ಸಂಗ್ರಹ ಚಿತ್ರ 
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ ನಿಂದ ಪೋರ್ಚುಗಲ್ ಔಟ್: ತಮ್ಮ ವಿಶ್ವಕಪ್ ಭವಿಷ್ಯದ ಕುರಿತು ರೊನಾಲ್ಡೋ ಹೇಳಿದ್ದೇನು?

ಪೋರ್ಚುಗಲ್ ನಕೌಟ್ ಹಂತದಲ್ಲೇ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದಿದ್ದು, ಇದೀಗ ತಂಡದ ನಾಯಕ ಮತ್ತು ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವಕಪ್ ಕನಸು ಭಗ್ನಗೊಂಡಿದೆ. ಅಷ್ಟು ಮಾತ್ರವಲ್ಲದೇ ರೊನಾಲ್ಡೋ ವಿಶ್ವಕಪ್ ಭವಿಷ್ಯದ ಮೇಲೂ ಶಂಕೆ ವ್ಯಕ್ತವಾಗುತ್ತಿದೆ.

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಪೋರ್ಚುಗಲ್ ನಕೌಟ್ ಹಂತದಲ್ಲೇ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದಿದ್ದು, ಇದೀಗ ತಂಡದ ನಾಯಕ ಮತ್ತು ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವಕಪ್ ಕನಸು ಭಗ್ನಗೊಂಡಿದೆ. ಅಷ್ಟು ಮಾತ್ರವಲ್ಲದೇ ರೊನಾಲ್ಡೋ ವಿಶ್ವಕಪ್ ಭವಿಷ್ಯದ ಮೇಲೂ ಶಂಕೆ ವ್ಯಕ್ತವಾಗುತ್ತಿದೆ.
ಉರುಗ್ವೆ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡ 2-1 ಅಂತರದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ತಂಡದ ಸ್ಟಾರ್ ಆಟಗಾರ ರೊನಾಲ್ಡೋ ಗೋಲು ಗಳಿಸದೇ ಇದ್ದದ್ದು ಪೋರ್ಚುಗಲ್ ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಇನ್ನು ತಂಡದ ನಾಯಕ ರೊನಾಲ್ಡೋ ಮುಂದಿನ ವಿಶ್ವಕಪ್ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಉದ್ಭವಾಗಿದ್ದು, ಮುಂದಿನ 2022ರ ವಿಶ್ವಕಪ್ ಟೂರ್ನಿ ಕತಾರ್ ನಲ್ಲಿ ನಡೆಯಲಿದೆ. ಆ ವೇಳೆ ರೊನಾಲ್ಡೋ 38ರ ಆಸುಪಾಸಿಗೆ ಜಾರಲಿದ್ದಾರೆ.
ಹೀಗಾಗಿ ಆ ವಯಸ್ಸಿನಲ್ಲಿ ರೊನಾಲ್ಡೋ ಫುಟ್ಬಾಲ್ ಆಡುವ ಸಾಮರ್ಥ್ಯದ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು. ಇದೇ ಕಾರಣಕ್ಕೆ ಇದು ರೊನಾಲ್ಡೋ ಪಾಲಿನ ಕೊನೆಯ ವಿಶ್ವಕಪ್ ಟೂರ್ನಿ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋರ್ಚುಗಲ್ ತಂಡದ ನಾಯಕ ರೊನಾಲ್ಡೋ, ಮುಂದಿನ ವಿಶ್ವಕಪ್ ಗೆ ಇನ್ನೂ ಸಾಕಷ್ಟು ಸಮಯವಿದೆ. ಆ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆದರೆ ವಿಶ್ವ ಫುಟ್ಬಾಲ್ ಕ್ಷೇತ್ರದಲ್ಲಿ ಪೋರ್ಚುಗಲ್ ತಂಡ ಖಂಡಿತಾ ಪ್ರಬಲ ತಂಡವಾಗಿ ಮುಂದುವರೆಯಲಿದೆ. ತಂಡದಲ್ಲಿ ಸಾಕಷ್ಟು ಯುವ ಪ್ರತಿಭೆಗಳಿದ್ದು ಭವಿಷ್ಯದ ದೃಷ್ಟಿಯಿಂದ ಅವರನ್ನು ತಂಡವನ್ನು ಮತ್ತಷ್ಟು ಬಲಿಷ್ಟ ಮಾಡಬೇಕಿದೆ ಎಂದು ರೊನಾಲ್ಡೋ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT