ಕ್ಷೇತ್ರಗಳು

ಗುಮ್ಮಟವ ಏರಲು ಅಭ್ಯರ್ಥಿಗಳ ತವಕ

ವಿಶ್ವವಿಖ್ಯಾತ ಗೋಳಗುಮ್ಮಟವಿರುವ ಬಿಜಾಪುರದಲ್ಲಿ ಬಿಸಿಲಿನ ಬೇಗೆಯ...

ವಿಶ್ವವಿಖ್ಯಾತ ಗೋಳಗುಮ್ಮಟವಿರುವ ಬಿಜಾಪುರದಲ್ಲಿ ಬಿಸಿಲಿನ ಬೇಗೆಯ ಜೊತೆಗೆ ಚುನಾವಣೆ ಕಾವು ವಿಪರೀತವಾಗಿದೆ. ಪ್ರಮುಖ ಪಕ್ಷಗಳ ನಾಯಕರು ಮತ ಬೇಟೆಯಲ್ಲಿ ನಿರತರಾಗಿದ್ದಾರೆ. ಬಿಜೆಪಿಯಿಂದ ರಮೇಶ್ ಜಿಗಜಿಣಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಾಶ್ ರಾಠೋಡ, ಇನ್ನು ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯಲ್ಲಿಲ್ಲ ಎಂದು ಜೆಡಿಎಸ್‌ನಿಂದ ಟೆಕೆಟ್ ಪಡೆದು ಶಿವರಾಮ ಸ್ಪರ್ಧೆಗಿಳಿದಿದ್ದಾರೆ.

-    ಈ ಚುನಾವಣೆಯಲ್ಲಿ ಮೋದಿ ಅಲೆ ನಿಮಗೆ ಎಷ್ಟರ ಮಟ್ಟಿಗೆ ನೆರವಾಗಬಲ್ಲದು?
    ಬಿಜಾಪುರ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ನಾವು ಚುನಾವಣೆ ಪ್ರಚಾರಕ್ಕೆ ಹೋದಲ್ಲೆಲ್ಲಾ ಜನ ಸಾಮಾನ್ಯರಲ್ಲಿ ಮೋದಿ ಅಲೆ ಸಾಕಷ್ಟಿದೆ ಎಂಬ ಅರಿವು ಬಂದಿದೆ. ಜನರು ಮೋದಿ ಮೋಡಿಗೆ ಒಳಗಾಗಿದ್ದಾರೆ. ಹೀಗಾಗಿ ಮೋದಿ ಅಲೆ ತಮ್ಮ ಗೆಲುವಿಗೆ ನೂರಕ್ಕೆ ನೂರರಷ್ಟು ನೆರವಾಗಲಿದೆ.
-    ಈ ಚುನಾವಣೆಯಲ್ಲಿ ನಿಮ್ಮ ಪ್ರತಿಸ್ಪರ್ಧಿ ಯಾರು?
    ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಇದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ರಾಠೋಡ ತಮಗೆ ಪ್ರತಿಸ್ಪರ್ಧಿಯಾಗಿದ್ದಾರೆ. ಜೆಡಿಎಸ್ ಯಾವ ಲೆಕ್ಕಕ್ಕೂ ಇಲ್ಲ. ಜೆಡಿಎಸ್ ಅಭ್ಯರ್ಥಿಯಾಗಿ ಕೆ. ಶಿವರಾಂ ಕಣಕ್ಕಿಳಿದಿರುವುದು ತಮ್ಮ ಗೆಲುವಿಗೆ ಯಾವುದೇ ರೀತಿ ಹಿನ್ನಡೆಯನ್ನುಂಟು ಮಾಡದು.
-    ನಿಮ್ಮ ಚುನಾವಣೆಯ ವಿಷಯಗಳು ಯಾವವು?
