ಸ್ವಾರಸ್ಯ

ಮತಗಾನ

ಕಳೆದ ವಿಧಾನಸಭಾ ಚುನಾವಣೆ ಹೊತ್ತಿಗೆ ತೆರೆಗೆ ಬರಲು ಸಿದ್ಧವಾಗಿದ್ದ ಚಿತ್ರ 'ಎಲೆಕ್ಷನ್‌'. ಚಿತ್ರದ ಕಥೆ ಇದ್ದದ್ದೇ ಚುನಾವಣೆಯ ಹಾಗೂ ರಾಜಕೀಯ ಅಕ್ರಮಗಳ ಸುತ್ತ. ಮಾಲಾಶ್ರೀ ಚುನಾವಣಾ ಅಧಿಕಾರಿಯಾಗಿ ಭ್ರಷ್ಟರ ಬೆಂಡೆತ್ತುವ ಈ ಚಿತ್ರ ಬೇಕೆಂದೇ ಎಲೆಕ್ಷನ್ ಸಮಯಕ್ಕೆ ಬಿಡುಗಡೆಗೆ ಪ್ರಯತ್ನಿಸಿತು. ಆದರೆ ಚಿತ್ರದಲ್ಲಿ ಪ್ರಸ್ತುತ ರಾಜಕಾರಣದ ಹಲವು ವಿಷಯಗಳು ಇದ್ದದ್ದು. ಹಲವು ಭ್ರಷ್ಟ ರಾಜಕಾರಣಿಗಳ ರಾಜಕೀಯ ಜೀವನದ  ಪರೋಕ್ಷ ಚಿತ್ರಣವಿದ್ದದ್ದು, ಇಂದಿನ ಕೆಲವು ರಾಜಕಾರಣಿಗಳ ತದ್ರೂಪುಗಳು ಚಿತ್ರದಲ್ಲಿ ನಟಿಸಿದ್ದು ಚಿತ್ರದ ಬಿಡುಗಡೆಯ ಮೇಲೆ ಪರಿಣಾಮ ಬೀರಿತು. ಎಲೆಕ್ಷನ್‌ಗೆ ಮುನ್ನ ರಿಲೀಸಾಗಲು ಸಾಧ್ಯವಾಗಲೇ ಇಲ್ಲ. ನಂತರವೂ  ಸೆನ್ಸಾರ್‌ನಿಂದ ತೊಂದರೆ ಅನುಭವಿಸಿ ಹಲವು ದೃಶ್ಯಗಳಿಗೆ ಕತ್ತರಿ ಸೂಚಿಸಲಾಯ್ತು. ಆದರೆ ರಾಜಕೀಯ ಒತ್ತಡಗಳನ್ನು ಮೆಟ್ಟಿ ನಿಂತು ಯಾವುದೇ ಕಟ್‌ಗಳಿಲ್ಲದೆ ಚಿತ್ರ ಬಿಡುಗಡೆ ಆಯ್ತು. ಎಲೆಕ್ಷನ್ ಬಿಸಿ ಆರಿದ ಮೇಲೆ ಬಿಡುಗಡೆಯಾದ ಕಾರಣಕ್ಕೆ ಒಳ್ಳೆ ಚಿತ್ರ ಎಂಬ ವಿಮರ್ಶೆ ಪಡೆದ ಹೊರತಾಗಿಯೂ ಜನರನ್ನು ತಲುಪುವ ಮೊದಲೇ ಮರೆಯಾಯ್ತು. ಓಂಪ್ರಕಾಶ್ ನಿರ್ದೇಶನದ ಹಂಸಲೇಖ ಸಂಗೀತ-ಸಾಹಿತ್ಯದ ಎಲೆಕ್ಷನ್ ಚಿತ್ರದ ಈ ಹಾಡು ಮತ್ತೊಂದು ಚುನಾವಣಾ ವಿಡಂಬನಾ ಗೀತೆ.
 
