ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018 ಫೈನಲ್: ಇತಿಹಾಸದ ಹೊಸ್ತಿಲಲ್ಲಿ ಫ್ರಾನ್ಸ್ ಕೋಚ್ ಡೈಡಿಯರ್ ದೆಶ್ಚಾಂಪ್ಸ್‌

Srinivasamurthy VN
ಮಾಸ್ಕೋ: ಫೀಫಾ ವಿಶ್ವಕಪ್ 2018ರ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಭಾನುವಾರದ ಕ್ರೊವೇಷಿಯಾ ಮತ್ತು ಫ್ರಾನ್ಸ್ ನಡುವೆ ನಡೆಯಲಿರುವ ಫೈನಲ್ ಪಂದ್ಯ ಹಲವು ನಿರೀಕ್ಷೆಗಳನ್ನು ಹುಟ್ಟಿಹಾಕಿರುವಂತೆಯೇ ಫ್ರಾನ್ಸ್ ತಂಡದ ಕೋಚ್ ಡೈಡಿಯರ್ ದೆಶ್ಚಾಂಪ್ಸ್‌ ಹೊಸ ದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ.
ಈ ಹಿಂದೆ ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡದ ನಾಯಕರಾಗಿ ಯಶಸ್ವಿಯಾಗಿ ಮುನ್ನಡೆಸಿದ್ದ ಡೈಡಿಯರ್ ದೆಶ್ಚಾಂಪ್ಸ್‌ ಇದೀಗ ಕೋಚ್ ಆಗಿ ಮತ್ತೆ ವಿಶ್ವಕಪ್ ನಲ್ಲಿ ತಮ್ಮ ತಂಡವನ್ನು ಫೈನಲ್ ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 
1998ರಲ್ಲಿ ಫ್ರಾನ್ಸ್ ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಅಂದು ಫ್ರಾನ್ಸ್ ತಂಡದ ನಾಯಕರಾಗಿದ್ದ ಡೈಡಿಯರ್ ದೆಶ್ಚಾಂಪ್ಸ್‌ ಯಶಸ್ವಿಯಾಗಿ ಮುನ್ನಡೆಸಿದ್ದು ಮಾತ್ರವಲ್ಲದೇ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಬರೊಬ್ಬರಿ 20 ವರ್ಷಗಳ ಬಳಿಕ ಇದೇ ಡೈಡಿಯರ್ ದೆಶ್ಚಾಂಪ್ಸ್‌ ಫ್ರಾನ್ಸ್ ತಂಡದ ಕೋಚ್ ಆಗಿದ್ದು, ಇದೀಗ ಮತ್ತೆ ಫ್ರಾನ್ಸ್ ತಂಡ ವಿಶ್ವಕಪ್ ಫೈನಲ್ ಪ್ರವೇಶ ಮಾಡಿದೆ. ಇದೇ ಕಾರಣಕ್ಕಾಗಿ ಇಂದು ನಡೆಯುವ ಪೈನಲ್ ಪಂದ್ಯ ಫ್ರಾನ್ಸ್ ಪಾಲಿಗೆ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ದಾಖಲೆ ಹೊಸ್ತಿಲಲ್ಲಿ ಕೋಚ್ ಡೈಡಿಯರ್ ದೆಶ್ಚಾಂಪ್ಸ್‌
ಇನ್ನು ಇಂದಿನ ಪಂದ್ಯದಲ್ಲಿ ಫ್ರಾನ್ಸ್ ಗೆದ್ದರೆ ಕೋಚ್ ದೆಶ್ಚಾಂಪ್ಸ್‌ ನೂತನ ದಾಖಲೆ ನಿರ್ಮಾಣ ಮಾಡಲಿದ್ದಾರೆ. ಒಮ್ಮೆ ಆಟಗಾರನಾಗಿಯೂ ಮತ್ತೊಮ್ಮೆ ಕೋಚ್ ಆಗಿಯೂ ವಿಶ್ವಕಪ್ ಗೆದ್ದ ಅಪರೂಪದ ಸಾಧನೆಗೆ ಡೈಡಿಯರ್ ದೆಶ್ಚಾಂಪ್ಸ್‌ ಒಡೆಯನಾಗಲಿದ್ದಾರೆ. ಈ ಹಿಂದೆ ಮರಿಯೊ ಜಗಲೊ ಮತ್ತು ಫ್ರಾನ್ಜ್‌ ಬೆಕೆನ್‌ಬೌರ್‌ ಅವರು ಈ ಹಿಂದೆ ಇಂತಹ ಸಾಧನೆ ಮಾಡಿದ್ದಾರೆ.
SCROLL FOR NEXT