    ಸಮಗ್ರ ನೀರಾವರಿ, ವಿದ್ಯುತ್, ಹೊಸ ರೈಲು ಮಾರ್ಗ, ರಸ್ತೆ, ವಿಶ್ವ ವಿಖ್ಯಾತ ಗೋಳಗುಮ್ಮಟವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದು, ಬಿಜಾಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವುದು ಇವೇ ಮುಂತಾದ ವಿಷಯಗಳನ್ನು ಆಧರಿಸಿ ನಾನು ಮತ ಕೇಳುತ್ತಿದ್ದೇನೆ.
-    ಜನ ಬಿಜೆಪಿಗೇ ಯಾಕೆ ಮತ ನೀಡಬೇಕು?
    ದೇಶ ಈಗ ಗಂಡಾಂತರದಲ್ಲಿದೆ. ಚೀನಾ, ಪಾಕಿಸ್ತಾನಿಯರು ಸುಮಾರು 19 ಕಿ.ಮೀ. ನಮ್ಮ ದೇಶದ ನೆಲ ಅತಿಕ್ರಮಣ ಮಾಡಿದ್ದಾರೆ. ಹಾಗೇ ಬಿಟ್ಟರೆ ಭಾರತ ದೇಶ ಸಂಪೂರ್ಣ ಹಾಳಾಗುತ್ತದೆ. ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಸಲುವಾಗಿ ಜಾತಿ ವಿಷ ಬೀಜ ಬಿತ್ತಿ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಇದನ್ನು ತಡೆಯಲು ದೇಶಕ್ಕೆ ಒಬ್ಬ ಸಮರ್ಥ ಪ್ರಧಾನಿ ಬೇಕು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಳಿ ಸಮರ್ಥ ನಾಯಕತ್ವ ಗುಣವಿದೆ.  
-    ಕಾಕಾ, ಮಾಮಾ ಪದ ಬಳಕೆಗೆ ಪ್ರತಿಪಕ್ಷದ ಟೀಕೆಗೆ ನಿಮ್ಮ ಉತ್ತರವೇನು?
    ಕಾಕಾ, ಮಾಮಾ ಅದು ಚುನಾವಣೆಯಲ್ಲಿ ಮತ ಗಳಿಸುವ ಅಸ್ತ್ರವಲ್ಲ. ಅದು ಬಸವ ನಾಡಿನ ಸಂಸ್ಕಾರ. ಈ ಸಂಸ್ಕಾರ ಜನ್ಮತಃ ಬರುವಂತಹದ್ದು. ಮನುಷ್ಯ ಸಂಘ ಜೀವಿ, ಸಮಾಜ ಜೀವಿ. ಇಂಥ ಭಾವನಾತ್ಮಕ ಸಂಬಂಧ ಇರುವುದು ಸಹಜ. ಪ್ರತಿಪಕ್ಷ ಕಾಂಗ್ರೆಸ್ಸಿನವರಿಗೆ ಸಂಸ್ಕಾರ ಗೊತ್ತಿಲ್ಲ. ಬಸವ ನಾಡಿನ ಸಂಸ್ಕೃತಿ ಅರಿಯದವರಿಂದ ನಾನು ಸಂಸ್ಕಾರ ಕಲಿಯಬೇಕಿಲ್ಲ. ಬೇಕಿದ್ದರೆ ತಾವೂ ಕಾಕಾ, ಮಾಮಾ ಪದಗಳನ್ನು ಬಳಸಿದರೆ ತಮ್ಮ ಅಭ್ಯಂತರವೇನಿಲ್ಲ.