ಒತ್ರೋ ಒತ್ರೋ.....ಒತ್ರೋ ಒತ್ರೋ
ಒತ್ರೋ ವೋಟಾ ಒತ್ರೋ ವೋಟಾ
ಒಂದ್ ಸಿಂಬಲ್ ನೋಡ್ಕೊಂಡೂ
ಹೇ ಎತ್ರೋ ಪೋಟಾ
ನನ್ ಪಾರ್ಟಿ ಸೇರ್ಕೊಂಡೂ
ಕನಸನ್ ಕಟ್ಕೊಳ್ರೀ ನನ್ ಪಟ್ಟಾಗ್ ಹಿಡ್ಕೊಳ್ರೀ
ಕೊಡೋದು ಕೊಟ್ಬಿಟ್ಟೂ ನಿಮ್ಕೆಲ್ಸಾ ಮಾಡ್ಸ್‌ಕೊಳ್ರೀ
ಹೇ ಚುನ್ ಚುನ್ ಚುನ್
ಚುನ್ ಚುನ್ ಚುನ್
ಚುನಾವಣೆ ಹತ್ರ ಬಂತು ...
ಒತ್ರೋ ಒತ್ರೋ ಒತ್ರೋ ಗೊಬ್ಬರಾ
ಒತ್ರೋ ಒತ್ರೋ ಬೀಜಾ
ಒತ್ರೋ ಒತ್ರೋ ಅಕ್ಕಿ
ಒತ್ರೋ ಒತ್ರೋ ಎಣ್ಣೆ
ಒತ್ರೋ ಒತ್ರೋ ಟೀವೀ
ಒತ್ರೋ ಒತ್ರೋ ಸೀರೆ
ಒತ್ರೋ ಒತ್ರೋ ಬಾಟ್ಲೀ
ಒತ್ರೋ ಒತ್ರೋ ನೋಟು
ಗಾಳಿ ಬಂತಾ ತೂರಿಕೋ ಜಾಬ್ ಸಿಕ್ತಾ ಕಿತ್ತುಕೋ
ಕಸಿವುದೇ ಈ ಕಲಿಯುಗಾ ಬರೆದುಕೋ
ಮಗಾ ಲಾಡೂ...ಒಳಗೆ ಉಂಗ್ರಾ ವೀಳ್ಯಾ..
ಒಳಗೆ ಓಲೆ ನಾನೇ ಪಾರ್ಟಿ ಮುಖಪುಟ
ಆಡ್ತೀನ್ ಮಾತ ಪಟಪಟಾ
ಒತ್ರೋ ಓಟಾ ಒಂದ್ ಸಿಂಬಲ್ ನೋಡ್ಕೊಂಡು
ಹೇ ಎತ್ರೋ ಪೋಟಾ ನನ್ ಪಾರ್ಟಿ ಸೇರ್ಕೊಂಡೂ
ವೋಟ್ ಫಾರ್....ನನಗೇ
ವೋಟ್ ಫಾರ್ ರಸಿಕಗೇ
ಸಂಜೆ ಬರ್ರಿ ಭೇಟಿಗೇ
ಮುತ್ತುಕೊಳ್ರೀ ಒಟ್ಟಿಗೇ
ರಾಜಕೀಯ ನಾಟಕ ಉಲ್ಟಾಪಲ್ಟಾ ಜಾತಕಾ
ಚಪ್ಪಲೀ..ಸೈಕಲ್ ವಾಚೂ...ಚೈನೂ
ನಾನೇ ಪಾರ್ಟಿ ಮುಖಪುಟ
ಆಡ್ತೀನ್ ಮಾತ ಪಟಪಟಾ
ಒತ್ರೋ ಓಟಾ ಒಂದ್
ಸಿಂಬಲ್ ನೋಡ್ಕೊಂಡು
ಹೇ ಎತ್ರೋ ಪೋಟಾ ನನ್ ಪಾರ್ಟಿ ಸೇರ್ಕೊಂಡೂ
ಕನಸನ್ ಕಟ್ಕೊಳ್ರೀ
ನನ್ ಪಟ್ಟಾಗ್ ಹಿಡ್ಕೊಳ್ರೀ
ಕೊಡೋದು ಕೊಟ್‌ಬಿಟ್ಟೂ
ನಿಮ್ಕೆಲ್ಸಾ ಮಾಡ್ಸ್‌ಕೊಳ್ರೀ
ಹೇ ಚುನ್ ಚುನ್ ಚುನ್
ಚುನ್ ಚುನ್ ಚುನ್
ಚುನಾವಣೆ ಹತ್ರ ಬಂತು
...ಒತ್ರೋ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT