತ್ತು. ಮೋದಿ ಹೆಸರು ಕೂಡ ಕಾರಣವಾಯಿತು. ಹಲವು ಕಾಂಗ್ರೆಸ್ ಬೆಂಬಲಿಗರು ಹೆಗಡೆಯವರಿಗೇ ಈ ಬಾರಿ ಮತ ಹಾಕಿದ್ದಾರೆ. ತಮ್ಮ ಇಷ್ಟದ ಅಭ್ಯರ್ಥಿಯನ್ನು ಕಾಂಗ್ರೆಸ್ ನಿಂದ ಕಣಕ್ಕಿಳಿಸಲಿಲ್ಲ ಎಂಬ ಸಿಟ್ಟು ಅವರಲ್ಲಿತ್ತು. ಉತ್ತರ ಕನ್ನಡದಲ್ಲಿ ಜೆಡಿಎಸ್ ಅಸ್ಥಿತ್ವವನ್ನೇ ಹೊಂದಿಲ್ಲ, ಇದು ಅನಂತ್ ಕುಮಾರ್ ಗೆ ವರವೇ ಆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಜನಸಂಖ್ಯಾ ಬದಲಾವಣೆ ಪರಿಶೀಲಿಸಲು ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ಕನ್ನ! ಚಿನ್ನದ ಗಟ್ಟಿ, ಆಭರಣಗಳನ್ನು ಕದ್ದ 9 ಕಾರ್ಮಿಕರ ಬಂಧನ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

SCROLL FOR NEXT