ಕಾಂಗ್ರೆಸ್ 55 ವರ್ಷದಲ್ಲಿ ಬಿಜಾಪುರದಲ್ಲಿ ಮಹಿಳಾ ವಿವಿ ಬಿಟ್ಟರೆ ಏನ್ನನ್ನೂ ಮಾಡಿಲ್ಲ. ವೋಟ್ ಬ್ಯಾಂಕ್ ಸಲುವಾಗಿ ಜಾತಿ ವಿಷ ಬೀಜ ಬಿತ್ತಿ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಇದನ್ನು ತಡೆಯಲು ದೇಶಕ್ಕೆ ಒಬ್ಬ ಸಮರ್ಥ ಪ್ರಧಾನಿ ಬೇಕು.
- ರಮೇಶ ಜಿಗಜಿಣಗಿ

---
-    ಮೋದಿ ಅಲೆಯಿಂದ ನಿಮಗೆ ಸೋಲಿನ ಭೀತಿ ಕಾಡುತ್ತಿದೆಯೆ?
    ನಾನು ಕಳೆದ ಎರಡು ಬಾರಿ ಲೋಕಸಭೆ ಚುನಾವಣೆಗೆ ಸ್ಫರ್ಧಿಸಿ ಸೋತಿದ್ದೇನೆ. ಹಿಂದಿನ ಸೋಲಿನಿಂದ ಧೃತಿಗೆಟ್ಟಿಲ್ಲ. ಈ ಸಲ ಜನ ಖಂಡಿತವಾಗಿಯೂ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಬಿಜಾಪುರ ಲೋಕಸಭೆ ಕ್ಷೇತ್ರದಲ್ಲಿ ಎಲ್ಲೂ ಮೋದಿ ಅಲೆ ಇಲ್ಲ. ಅ ು ಬರೀ ಬಿಜೆಪಿ ಪುಕಾರ್ ಅಷ್ಟೆ. ಎಲ್ಲೆಡೆ ಕಾಂಗ್ರೆಸ್ ಗಾಳಿ ಇದೆ. ಕಾಂಗ್ರೆಸ್ ಅಲೆ ಮುಂದೆ ಮೋದಿ ಅಲೆ ನಿಲ್ಲುವುದಿಲ್ಲ.
-    ನಿಮ್ಮ ಎದುರಾಳಿ ಯಾರು ?
    ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನನ್ನ ಎದುರಾಳಿ ಈ ಚುನಾವಣೆಯಲ್ಲಿ ನಿಜವಾದ ಫೈಟ್ ಕಾಂಗ್ರೆಸ್, ಬಿಜೆಪಿ ಮಧ್ಯೆ. ಜೆಡಿಎಸ್ ಅಭ್ಯರ್ಥಿ ಚಿತ್ರನಟ ಶಿವರಾಮ ಹೊರಗಿನವರು. ಹಾಗಾಗಿ ಜನರು ತಮ್ಮ ಕೆಲಸ ಕಾರ್ಯಗಳಿಗೆ ಶಿವರಾಮ ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಲು ಆಗುವುದಿಲ್ಲ. ನಾನು ಬೆಂಗಳೂರಿನಲ್ಲಿ ವಾಸ ಮಾಡುವುದನ್ನು ನಿಲ್ಲಿಸಿದ್ದೇನೆ. ಈಗ ಕಾಯಂ ಆಗಿ ಬಿಜಾಪುರದಲ್ಲಿಯೇ ವಾಸ ಮಾಡುತ್ತಿದ್ದೇನೆ. ನಾನು ಆಯ್ಕೆಯಾದರೂ ಇಲ್ಲಿಯೇ ಇರುತ್ತೇನೆ.
-    ನಿಮ್ಮ ಚುನಾವಣೆ ವಿಷಯ ಯಾವುದು?
    ಬಿಜಾಪುರದಲ್ಲಿ ವಿಶ್ವವಿಖ್ಯಾತ ಐತಿಹಾಸಿಕ ಗೋಳಗುಮ್ಮಟವಿದೆ. ಇದನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದು. ಬಿಜಾಪುರ ಜಿಲ್ಲೆ ಕಂದಾಯ ಉಪವಿಭಾಗದಲ್ಲಿ ಬೆಳಗಾವಿ ವಿಭಾಗದಲ್ಲಿದ್ದರೂ ಹೈಕೋರ್ಟ್ ಪೀಠ ಗುಲ್ಬರ್ಗ ವ್ಯಾಪ್ತಿಯಲ್ಲಿದೆ. ರಸ್ತೆ ಸಾರಿಗೆ ಸಂಸ್ಥೆ ಗುಲ್ಬರ್ಗದ ಈಶಾನ್ಯ ವಲಯದಲ್ಲಿಯೇ ಬರುತ್ತದೆ. ಆದರೂ ಬಿಜಾಪುರ ಜಿಲ್ಲೆಯನ್ನು 371 ಕಲಂ ಅಡಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿಸದೆ ಅನ್ಯಾಯ ಮಾಡಲಾಗಿದೆ. ಇದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತೇನೆ.
-    ಕಾಂಗ್ರೆಸ್ಸಿಗೇ ಜನ ಮತ ಏಕೆ ನೀಡಬೇಕು?
    ಕಳೆದ 10 ವರ್ಷಗಳಿಂದ ಡಾ. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ದೇಶದಲ್ಲಿ ಸುಭದ್ರ ಸರ್ಕಾರ ನೀಡಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದೆ. ಇದಕ್ಕೂ ಮಿಗಿಲಾಗಿ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ ಗಾಂಧಿ ತ್ಯಾಗ, ಬಲಿದಾನ ಮಾಡಿದ್ದಾರೆ. ಹಾಗಾಗಿ ಜನರು ಕಾಂಗ್ರೆಸ್ಸಿಗೆ ಮತ ಚಲಾಯಿಸಬೇಕು.


ಕಾಂಗ್ರೆಸ್, ಬಿಜೆಪಿ ನಡುವೆಯೇ ನಿಜವಾದ ಫೈಟ್. ಇಲ್ಲಿ ಜೆಡಿಎಸ್ ಅಭ್ಯಥಿ ಶಿವರಾಮ ಹೊರಗಿವರು. ಕ್ಷೇತ್ರದ ಎಲ್ಲಿಯೂ ಮೋದಿ ಅಲೆ ಇಲ್ಲ. ಕಾಂಗ್ರೆಸ್ ಗಾಳಿ, ಅಭಿವೃದ್ಧಿಯ ಮಾತು ಕೇಳಿ ಬರುತ್ತಿದೆ. ಜನ ನನ್ನ ಕೈಹಿಡಿಯುತ್ತಾರೆ.
- ಪ್ರಕಾಶ ರಾಠೋಡ

---
-    ಚಿತ್ರದುರ್ಗದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಟಿಕೆಟ್ ಪಡೆದು ಬಿಜಾಪುರದಿಂದ ಸ್ಪರ್ಧಿಸುವುದು ಮಜುಗುರ ಎನಿಸುವುದಿಲ್ಲವೆ ?
    ಚಿತ್ರದುರ್ಗದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದೆ, ಅಲ್ಲಿ ಟಿಕೆಟ್ ಸಿಗಲಿಲ್ಲ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜಾಪುರ ಜೆಡಿಎಸ್ ಧುರೀಣ ವಿಜಯಕುಮಾರ ಪಾಟೀಲ ಅಲ್ಲದೆ ಬಿಜಾಪುರದ ನೂರಾರು ಮಂದಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ಆ ಕಾರಣಕ್ಕಾಗಿ ನಾನು ನಾಲ್ಕು ವರ್ಷ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಸಮಾಜ ಸೇವೆ ಮಾಡುವ ಇರಾದೆಯಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದೇನೆ. ಸಮಾಜ ಸೇವೆ ಮಾಡಲು ಪಕ್ಷ ಮುಖ್ಯವಲ್ಲ.
-    ನೀವು ಈ ಚುನಾವಣೆಯಲ್ಲಿ ಗೆಲ್ಲುತ್ತೀರಾ ?
    ನನಗೆ ರಾಜಕೀಯ ಹೊಸದು. ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಬಿಜಾಪುರದಿಂದ ಸ್ಪರ್ಧಿಸುತ್ತಿದ್ದೇನೆ. ಬಿಜಾಪುರ ಜನರ ಪ್ರೀತಿ, ವಿಶ್ವಾಸ ನನ್ನ ಮೇಲೆ ಬಹಳಷ್ಟಿದೆ. ಬಿಜಾಪುರದ ಜನರು ನನಗೆ ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ ಎಂಬ ಬಲವಾದ ನಂಬಿಕೆ ಇದೆ.
-    ಬಿಜಾಪುರದ ಜನ ನಿಮಗೇ ಏಕೆ ಮತ ನೀಡಬೇಕು ?
    ಬಿಜಾಪುರದಲ್ಲಿ ತಾನು ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಬಿಜಾಪುರದ ಬೀದಿಯ ಕಸಗೂಡಿಸಿದ್ದೇನೆ. ಬೀದಿ ದೀಪ ಹಾಕಿಸಿದ್ದೇನೆ. ದ್ವಿಪಥ ರಸ್ತೆ ಮಾಡಿಸಿದ್ದೇನೆ. ಬಿಜಾಪುರ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಬಿಜಾಪುರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಬಿಜಾಪುರದ ಜನರ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಬಿಜಾಪುರ ಜಿಲ್ಲೆ ತನಗೆ ತವರುಮನೆ ಇದ್ದಂತೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಜನರು ಮತ ಚಲಾಯಿಸಬೇಕು.
-    ನಿಮ್ಮ ಎದುರಾಳಿ ಯಾರು ?
    ಅದೆಲ್ಲಾ ನನಗೆ ಗೊತ್ತಿಲ್ಲ. ಬಿಜಾಪುರದ ಜನರು ನನ್ನ ಮೇಲೆ ಬಹಳ ಪ್ರೀತಿ ತೋರಿಸಿದ್ದಾರೆ. ಹಾಗಾಗಿ ತಾನು ಬಿಜಾಪುರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಎದುರಾಳಿ ಯಾರೆಂಬುವುದನ್ನು ಬಿಜಾಪುರದ ಜನರೇ ನಿರ್ಧರಿಸಲಿದ್ದಾರೆ. ಅದು ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ಎಲ್ಲರಿಗೂ ಗೊತ್ತಾಗುತ್ತದೆ.

ಸಮಾಜಸೇವೆ ಮಾಡಲು ಪಕ್ಷ ಮುಖ್ಯವಲ್ಲ, ಮನಸ್ಸು ಬೇಕು. ಸಮಾಜಸೇವೆ ಮಾಡುವ ಇರಾದೆಯಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದೇನೆ. ಚಿತ್ರದುರ್ಗದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದೆ. ಸಿಗಲಿಲ್ಲ. ನಾಲ್ಕು ವರ್ಷ ಸುಮ್ಮನಿರುವುದಕ್ಕಿಂತ ಬಿಜಾಪುರದಿಂದ ಸ್ಪರ್ಧಿಸುವುದೇ ಲೇಸೆಂದು ಕಣಕ್ಕಿಳಿದೆ.
- ಶಿವರಾಮ


ರುದ್ರಪ್ಪ ಅಸಂಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