ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊರತಂದಿರುವ 'ಚಿತ್ರಪಥ' ಪುಸ್ತಕ, ಇದೇ ಜುಲೈ 4ರಂದು ಶನಿವಾರ, ಗಾಂಧೀ ಭವನ, ಕುಮಾರಕೃಪ ರಸ್ತೆ, ಬೆಂಗಳೂರು, ಇಲ್ಲಿ ಬಿಡುಗಡೆಯಾಗಲಿದೆ.
ಈ ಪುಸ್ತಕ ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಸ್ಥಿರ ಚಿತ್ರಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಪ್ರಗತಿ ಅಶ್ವತ್ಥ ನಾರಾಯಣ ಅವರ ನೆನಪು, ಫೋಟೊಗಳ ಸಂಕಲನ ಹಾಗು ಇದಕ್ಕೆ ಪತ್ರಕರ್ತ ಶಶಿಧರ ಚಿತ್ರದುರ್ಗ ಅವರ ನಿರೂಪಣೆ ಇದೆ.