ಮೊದಲ ಯಶಸ್ವೀ ಹೌಸ್‍ಫುಲ್ ಪ್ರದರ್ಶನದ ಬೆನ್ನಲ್ಲೇ ರಂಗ ವರ್ತುಲ ರಂಗತಂಡ, ವಿಕಾಸ್ ನೇಗಿಲೋಣಿಯವರು ರಚಿಸಿ, ನಿತೀಶ್ ಶ್ರೀಧರ್ ಅವರು ನಿರ್ದೇಶಿಸಿರುವ “ವೇಷ” ನಾಟಕದ ಎರಡನೆಯ ಪ್ರದರ್ಶನವನ್ನು ಇದೇ ಜೂನ್ 12 ರಂದು ಸಂಜೆ 7:15ಕ್ಕೆ ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ ಆಯೋಜಿಸಿದೆ.
ಯಕ್ಷಗಾನದಲ್ಲಿ ಹೆಣ್ಣು ಪಾತ್ರಗಳನ್ನು ಗಂಡಸೇ ನಿರ್ವಹಿಸುತ್ತಾನೆ. ರಾತ್ರಿಯೆಲ್ಲಾ ರಂಗಸ್ಥಳದ ಮೇಲೆ ಸ್ತ್ರೀಯಾಗಿ ಕುಣಿಯುವ ವ್ಯಕ್ತಿ ಹಗಲು ಗಂಡಸಾಗಿದ್ದರೂ ಅವನ ಒಳಗೆ ತನ್ನ ಪುರುಷತ್ವದ ಬಗ್ಗೆ ತನ್ನದೇ ಆದ ಕಾಂಪ್ಲೆಕ್ಸ್‍ಗಳು ಇರುತ್ತವೆ. ಹೆಣ್ಣಾಗಿ ಬದಲಾಗುವ ಮೊದಲು ಮತ್ತು ಪಾತ್ರ ಕಳಚಿದ ಮೇಲೆ ಅವನನ್ನು ಕಾಡುವ ಪ್ರೀತಿ, ಕಾಮನೆ, ವೇದನೆಗಳ ಕತೆ- ವೇಷ.
ರಚನೆ : ವಿಕಾಸ್ ನೇಗಿಲೋಣಿ
ನಿರ್ದೇಶನ : ನಿತೀಶ್ ಶ್ರೀಧರ್
ದಿನಾಂಕ : ಜೂನ್ 12, 2015
ಸ್ಥಳ : ಕೆ.ಹೆಚ್.ಕಲಾಸೌಧ, ಹನುಮಂತನಗರ
ಸಮಯ : ಸಂಜೆ 7:15ಕ್ಕೆ
ಹೆಚ್ಚಿನ ವಿವರಗಳಿಗೆ : 9986828680