ಚೆನ್ನೈ: ತಮಿಳುನಾಡು ಮತ್ತು ಪುದುಚೇರಿಯ 3 ಲೋಕಸಭೆ ಸ್ಥಾನಗಳಲ್ಲಿ ಪಕ್ಷ ಗೆಲವು ಸಾಧಿಸಲು ವಿಫಲವಾದ ಹಿನ್ನೆಲೆಯಲ್ಲಿ ಎಐಎಡಿಎಂಕೆ ನಾಯಕಿ ಜಯಲಲಿತಾ ಮೂವರು ಸಚಿವರು, 6 ಮಂದಿ ಜಿಲ್ಲಾ ನಾಯಕರನ್ನು ವಜಾ ಮಾಡಿದ್ದಾರೆ. ಕಂದಾಯ, ಕೃಷಿ ಮತ್ತು ಕಾರ್ಮಿಕ ಸಚಿವರನ್ನು ವಜಾ ಮಾಡಿ, ಅವರ ಸ್ಥಾನಗಳಿಗೆ ಬೇರೆಯವರನ್ನು ನೇಮಕ ಮಾಡಲಿದ್ದಾರೆ. ಮಂಗಳವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಡಿಎಂಕೆ ಪಕ್ಷವು 40ರಲ್ಲಿ 37 ಸ್ಥಾನಗಳನ್ನು ಗೆದ್ದಿತ್ತು.