ಸ್ವಾರಸ್ಯ

ಗದ್ದುಗೆ ಗಾದೆಗಳು

    ಅಭ್ಯರ್ಥಿಗೆ ವರುಷ, ಮತದಾರನಿಗೆ ನಿಮಿಷ.
    ರಾಜಕಾರಣಿಗೆ ಹೋದ ಮಾನ ಮತ ಹಾಕಿದರೂ ಬಾರದು.
    ಹುಚ್ಚುಮುಂಡಿಗೆ ವೋಟು ಹಾಕೋಕ್ಕಿಂತ 'ನೋಟಾ' ಒತ್ತೋನೆ ಜಾಣ!
    ಗುಂಡಿ ಒತ್ತಲು ಬಾರದವ ಮತಯಂತ್ರ ಡೊಂಕೆಂದ.
    ಅಭಿವೃದ್ಧಿ ಒಕ್ಕಾಲು, ಬಡಾಯಿ ಮುಕ್ಕಾಲು.
    ಚಿಂತೆಯಿಲ್ಲದವನಿಗೆ ಸಮಾರಂಭದಲ್ಲೂ ನಿದ್ದೆ.
    ಜಾಣನಿಗೆ ಮಾತಿನ ಪೆಟ್ಟು, ಅಭ್ಯರ್ಥಿಗೆ ಮತದ ಪೆಟ್ಟು.
    ಅಭಿವೃದ್ಧಿಗೆ ಕರೀಬ್ಯಾಡ್ರಿ, ಮತ ಹಾಕೋದನ್ನ ಮರೀಬ್ಯಾಡ್ರಿ.
    ಎದೆ ಬಂದವನಿಗೆ ನೆಲ ಕಾಣಲ್ಲ, ಅಧಿಕಾರ ಸಿಕ್ಕೋನಿಗೆ ಜನರು ಕಾಣಲ್ಲ.
    ರಾಜಕಾರಣಿಗಳ ನೆಂಟಸ್ತನ, ಅಭಿವೃದ್ಧಿಗೆ ಬರ.
    ಇಲಿಯಾಗಿ ನೂರು ವರ್ಷ ಬಾಳೋದಕ್ಕಿಂತ ರಾಜಕಾರಣಿಯಾಗಿ ಮೂರು ವರ್ಷ ಬದುಕೋದು ಲೇಸು.
    ಉಪ್ಪಿಗಿಂತ ರುಚಿಯಿಲ್ಲ, ಭ್ರಷ್ಟರಿಲ್ಲದ ಪಕ್ಷವಿಲ್ಲ.
    ಮನೆ ಗೆದ್ದು ಮತದಾರರ ಗೆಲ್ಲು.
    ಮನ ಗೆಲ್ಲದವ ಮತ ಗೆಲ್ಲಲಾರ.
    ಮಾತಿಗಿಂತ ಮತದಾನ ಲೇಸು.
    ಹೇಳೋದು ಆಚಾರ, ಮಾಡೋದು ಅಪಪ್ರಚಾರ.
    ರಾಜಕಾರಣಿ ಪಕ್ಷದಲ್ಲಿದ್ದರೂ ಕೋಟಿ, ಬಿಟ್ಟರೂ ಕೋಟಿ.
    ಆಚಾರವೇ ರಾಜಕಾರಣ, ಅನಾಚಾರವೇ ಆಡಳಿತ.
    ಕೋಟಿ ವಿದ್ಯೆಗಳಲ್ಲಿ 'ವೋಟು' ವಿದ್ಯೆಯೇ ಮೇಲು.
    ಏನಾದರೂ ಆಗು, ಕೆಟ್ಟ ರಾಜಕಾರಣಿಯಾಗದಿರು.
-ಮಹೇಶ್ ಅರಳಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT